Advertisement
ಸಿ.ಟಿ.ರವಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಪೊಲೀಸರ ವಿರುದ್ಧ ಕೆಂಡಾಮಂಡಲವಾದರು.
Related Articles
Advertisement
”ಕಾಂಗ್ರೆಸ್ ನವರೇನು ಪರ್ಮನೆಂಟ್ ಗಿರಾಕಿಗಳು ಅಲ್ಲ, ಮುಸ್ಲಿಮರ ಓಲೈಕೆ ಮಾಡಿ ಮಾಡಿ ಜನರು ದೇಶದಿಂದ ಓಡಿಸಿದ್ದಾರೆ. ಸಿದ್ದರಾಮಯ್ಯ ಅವರು ಔಟ್ ಗೋಯಿಂಗ್ ಸಿಎಂ. ಈಗಾಗಲೇ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ, ಅಧಿಕಾರ ಒದ್ದು ಪಡೆಯುವುದಾಗಿ” ಎಂದು ಕಿಡಿ ಕಾರಿದರು.
”ಸಿ.ಟಿ.ರವಿ ಒಬ್ಬಂಟಿ ಅಲ್ಲ ನಾವು ಜತೆಯಾಗಿ ನಿಲ್ಲುತ್ತೇವೆ. ಸಾವಿರಾರು ಕಾರ್ಯಕರ್ತರು ಜತೆಗಿದ್ದಾರೆ. ನಮ್ಮದು ಸಂಘಟನಾತ್ಮಕ ಶಕ್ತಿ ಉಳ್ಳ ಪಕ್ಷ. ಕಾಂಗ್ರೆಸ್ ರೀತಿ ಅಬ್ಬೇಪಾರಿ ಪಾರ್ಟಿ ಅಲ್ಲ. ನಾವು ಎಚ್ಚರಿಕೆ ನೀಡುತ್ತೇವೆ. ನಾವೂ ಬೀದಿಗಿಳಿದು ಹೋರಾಟ ಮಾಡುತ್ತೇವೆ. ತೀರ್ಪು ಕೊಡಲು ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ಏನು ಜಡ್ಜಾ? ಯಾರವರು?” ಎಂದು ಅಶೋಕ್ ಕಿಡಿ ಕಾರಿದರು.
”ಸಿ.ಟಿ.ರವಿ ಅವರ ಕೊಲೆ ಮಾಡಲು ಸುವರ್ಣ ಸೌಧಕ್ಕೆ 40 ಜನ ಬಂದಿದ್ದರು. ಐದು ಗಂಟೆ ಖಾನಾಪುರ ಪೊಲೀಸ್ ಠಾಣೆಯ ಹೊರಗೆ ನಮ್ಮನ್ನು ಕಾಯುವಂತೆ ಮಾಡಿದರು. ನಾನು ಗೃಹ ಸಚಿವನಾಗಿ ಕೆಲಸ ಮಾಡಿದವನು. ಒಬ್ಬರಾದ ಮೇಲೆ ಒಬ್ಬರು ಸಚಿವರು ಪೊಲೀಸರಿಗೆ ಕರೆ ಮಾಡಿ ಒತ್ತಡ ಹಾಕುತ್ತಿದ್ದರು. ತನಿಖಾಧಿಕಾರಿಗೆ ಬಿಟ್ಟು ಯಾರಿಗೂ ಅಧಿಕಾರ ಇಲ್ಲ. ಕಮಿಷನರ್ ಗೂ ಅಧಿಕಾರ ಇಲ್ಲ, ಮಂತ್ರಿಗೂ ಅಧಿಕಾರ ಇಲ್ಲ. ಅರಣ್ಯದ ಒಳಗೆ ಕರೆದುಕೊಂಡು ನಿಲ್ಲಿಸುತ್ತೀರಲ್ಲ. 500 ಕಿ.ಮೀ ಸಿ.ಟಿ.ರವಿ ಅವರನ್ನು ಅರಣ್ಯದಲ್ಲಿ ಸುತ್ತಾಡಿಸಿದರು. ಖಾನಾಪುರ ಠಾಣೆಗೆ ದೂರು ನೀಡಲು ಹೋದರೆ ನನಗೆ ಪ್ರವೇಶ ಇಲ್ಲ.ನಾನು ಸಂವಿಧಾನದತ್ತ ಹುದ್ದೆಯಲ್ಲಿದ್ದವನು. ನನಗೆ ಅಪಮಾನ ಮಾಡಿದರು. ಗುಂಡಾಗಿರಿ ಮಾಡಿದರು” ಎಂದು ಕೆಂಡಾಮಂಡಲರಾದರು.
