Advertisement

ಭಾರತೀಯ ಎಫ್ಬಿ ಬಳಕೆದಾರ ಅಸುರಕ್ಷಿತ

07:00 AM Apr 05, 2018 | |

ಹೊಸದಿಲ್ಲಿ: ಫೇಸ್‌ಬುಕ್‌ ಬಳಕೆದಾರರ ದತ್ತಾಂಶ ರಕ್ಷಣೆ ಮಾಡುವ ಬಗ್ಗೆ ಭಾರತಕ್ಕೆ ಹೆಚ್ಚಿನ ರಕ್ಷಣೆ ಇಲ್ಲ. ಆದರೆ ಮೇ 25ರಿಂದ ಐರೋಪ್ಯ ಒಕ್ಕೂಟದ ಬಳಕೆದಾರರಿಗೆ ಕಠಿಣ ನೀತಿ ಅಳವಡಿಸಲಾಗುತ್ತದೆ ಎಂದಿದ್ದಾರೆ ಜಾಲತಾಣದ ಸಿಇಒ ಮಾರ್ಕ್‌ ಜುಕರ್‌ಬರ್ಗ್‌. ಆದರೆ ಇತರ ದೇಶಗಳಿಗೆ ಈ ನೀತಿಯಲ್ಲಿನ ಕೆಲವು ಅಂಶಗಳನ್ನು ಮಾತ್ರ ಅಳವಡಿಸಲಿದೆ. ಹೀಗಾಗಿ ಐರೋಪ್ಯ ಒಕ್ಕೂಟ ದೇಶಗಳಲ್ಲಿ ಫೇಸ್‌ಬುಕ್‌ ಬಳಕೆ ಮಾಡುವವರ ದತ್ತಾಂಶ ಹೆಚ್ಚು ಸುರಕ್ಷಿತವಾಗುತ್ತದೆ. ಈಗಾಗಲೇ ಈ ನೀತಿಯ ಬಹುತೇಕ ಅಂಶಗಳನ್ನು ಫೇಸ್‌ಬುಕ್‌ ಅಳವಡಿಸಿಕೊಂಡಿದೆ ಎಂದಿದ್ದಾರೆ.  ವಿಶ್ವದ ಇತರ ಎಲ್ಲ ದೇಶಗಳಿಗಿಂತಲೂ ಐರೋಪ್ಯ ಒಕ್ಕೂಟ ಜಾರಿಗೆ ತಂದಿರುವ ಸಾಮಾನ್ಯ ದತ್ತಾಂಶ ರಕ್ಷಣೆ ನಿಯಂತ್ರಣ (ಜಿಡಿಪಿಆರ್‌) ಹೆಚ್ಚು ಸಶಕ್ತ ವಾಗಿದ್ದು, ಇದು ಆನ್‌ಲೈನ್‌ ಬಳಕೆ ದಾರರ ದತ್ತಾಂಶಕ್ಕೆ ವ್ಯಾಪಕ ಭದ್ರತೆ ಯನ್ನು ಒದಗಿಸುತ್ತದೆ. ಯಾವ ದತ್ತಾಂಶ ವನ್ನು ವೆಬ್‌ಸೈಟ್‌ ಸಂಗ್ರಹಿಸಿದೆ ಎಂಬುದನ್ನು ಬಳಕೆದಾರರು ನೋಡಬಹುದಾಗಿದ್ದು, ಬೇಡವೆನಿಸಿದಾಗ ಅದನ್ನು ಅಳಿಸಲೂಬಹುದಾಗಿದೆ. ಈ ನೀತಿ ಅನುಸರಿಸುವಲ್ಲಿ ವಿಫ‌ಲವಾದರೆ ಕಂಪೆನಿಯು ತನ್ನ ಅದಾಯದಲ್ಲಿ ಶೇ.4ರವರೆಗೆ ದಂಡ ಕಟ್ಟಬೇಕಾಗುತ್ತದೆ. ಇದೇ ವೇಳೆ ಏ.11ರಂದು ಅಮೆರಿಕದ ಕಾಂ ಗ್ರೆಸ್‌ ಮುಂದೆ ಜುಕರ್‌ ಬರ್ಗ್‌ ಹಾಜರಾಗಲಿದ್ದಾರೆ.

Advertisement

ಕ್ಲೌಡ್‌ ವ್ಯವಸ್ಥೆಯನ್ನು ಬಳಕೆ:  ಇದೇ ವೇಳೆ, ಭಾರತದ ಹಿಂದಿನ ಚುನಾವಣೆಗಳಲ್ಲಿ ಮೈಕ್ರೋಸಾಫ್ಟ್ ಕಂಪೆನಿ ಯ ಕ್ಲೌಡ್‌ ಕಂಪ್ಯೂಟಿಂಗ್‌ ಪರಿಣಿತಿಯನ್ನು ಚುನಾ ವಣಾ ಆಯೋಗ ಬಳಸಿಕೊಂಡಿತ್ತು ಎಂದು ಮೈಕ್ರೋ ಸಾಫ್ಟ್ ಹೇಳಿಕೊಂಡಿದೆ. ಮತಗಟ್ಟೆಗಳ ಚಟುವಟಿಕೆ ಗಮನಿಸುವುದು ಸೇರಿದಂತೆ ಸೇರಿದಂತೆ ಹಲವು ಚಟು ವಟಿಕೆಗಳಲ್ಲಿ ಮೈಕ್ರೋಸಾಫ್ಟ್ನ ಕ್ಲೌಡ್‌ ಕಂಪ್ಯೂಟಿಂಗ್‌ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿದೆ. ಆದರೆ ನಮ್ಮ ದತ್ತಾಂಶ ನೀತಿಯು ಪಾರದರ್ಶಕವಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next