Advertisement

ಇರಾನ್ ಗೆ ಮುಖಭಂಗ: ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ಭಾರತದ ರಾಯಭಾರಿ ವಿದಿಶಾ ಆಯ್ಕೆ

05:09 PM Nov 07, 2020 | Nagendra Trasi |

ವಿಶ್ವಸಂಸ್ಥೆ:ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಮಹತ್ವದ ಜಯವೊಂದು ಲಭಿಸಿದ್ದು, ಭಾರತೀಯ ರಾಯಭಾರಿ ವಿದಿಶಾ ಮೈತ್ರಾ ಅವರು ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಅಯವ್ಯಯ ಪ್ರಶ್ನೆಗಳ(ಎಸಿಎಬಿಕ್ಯೂ) ಕುರಿತ ಸಲಹಾ ಸಮಿತಿಗೆ ಆಯ್ಕೆಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಏಷ್ಯಾ-ಫೆಸಿಪಿಕ್ ರಾಷ್ಟ್ರಗಳಿಂದ ವಿಶ್ವಸಂಸ್ಥೆಯ ಈ ಸಲಹಾ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಮೈತ್ರಾ ಅವರು 126 ಮತ ಪಡೆದಿರುವುದಾಗಿ ವರದಿ ಹೇಳಿದೆ.

193 ಸದಸ್ಯರನ್ನೊಳಗೊಂಡಿರುವ ಜನರಲ್ ಅಸೆಂಬ್ಲಿ, ಸಲಹಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡುತ್ತದೆ. ವಿಶಾಲ ಭೌಗೋಳಿಕವನ್ನು ಪ್ರತಿನಿಧಿಸುವ, ವೈಯಕ್ತಿಕ ಪದವಿ ಹಾಗೂ ಅನುಭವಗಳ ಆಧಾರದ ಮೇಲೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

ಏಷ್ಯಾ-ಫೆಸಿಪಿಕ್ ರಾಷ್ಟ್ರಗಳ ಕೂಟದಿಂದ ಆಯ್ಕೆಯಾದ ಇಬ್ಬರಲ್ಲಿ ಮೈತ್ರಾ ಕೂಡಾ ಒಬ್ಬರಾಗಿದ್ದಾರೆ. ಈ ಕೂಟದಲ್ಲಿ ಇರಾಕ್ ನ ಅಲಿ ಮೊಹಮ್ಮದ್ ಫಾಯೆಖ್ ಅಲ್ ದಬಾಗ್ ಸ್ಪರ್ಧಿಸಿದ್ದು, ಕೇವಲ 64 ಮತ ಪಡೆದು ಪರಾಜಯಗೊಂಡಿದ್ದಾರೆ.

ಇದನ್ನೂ ಓದಿ:ಠಾಣೆಯಲ್ಲಿ ಸತ್ಯ ಪರೀಕ್ಷೆ! ಹಸುವಿನ ನಿಜವಾದ ಮಾಲೀಕರು ಯಾರು, ಪೊಲೀಸರಿಗೆ ಗೊಂದಲ

Advertisement

ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಅಯವ್ಯಯ ಪ್ರಶ್ನೆಗಳ(ಎಸಿಎಬಿಕ್ಯೂ) ಕುರಿತ ಸಲಹಾ ಸಮಿತಿ ಮೂರು ವರ್ಷದ ಅವಧಿಯದ್ದಾಗಿದೆ. 2021ರ ಜನವರಿ 1ರಿಂದ ಮೈತ್ರಾ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

2021ರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂರಹಿತ 2 ವರ್ಷಗಳ ಅವಧಿಯ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಗೊಂಡ ಬೆನ್ನಲ್ಲೇ ಮತ್ತೊಂದು ಗೆಲುವು ಸಾಧಿಸಿದಂತಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next