ನಮಗೆ ಕಾನೂನು ತಜ್ಞರ ಜತೆ ಚರ್ಚೆ ಮಾತನಾಡಲು ಹಕ್ಕಿದೆ. ಅದಕ್ಕೆ ಅಡ್ಡಿ ಮಾಡಲು ಅವಕಾಶ ಇಲ್ಲ. ಯಾರು ಶಿಕ್ಷೆ ಕೊಡಬೇಕು ಎನ್ನುವುದು ತೀರ್ಮಾನವಾಗಬೇಕು. ನಮಗೆ ಕಾನೂನಿನಲ್ಲಿ ನಂಬಿಕೆ ಇದೆ. ಸಭಾಧ್ಯಕ್ಷರು ತಪ್ಪು ಎಂದು ತೀರ್ಪು ಕೊಡಬೇಕು, ಅವರು ದೂರು ನೀಡಬೇಕು, ಬಳಿಕ ಆರೋಪ ಸಾಬೀತಾದ ಮೇಲೆ ಜಡ್ಜ್ ತೀರ್ಪು ನೀಡಬೇಕು’ ಎಂದರು.
ಇನ್ನಷ್ಟು ಹೋರಾಟ
ತೀವ್ರವಾಗಿ ಬಳಲಿಲ್ಲ ಸಿ.ಟಿ.ರವಿ ಮಾತನಾಡಿ ”ಪೊಲೀಸ್ ಠಾಣೆಯ ಪರಿಧಿಗೆ ಬಾರದ ಪ್ರಕರಣದಲ್ಲಿ ಬಂಧಿಸಿ ನಾಲ್ಕು ಜಿಲ್ಲೆ, 11 ಗಂಟೆಗೂ ಹೆಚ್ಚು ಕಾಲ ಅಲೆದಾಡಿಸಿ ಮಾನಸಿಕವಾಗಿ ಕುಗ್ಗಿಸಿ, ದೈಹಿಕ ಹಲ್ಲೆ ಮಾಡುವುದನ್ನು ಕಾಂಗ್ರೆಸ್ ಸರಕಾರ ಪೊಲೀಸ್ ಬಲ ಉಪಯೋಗಿಸಿ ಮಾಡಿದೆ. ಎಲ್ಲ ನಾಯಕರು, ಸಾಮಾನ್ಯ ಕಾರ್ಯಕರ್ತರು ಜತೆಯಲ್ಲಿ ನಿಂತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸತ್ಯಮೇವ ಜಯತೆ ಅನ್ನುವುದನ್ನು ನಾನು ಹೇಳಿದ್ದೇನೆ . ನಾನು ಹೋರಾಟದ ಮೂಲಕ ಬಂದವನು. 35 ವರ್ಷಗಳ ಹಿಂದೆ ಇಂತಹದ್ದು ಅನುಭವಿಸಿದ್ದೇನೆ. ಈ ರೀತಿ ಮಾಡಿದರೆ ಜನರ ಪರ ಇನ್ನಷ್ಟು ಹೋರಾಟ ಮಾಡಲು ಶಕ್ತಿ ನೀಡುತ್ತದೆ. ಮುಂದಿನ ವಿಚಾರ ನಿಧಾನಕ್ಕೆ ಹೇಳುತ್ತೇನೆ” ಎಂದರು.