ಬೆಂಗಳೂರು: ಕಳೆದ ಯೂರೋಪ್ ಪ್ರವಾಸ ದಲ್ಲಿ ಅಜೇಯ ಸಾಧನೆಗೈದ ಆತ್ಮವಿಶ್ವಾಸದಲ್ಲಿರುವ ಭಾರತದ ಪುರುಷರ ಹಾಕಿ ತಂಡ ಮತ್ತೂಂದು ಅಮೋಘ ನಿರ್ವಹಣೆಯ ಗುರಿಯೊಂದಿಗೆ ಆರ್ಜೆಂಟೀನಾಕ್ಕೆ ಪ್ರವಾಸ ಹೊರಟಿತು.
ಮನ್‌ಪ್ರೀತ್ ಸಿಂಗ್ ನಾಯಕತ್ವದ 22 ಸದಸ್ಯರ ತಂಡ ಬುಧವಾರ ಇಲ್ಲಿಂದ ಬ್ಯೂನಸ್ ಐರಿಸ್‌ಗೆ ವಿಮಾನ ಏರಿತು. ಮನ್‌ಪ್ರೀತ್ ಒಂದು ವರ್ಷದ ಬಳಿಕ ಭಾರತ ತಂಡಕ್ಕೆ ಮರ ಳಿದ್ದು, ವಿಶ್ವದ ಅಗ್ರಮಾನ್ಯ ಹಾಗೂ ಬಲಿಷ್ಠ ತಂಡದ ವಿರುದ್ಧ ಸೆಣಸುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.
ಇದು 2021ರಲ್ಲಿ ಭಾರತದ ಹಾಕಿ ತಂಡ ಕೈಗೊಳ್ಳುತ್ತಿರುವ ಎರಡನೇ ಪ್ರವಾಸ. ಇದಕ್ಕೂ ಮೊದಲು ಜರ್ಮನಿ ಮತ್ತು ಬ್ರಿಟನ್‌ಗೆ ತೆರಳಿ ಗಮನಾರ್ಹ ಪ್ರದರ್ಶನ ನೀಡಿತ್ತು. ಆರ್ಜೆಂಟೀನಾ ವಿರುದ್ಧ ಭಾರತ 6 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಎ. 11 ಮತ್ತು 12ರಂದು ನಡೆಯುವ ಎಫ್ಐಎಚ್ ಹಾಕಿ ಪ್ರೊ ಲೀಗ್ ಪಂದ್ಯಗಳೂ ಸೇರಿವೆ.
ಒಲಿಂಪಿಕ್ಸ್‌ಗೆ ಹೊಸ ಹುರುಪು :
“ಕಳೆದ ಯೂರೋಪ್ ಪ್ರವಾಸವನ್ನು ವೈಯಕ್ತಿಕ ಕಾರಣ ಗಳಿಂದ ತಪ್ಪಿಸಿಕೊಳ್ಳಬೇಕಾಯಿತು. ಆದರೆ ಆ ಪ್ರವಾಸದಲ್ಲಿ ನಮ್ಮವರು ತೋರ್ಪಡಿಸಿದ ನಿರ್ವಹಣೆಯನ್ನು ಗಮನಿ ಸಿದ್ದೇನೆ. ಇದೇ ಲಯವನ್ನು ಕಾಯ್ದುಕೊಂಡು ಮತ್ತೂಂದು ಅಜೇಯ ಸರಣಿಯನ್ನು ಆಡುವುದು ನಮ್ಮ ಗುರಿ. ಇದರಿಂದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಹೊಸ ಹುರುಪು ಲಭಿಸಲಿದೆ’ ಎಂದು ಮನ್‌ಪ್ರೀತ್ ಸಿಂಗ್ ಹೇಳಿದರು.
ಜೂ. ವನಿತಾ ಹಾಕಿ ಮುಂದಕ್ಕೆ :
ಮತ್ತೆ ಕೋವಿಡ್-19 ಹೆಚ್ಚಿದ ಕಾರಣ 11ನೇ ಜೂನಿಯರ್ ವನಿತಾ ಹಾಕಿ ಪಂದ್ಯಾವಳಿಯನ್ನು ಮುಂದೂಡಲಾಗಿದೆ. ಹಾಕಿ ಇಂಡಿಯಾ ಬುಧವಾರ ಈ ನಿರ್ಧಾರಕ್ಕೆ ಬಂದಿತು.
ಈ ಪಂದ್ಯಾವಳಿ ಎ. 3ರಿಂದ 12ರ ತನಕ ಜಾರ್ಖಂಡ್‌ನ ಸಿಮೆxàಗಾದಲ್ಲಿ ನಡೆಯಬೇಕಿತ್ತು. ನೂತನ ದಿನಾಂಕವನ್ನು ಮತ್ತೆ ನಿರ್ಧರಿಸಲಾಗುವುದು.
ದೇಶದ 26 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆತಿಥೇಯ ಜಾರ್ಖಂಡ್ ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿತ್ತು.