ಅಹಮದಾಬಾದ್: ಗುಜರಾತ್ ಕರಾವಳಿ ಯಾಚೆ ಅರಬ್ಬೀ ಸಮುದ್ರದಲ್ಲಿ ಭಾರತೀಯ ಮೀನು ಗಾರರ ಮೇಲೆ ಪಾಕಿಸ್ಥಾನದ ನೌಕಾ ದಳವು ಗುಂಡಿನ ದಾಳಿ ನಡೆಸಿದ್ದು, ಮಹಾರಾಷ್ಟ್ರದ ಬೆಸ್ತರೊಬ್ಬರು ಅಸು ನೀಗಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಮೀನುಗಾರ ಗಾಯಗೊಂಡಿದ್ದಾರೆ.
ಶನಿವಾರ ಸಂಜೆ 4ರ ವೇಳೆಗೆ ಘಟನೆ ನಡೆದಿದೆ. 7 ಮಂದಿ ಮೀನುಗಾರರು ತಮ್ಮ ದೋಣಿಯಲ್ಲಿ ಮೀನುಗಾರಿಕೆಗೆಂದು ಗುಜರಾತ್ ಕರಾವಳಿಯಾಚೆ ತೆರಳಿದ್ದರು. ಆಗ ಅವರನ್ನು ಗುರಿಯಾಗಿಸಿಕೊಂಡು ಏಕಾಏಕಿ ಪಾಕ್ ನೌಕಾ ಭದ್ರತಾ ಸಂಸ್ಥೆಯ ಸಿಬಂದಿ ಗುಂಡು ಹಾರಿಸಿದ್ದಾರೆ. ಥಾಣೆಯವರಾದ ಶ್ರೀಧರ್ ರಮೇಶ್ ಚಾಮ್ರೆ(32) ಸ್ಥಳದಲ್ಲೇ ಮೃತಪಟ್ಟರೆ, ಮತ್ತೂಬ್ಬರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಜಗತ್ತಿನ ದೈತ್ಯ ಕಾರು ಕಂಪನಿ ಟೆಸ್ಲಾದ ಶೇ. 10ರಷ್ಟು ಷೇರು ಮಾರಾಟ?
ಗುಜರಾತ್‌ನ ಪೋರಬಂದರ್ ನವಿ ಬಂದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದರ ನಡುವೆಯೇ 6 ಮಂದಿ ಮೀನುಗಾರರನ್ನು ಪಾಕಿಸ್ಥಾನವು ಬಂಧಿಸಿದೆ ಎಂಬ ವರದಿಗಳೂ ಹರಿದಾಡಿದ್ದು, ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಭಾರತೀಯ ಕರಾವಳಿ ರಕ್ಷಣ ಪಡೆ ತಿಳಿಸಿದೆ.