ಹೊಸದಿಲ್ಲಿ: ಭಾರತದ ಕ್ರಿಕೆಟಿಗರು ಸಾಮಾನ್ಯವಾಗಿ ಪದಕ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಆರೋಪವಿದೆ. ಇದು ಮುಂದಿನ ಏಶ್ಯಾಡ್‌ನಲ್ಲೂ ನಿಜವಾಗುವ ಸಾಧ್ಯತೆ ಇದೆ.
ಸೆಪ್ಟಂಬರ್‌ನಲ್ಲಿ ನಡೆಯುವ ಹಾಂಗ್‌ಝೂ ಏಶ್ಯಾಡ್‌ನಲ್ಲಿ ಕ್ರಿಕೆಟ್ ಪದಕ ಕ್ರೀಡೆಯಾಗಿ ಮರಳಲಿದೆ. ಆದರೆ ಬಿಸಿಸಿಐ ಮೂಲದ ಪ್ರಕಾರ ಭಾರತದ ಎರಡೂ ತಂಡಗಳು ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ.
ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಇದಕ್ಕೂ ಮುಂಚಿನ ಏಶ್ಯಾಡ್‌ನಲ್ಲಿ ಆಡಿ ಆಟ ಗಾರರೇನಾದರೂ ಗಾಯಾಳಾದರೆ ವಿಶ್ವಕಪ್‌ಗೆ ತೊಂದರೆಯಾದೀತು, ಹೀಗಾಗಿ ರಿಸ್ಕ್ ಬೇಡ ಎಂಬುದು ಬಿಸಿಸಿಐ ಮುಂದಾಲೋಚನೆ.
ಇನ್ನೊಂದೆಡೆ ವನಿತಾ ಕ್ರಿಕೆಟಿಗರು ಇದೇ ವೇಳೆ ಇಂಗ್ಲೆಂಡ್‌ನಲ್ಲಿ ಪೂರ್ವ ನಿಗದಿಯಂತೆ ಸರಣಿ ಆಡಲಿದ್ದಾರೆ. ಆದರೆ ವನಿತೆಯರು ಇದೇ ವರ್ಷದ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.