Advertisement

“ಭಾರತೀಯ ಭಾಷೆಗಳ ತಾಯಿ ಸಂಸ್ಕೃತ: ಪ್ರೊ|ರಾಜಮಣಿ ‘

12:51 PM Feb 27, 2017 | |

ಬಂಟ್ವಾಳ : ಸಂಸ್ಕೃತ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ಅದು  ಭಾರತೀಯ ಭಾಷೆಗಳ ತಾಯಿ ಸ್ಥಾನದಲ್ಲಿದೆ ಎಂದು ಪ್ರೊ| ರಾಜಮಣಿ ರಾಮಕುಂಜ ಹೇಳಿದರು.ವಾಮದಪದವು ಸರಕಾರಿ ಪದವಿ ಕಾಲೇಜಿನಲ್ಲಿ ಮಾನವಿಕ ಸಂಘ ಮತ್ತು ಬಂಟ್ವಾಳ ತಾಲೂಕು ಕ.ಸಾ.ಪ. ವತಿಯಿಂದ ಏರ್ಪಡಿಸಲಾದ ಪ್ರೊ| ಎಂ. ರಾಮಕೃಷ್ಣ ಭಟ್‌ ದತ್ತಿನಿಧಿ ಕಾರ್ಯಕ್ರಮದಲ್ಲಿ  “ಕನ್ನಡ ಸಂಸ್ಕೃತ ಭಾಷಾ ಬಾಂಧವ್ಯ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

Advertisement

ಕ.ಸಾ.ಪ. ಅಧ್ಯಕ್ಷ  ಕೆ. ಮೋಹನ ರಾವ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಬಳಸಿ ಬೆಳೆಸಬೇಕು. ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು ಎಂದರು. ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪನ್ಯಾಸಕ ಹರಿಪ್ರಸಾದ್‌ ಬಿ.ಕೆ. ಮುಖ್ಯ ಅತಿಥಿಯಾಗಿ ಮಾತನಾಡಿದರು. ಉದ್ಯಮಿ ಶ್ರೀಧರ ಪೈ ವಾಮದಪದವು, ಗೌರವ ಕಾರ್ಯದರ್ಶಿ ಬಿ.ತಮ್ಮಯ್ಯ, ಕೊಳಕೆ ಗಂಗಾಧರ ಭಟ್‌, ರಾಜಾರಾಮ ವರ್ಮ ವಿಟ್ಲ ಉಪಸ್ಥಿತರಿದ್ದರು.

ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಪದ್ಮಪ್ರಭ ಇಂದ್ರ ಸ್ವಾಗತಿಸಿ, ಸಂತೋಷ್‌ ನೆಲ್ಲಿಕಾರು  ಕಾರ್ಯಕ್ರಮ ನಿರೂಪಿಸಿದರು. ಧನ್ಯಶ್ರೀ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next