Advertisement

ವರ್ಷಾಂತ್ಯಕ್ಕೆ ಭಾರತೀಯ ಬಾಕ್ಸಿಂಗ್‌ ಲೀಗ್‌ ಪಂಚ್‌

03:45 AM Mar 02, 2017 | Team Udayavani |

ನವದೆಹಲಿ: ಭಾರತದಲ್ಲಿ ಈಗಾಗಲೇ ಕ್ರಿಕೆಟ್‌, ಕಬಡ್ಡಿ, ಬ್ಯಾಡ್ಮಿಂಟನ್‌, ಕುಸ್ತಿ, ಹಾಕಿ, ಫ‌ುಟ್ಬಾಲ್‌ ಲೀಗ್‌ಗಳು ಆರಂಭವಾಗಿ ಯಶಸ್ಸಿನತ್ತ ಸಾಗುತ್ತಿವೆ. ಈ ಸಾಲಿಗೆ ಪ್ರಸಕ್ತ ವರ್ಷದಿಂದ ಬಾಕ್ಸಿಂಗ್‌ ಲೀಗ್‌ ಕೂಡ ಸೇರ್ಪಡೆಯಾಗುತ್ತಿದೆ.

Advertisement

ಹೌದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಬಾಕ್ಸಿಂಗ್‌ ಸಂಸ್ಥೆಯ (ಬಿಎಫ್ಐ) ಅಧ್ಯಕ್ಷ ಅಜಯ್‌ ಸಿಂಗ್‌, 2020 ಟೋಕಿಯೋ ಒಲಿಂಪಿಕ್ಸ್‌ ಹಿನ್ನಲೆಯಲ್ಲಿ ಭಾರತದಲ್ಲಿ 2017ರ ಅಂತ್ಯದಲ್ಲಿ ಬಾಕ್ಸಿಂಗ್‌ ಲೀಗ್‌ ಆರಂಭವಾಗಲಿದೆ. ನಮ್ಮದೇ ಬಾಕ್ಸಿಂಗ್‌ ಲೀಗ್‌ ಆರಂಭಿಸುವುದರಿಂದ ಯುವ ಬಾಕ್ಸರ್‌ಗಳಿಗೆ ನೆರವಾಗಲಿದೆ. ವಿದೇಶಿ ಬಾಕ್ಸರ್‌ಗಳ ಜತೆ ಕಾದಾಡುವ ಅವಕಾಶ ಸಿಗಲಿದೆ. ಇದು ಭಾರತಕ್ಕೆ ನೆರವಾಗಲಿದೆ ಎಂದು ತಿಳಿಸಿದ್ದಾರೆ. ಬರುವ ನವೆಂಬರ್‌ನಲ್ಲಿ ಮಹಿಳಾ ಯುವ ಬಾಕ್ಸಿಂಗ್‌ ವಿಶ್ವಚಾಂಪಿಯನ್‌ಶಿಪ್‌ ಭಾರತದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next