Advertisement

ವನಿತಾ ವಿಶ್ವ ಬಾಕ್ಸಿಂಗ್‌: ಎಡವಿದ ಸೋನಿಯಾ ಚಾಹಲ್‌

06:25 AM Nov 25, 2018 | Team Udayavani |

ನವದೆಹಲಿ: ಫೈನಲ್‌ ಪ್ರವೇಶಿಸಿ ಚಿನ್ನದ ಪದಕ ಭರವಸೆ ಮೂಡಿಸಿದ್ದ 21 ವರ್ಷದ ಸೋನಿಯಾ ಚಾಹಲ್‌ 4-1 ಅಂಕಗಳಿಂದ ಜರ್ಮನಿಯ ಒರೆ°ಲಾ ಗ್ಯಾಬ್ರಿಲೆ ವಿರುದ್ಧ ಸೋಲುಂಡರು. ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರಿಗೆ ದೊರಕಿದ ಮೊದಲ ಪದಕ ಎನ್ನುವುದು ವಿಶೇಷ.

Advertisement

ಜರ್ಮನಿ ಆಟಗಾರ್ತಿ ಅನುಭವದ ಎದುರು ಸೋನಿಯಾ ಪರದಾಟ ನಡೆಸಿದರು. ಆಕ್ರಮಣಕಾರಿ ಪಂಚಿಂಗ್‌ ಮೂಲಕ ಭಾರತ ಆಟಗಾರ್ತಿಯ ಬೆವರಿಳಿಸಿದರು ಗ್ಯಾಬ್ರಿಲೆ. ಸೋನಿಯಾ ಮೂಲತಃ ಹರ್ಯಾಣದ ಭೈವಾನಿ ಜಿಲ್ಲೆಯವರು. 2011ರಲ್ಲಿ ಸೋನಿಯಾ ಬಾಕ್ಸಿಂಗ್‌ ಜೀವನಕ್ಕೆ ಕಾಲಿಟ್ಟರು. 14 ವರ್ಷದವರಿದ್ದಾಗಲೇ ಅವರು ಶಾಲಾ ಮತ್ತು ಸಬ್‌ ಜೂನಿಯರ್‌ ಮಟ್ಟದಲ್ಲಿ ಪದಕ ಗೆದ್ದು ಗಮನ ಸೆಳೆದಿದ್ದರು. 2016ರಲ್ಲಿ ಮೊದಲ ಸಲ ಹಿರಿಯರ ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್‌ ಕೂಟದಲ್ಲಿ ಪದಕ ಗೆದ್ದು ಗಮನ ಸೆಳೆದಿದ್ದರು.
ಒಲಿಂಪಿಕ್ಸ್‌ನತ್ತ ಗಮನಹರಿಸುವೆ: ನನ್ನ ಕೈಯಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಿದೆ. ಜರ್ಮನಿ ಆಟಗಾರ್ತಿ ನನಗಿಂತ ಚೆನ್ನಾಗಿ ಆಡಿದರು. ಚಿನ್ನ ಕೈತಪ್ಪಿದ್ದಕ್ಕೆ ನನಗೆ ಬೇಸರವಿಲ್ಲ. ಬೆಳ್ಳಿಯಲ್ಲಿ ಸಂತೋಷ ಕಂಡಿದ್ದೇನೆ. ನನ್ನ ಸೋಲಿಗೆ ಕಾರಣ ಏನು ಎನ್ನುವುದನ್ನು ಪರಾಮರ್ಶಿಸುವೆ. ತಪ್ಪನ್ನು ಸರಿಮಾಡಿಕೊಂಡು 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕೂಟಕ್ಕೆ ಸಜ್ಜಾಗುವೆ ಎಂದು ಸೋನಿಯಾ ಪಂದ್ಯದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next