Advertisement

ದುಬಾೖ ತಲುಪಿದ ಭಾರತೀಯ ಬಾಕ್ಸಿಂಗ್‌ ತಂಡ : ಲ್ಯಾಂಡಿಂಗ್‌ ಎರಡು ಗಂಟೆ ವಿಳಂಬ

11:21 PM May 22, 2021 | Team Udayavani |

ದುಬಾೖ: ಎಂ.ಸಿ. ಮೇರಿ ಕೋಮ್‌, ಅಮಿತ್‌ ಪಂಘಲ್‌ ಅವರನ್ನೊಳಗೊಂಡ ಭಾರತೀಯ ಬಾಕ್ಸಿಂಗ್‌ ತಂಡ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ದುಬಾೖಗೆ ಆಗಮಿಸಿದೆ. ಆದರೆ ಕೊರೊನಾ ಪಾಸಿಟಿವ್‌ ಫ‌ಲಿತಾಂಶ ಹೊಂದಿರುವ ವಿನೋದ್‌ ತನ್ವರ್‌ (49 ಕೆ.ಜಿ.) ಕೂಟದಿಂದ ಬೇರ್ಪಟ್ಟಿದ್ದಾರೆ.

Advertisement

ವಿಶೇಷ “ಏರ್‌ ಬಬಲ್‌ ವಿಮಾನ’ದಲ್ಲಿ ಭಾರತ ತಂಡ ಪ್ರಯಾಣಿಸಿತ್ತು. ಆದರೆ ಆಡಳಿತಾತ್ಮಕ ಪ್ರಕ್ರಿಯೆಯಿಂದಾಗಿ ವಿಮಾನದ ಲ್ಯಾಂಡಿಂಗ್‌ ಎರಡು ಗಂಟೆಗಳಷ್ಟು ಕಾಲ ವಿಳಂಬಗೊಂಡಿತು. ಸುಮಾರು ಒಂದು ಗಂಟೆ ಹೊತ್ತು ಆಕಾಶದಲ್ಲೇ ಸುತ್ತಾಡಿತು. ಯುಎಇಯ ಭಾರತೀಯ ರಾಯಭಾರ ಕಚೇರಿ ಈ ಸಮಸ್ಯೆಯನ್ನು ಬಗೆಹರಿಸಿದ ಬಳಿಕವಷ್ಟೇ ವಿಮಾನ ಲ್ಯಾಂಡಿಂಗ್‌ ಆಯಿತು. ಇದಕ್ಕಾಗಿ ಬಾಕ್ಸಿಂಗ್‌ ಫೆಡರೇಶನ್‌ ಆಫ್ ಇಂಡಿಯಾ ರಾಯಭಾರ ಕಚೇರಿಗೆ ಕೃತಜ್ಞತೆ ಸಲ್ಲಿಸಿದೆ.

ಪಂದ್ಯಾವಳಿ ಸೋಮವಾರದಿಂದ ಆರಂಭವಾಗಲಿದ್ದು, ರವಿವಾರ ಡ್ರಾ ನಡೆಯಲಿದೆ. ಒಲಿಂಪಿಕ್ಸ್‌ಗೆ ಸಜ್ಜಾಗಿರುವ ಬಾಕ್ಸರ್ ಮುಂದಿರುವ ಕೊನೆಯ ದೊಡ್ಡ ಕೂಟ ಇದಾಗಿದೆ. ಭಾರತ, ಇಂಡೋನೇಶ್ಯ, ಇರಾನ್‌, ಕಜಾಕ್‌ಸ್ಥಾನ್‌, ದಕ್ಷಿಣ ಕೊರಿಯಾ, ಕಿರ್ಗಿಸ್ಥಾನ್‌, ಫಿಲಿಪ್ಪೀನ್ಸ್‌ ಮತ್ತು ಉಜ್ಬೆಕಿಸ್ಥಾನ್‌ ಬಾಕ್ಸರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ :ಸಿಐಟಿಯು ನೇತೃತ್ವದಲ್ಲಿ ಭಿತ್ತಿಪತ್ರ ಹಿಡಿದು ಶ್ರಮಜೀವಿಗಳ ಆಕ್ರೋಶ

ಭಾರತ 2019ರ ಆವೃತ್ತಿಯ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. 2 ಚಿನ್ನ ಸೇರಿದಂತೆ 13 ಪದಕಗಳನ್ನು ಜಯಿಸಿತ್ತು.

Advertisement

ವಿನೋದ್‌ ತನ್ವರ್‌ ಪಾಸಿಟಿವ್‌
23 ವರ್ಷದ ವಿನೋದ್‌ ತನ್ವರ್‌ ಸೇಂಟ್‌ ಪೀಟರ್ ಬರ್ಗ್‌ ಕೂಟವೊಂದರಲ್ಲಿ ಪಾಲ್ಗೊಂಡು ಕಳೆದ ವಾರವಷ್ಟೇ ಪಟಿಯಾಲಾದ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಆಗ ನಡೆಸಲಾದ ಕೊರೊನಾ ಟೆಸ್ಟ್‌ ವೇಳೆ ತನ್ವರ್‌ ಫ‌ಲಿತಾಂಶ ಪಾಸಿಟಿವ್‌ ಬಂದಿದ್ದು, ಏಶ್ಯನ್‌ ಚಾಂಪಿಯನ್‌ಶಿಪ್‌ನಿಂದ ಇವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಬಾಕ್ಸಿಂಗ್‌ ಫೆಡರೇಶನ್‌ ಆಫ್ ಇಂಡಿಯಾ ತಿಳಿಸಿದೆ. ಹೀಗಾಗಿ ಮೊದಲ ಸಲ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶ ಇವರಿಗೆ ತಪ್ಪಿತು.

2019ರ ಸೌತ್‌ ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಹಿರಿಮೆ ತನ್ವರ್‌ ಅವರದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next