Advertisement

UV Fusion: ಸಂಸ್ಕೃತಿಯ ಸೊಗಡು

12:28 PM Oct 02, 2023 | Team Udayavani |

ಮನೆಯ ಸಂಸ್ಕೃತಿಯಲ್ಲಿ ಮಕ್ಕಳ ಸಂಸ್ಕಾರ ಅಡಗಿರುತ್ತದೆ ಎಂಬ ಸಾಲನ್ನು ಕವಿತ್ತ ಕರ್ಮಮಣಿಯವರು ನಮ್ಮ ಸಂಸ್ಕೃತಿಯನ್ನು ಮುತ್ತಿನ ಮಣಿಯನ್ನು ಪೋಣಿಸಿದಂತೆ ಸಂಸ್ಕೃತಿಯನ್ನು ವರ್ಣಿಸಿದ್ದಾರೆ. ಆದರೆ ಅದು ಇಂದು ಕೇವಲ ಸಾಲು ಆಗಿಯೇ ಉಳಿದಿದೆ. ನಮ್ಮ ಭಾರತೀಯ ಧರ್ಮ ಆಚಾರ ವಿಚಾರಗಳನ್ನು ರೂಪಿಸುವಲ್ಲಿ ದೊಡ್ಡ ಅಬ್ಬರವನ್ನು ಹೊಂದಿದೆ.

Advertisement

ಭಾರತದ ಸಂಪ್ರದಾಯ ಮತ್ತು ಸಂಸ್ಕತಿಯು ಹಲವಾರು ವರ್ಷಗಳ ಹಿಂದೆ ಹುಟ್ಟಿಕೊಂಡಿದ್ದು ಮತ್ತು ಎಲ್ಲ ದೇಶಗಳು ಹಿಂದೆ ತಿರುಗಿ ನೋಡುವಂತೆ ಸಂಸ್ಕೃತಿಯು ಒಂದು ಒಂದು ಕಾಲದಲ್ಲಿ ಬೆಳೆದು ನಿಂತಿತ್ತು. ಇದಕ್ಕೆ ನಮ್ಮ ದೇಶದ ಪೂರ್ವಜರೇ ಬುನಾದಿ ಎಂದು ಹೇಳಬಹುದು. ಹಾಗಾಗಿ ನಮ್ಮ ನಾಡಿನಲ್ಲಿ ಸಂಸ್ಕೃತಿಯ ಶಿಖರವೇ ರೂಪುಗೊಂಡಿತ್ತು.

ಬಹುಶಃ ಈ ಕಾರಣದಿಂದಲೇ ಶತ ಶತಮಾನಗಳಿಂದ ಇಲ್ಲಿಯವರೆಗೆ ಬೆಳೆದುಕೊಂಡು ಬಂದಿರಬೇಕು. ಆದರೆ ಇಂದಿನ ಸನ್ನಿವೇಶದಲ್ಲಿ ಅದು ನಮಗೆ ತಿಳಿಯದೆ ಕಣ್ಣೆದುರಿಗೆ ಮಾಯವಾಗುತ್ತಿದೆ. ನಾಡಿನ ಪ್ರತಿ ಪ್ರದೇಶದಲ್ಲಿ ವಿಭಿನ್ನ ಶೈಲಿಯ ಸಂಸ್ಕತಿಯನ್ನು ನೋಡುತ್ತಿದ್ದೇವೆ ಆದರೆ ಅದು ಪೂಜಿಸುವ ಕ್ರಮ ಬೇರೆ ಆದರೂ ಸಂಸ್ಕೃತಿಯ ಮೇಲೆ ಇದ್ದ ಗೌರವ ಒಂದೇ ಆಗಿರುತ್ತಿತ್ತು. ಹಿಂದೆ ಪ್ರತಿಯೊಂದು ವಿಷಯದಲ್ಲೂ ನಮ್ಮ ಸಂಸ್ಕೃತಿಯು ಪ್ರಜ್ವಲಿಸುತ್ತಿತ್ತು. ಇಂದು ಕೇವಲ ನಾಡು ಬೆಳೆಯುತ್ತಿದೆ ಸಂಸ್ಕೃತಿಯು ಕ್ಷೀಣಿಸುತ್ತಿದೆ.

