ಲಂಡನ್: ಕ್ರಿಕೆಟ್ ಸರಣಿಗಾಗಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಇಂದು ಲಂಡನ್ ಗೆ ತೆರಳಿದೆ. ಮಹಿಳಾ ತಂಡವು ಆತಿಥೇಯರ ವಿರುದ್ಧ ಮೂರು ಮಾದರಿ ಸರಣಿ ಆಡಿದೆ, ಪುರುಷರ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ.
ಲಂಡನ್ ಗೆ ಬಂದಿಳಿದ ತಂಡ ಅಲ್ಲಿಂದ ಸೌಥಂಪ್ಟನ್ ಗೆ ಪ್ರಯಾಣ ಬೆಳೆಸಿದೆ. ಉಭಯ ತಂಡಗಳು ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್ ವಾಸ ಮುಗಿಸಿ, ಕೋವಿಡ್ ಪರೀಕ್ಷೆಗೆ ಒಳಪಟ್ಟು ಲಂಡನ್ ವಿಮಾನ ಹತ್ತಿದ್ದರು. ಇದೀಗ ಸೌಥಂಪ್ಟನ್ ನಲ್ಲಿ ಕ್ವಾರಂಟೈನ್ ಗೆ ಒಳಪಡಬೇಕಿದೆ. ಈ ಸಮಯದಲ್ಲೂ ಕೋವಿಡ್ ಪರೀಕ್ಷೆಗೆ ತಂಡ ಒಳಪಡಲಿದೆ.
ಇದನ್ನೂ ಓದಿ:ಒಂದು ವಾರ ಲಾಕ್ ಡೌನ್ ವಿಸ್ತರಿಸಿ, ತಲಾ 10 ಸಾವಿರ ಪರಿಹಾರ ಘೋಷಿಸಿ: ಕುಮಾರಸ್ವಾಮಿ
ವಿರಾಟ್ ಬಳಗ ನ್ಯೂಜಿಲ್ಯಾಂಡ್ ವಿರುದ್ಧ ಜೂನ್ 18ರಂದು ಸೌಥಂಪ್ಟನ್ ನ ಏಜಸ್ ಬೌಲ್ ಅಂಗಳದಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯವಾಡಲಿದೆ. ನಂತರ ಸುಮಾರು 40 ದಿನಗಳ ಬ್ರೇಕ್ ನ ಬಳಿಕ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಆಡಲಿದೆ.
ವನಿತೆಯರ ತಂಡ ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯವಾಡಲಿದೆ. ಈ ಸರಣಿ ಜೂನ್ 16ರಿಂದ ಆರಂಭವಾಗಲಿದೆ.