ಇಂದು ಸಂಸ್ಕೃತಿಗೆ ಪ್ರಾಮುಖ್ಯತೆಯನ್ನು ನೀಡುವ ಬದಲು ವ್ಯವಹಾರಕ್ಕೆ ಒತ್ತು ನೀಡುತ್ತಿದ್ದಾರೆ. ಹಾಗಾಗಿ ಸಂಸ್ಕೃತಿಯು ಮಾಸಿ ಹೋಗುತ್ತಿದೆ. ಅಂದು ದೇವಾಲಯಕ್ಕೆ ಹೋಗುವಾಗ ಒಂದು ಹೆಣ್ಣು ಆದವಳು ಹಣೆಗೆ ಕುಂಕುಮ,ಕೈಗೆ ಬಲೆ, ತಲೆಯ ಕೂದಲನ್ನು ಮುಡಿ ಕಟ್ಟಿ ಅದಕ್ಕೆ ಒಂದು ತುಂಡು ಹೂವನ್ನು ಮುಡಿದು ಸೀರೆಯನ್ನು ಧರಿಸಿಕೊಂಡು ತುಂಬಾ ಲಕ್ಷಣವಾಗಿ ಅಲಂಕಾರವನ್ನು ಮಾಡಿಕೊಂಡು ಹೋಗುತ್ತಿದ್ದರು. ಹಾಗಾಗಿ ಹೆಣ್ಣನ್ನು ದೇವರ ಪ್ರತಿಕ ಎಂದು ಗೌರವಿಸುತ್ತಿದ್ದರು.

ಆದರೆ ಇಂದು ಹಾಗಿಲ್ಲ. ಅದೇ ರೀತಿ ಗಂಡಸರು ಪಂಚೆಯನ್ನು ಧರಿಸುವ ಬದಲು ಹರಿದ ಪ್ಯಾಂಟ್‌ ಹಾಕಿಕೊಂಡು ದೇವರ ದರ್ಶನಕ್ಕೆ ಹೋಗುವುದನ್ನು ನಮ್ಮ ಕಣ್ಣೆದುರು ಕಾಣುತ್ತಿವೆ. ಅಂದು ಭಕ್ತಿ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಿದ್ದರು. ಇಂದಿನ ಆಧುನಿಕತೆಗೆ ಪ್ರಾಧಾನ್ಯತೆ. ಅದೇ ರೀತಿ ಭಜನೆಯನ್ನು ಮಾಡಿದರೆ ಸಂಬಂಧಗಳು ವಿಭಜನೆಯಾಗುವುದಿಲ್ಲ ಎಂಬ ನಂಬಿಕೆಯನ್ನುಹಿರಿಯರು ಇಟ್ಟುಕೊಂಡಿದ್ದರು.

Advertisement

ಹಾಗಾಗಿ ಸಂಜೆ ಹೊತ್ತಿಗೆ ಪ್ರತಿಯೊಬ್ಬರ ಮನೆಯಲ್ಲಿ ಭಜನೆಯ ನಾದಸ್ವರಗಳು ಕೇಳಿ ಬರುತ್ತಿತ್ತು. ಆದರೆ ಇಂದು ಭಜನೆಯು ಮೊಬೈಲ್‌ ನಲ್ಲಿ ಅಥವಾ ಸೌಂಡ್‌ ಸಿಸ್ಟಮ್‌ ನಲ್ಲಿ ಇಡುವ ಸನ್ನಿವೇಶವನ್ನು ನೋಡುತ್ತಿದ್ದೇವೆ. ಹಬ್ಬಗಳು ಒಂದೊಂದು ವಿಶೇಷವಾದ ಪದ್ಧತಿಯೊಂದಿಗೆ ಅದರದ್ದೇ ಆದ ಆಚಾರ-ವಿಚಾರದೊಂದಿಗೆ ಮಹತ್ವವನ್ನು ಮತ್ತು ಎಲ್ಲರೂ ಖುಷಿಯಿಂದ ಸಂಸ್ಕೃತಿಯ ಚೌಕಟ್ಟಿನಲ್ಲಿ ಹಬ್ಬಗಳನ್ನು ಅಂದೂ ಆಚರಿಸುತಿದ್ದರು.

ಆದರೆ ಇಂದು ಹಬ್ಬಗಳು ಮನೋರಂಜನೆಯ ಶೋಕಿಗೆ ಬೇಕಾಗಿ ಆಚರಿಸುತ್ತಿದ್ದಾರೆ. ಏನೇ ಆಗಲಿ ರಾಷ್ಟ್ರದ ಸಂಸ್ಕೃತಿಯು ಪ್ರತಿಯೊಬ್ಬ ಜನರ ಹೃದಯ ಮತ್ತು ಆತ್ಮದಲ್ಲಿ ನೆಲೆಸಲಿ ಹಾಗೆಯೇ ಸಂಪತ್‌ ಭರಿತ ರಾಷ್ಟ್ರದೊಂದಿಗೆ ಸಂಪತ್‌ ಭರಿತ ಸಂಸ್ಕತಿಯು ಬೆಳೆಯಲಿ. ಹಾಗಾಗಿ ಸಂಸ್ಕತಿಯನ್ನು ಬೆಳೆಸಿ ಉಳಿಸುವ ಪ್ರಯತ್ನವನ್ನು ಮಾಡಬೇಕಾಗಿದೆ.

-ವೆನಿತ್‌ ಮುಕ್ಕೂರು,

ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next