Advertisement

LACಗೆ ಭೀಷ್ಮ ; ಚೀನಕ್ಕೆ ಪ್ರತ್ಯುತ್ತರ ನೀಡಲು 6 ಟ್ಯಾಂಕರ್‌

02:28 AM Jul 01, 2020 | Hari Prasad |

ಲಡಾಖ್: ಭಾರತ – ಚೀನ ನಡುವಣ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತೀಯ ಸೇನೆ ತನ್ನ ಬಲವರ್ಧನೆಯನ್ನು ಮುಂದುವರಿಸಿದ್ದು, ಗಾಲ್ವಾನ್‌ ಕಣಿವೆಯಲ್ಲಿ ಆರು ‘ಟಿ-90 ಭೀಷ್ಮ’ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದೆ.

Advertisement

ರಷ್ಯಾ ನಿರ್ಮಿತ ಅತಿ ಸುಧಾರಿತ ಟ್ಯಾಂಕರ್‌ ಇದು. ಭೀಷ್ಮನ ರಿಲಿಕ್ಟ್ ಸದೃಢ ರಕ್ಷಾಕವಚ ಕ್ಷಿಪಣಿ ದಾಳಿಗೂ ಅಭೇದ್ಯ.

48 ಟನ್‌ ತೂಕದ ಭೀಷ್ಮ ಕಣಿವೆ-ಬೆಟ್ಟಗಳ ದಾರಿಯಲ್ಲಿ ಸಾಗಬಲ್ಲ ಬಲಶಾಲಿ. 9.63 ಮೀ. ಉದ್ದ, 3.73 ಮೀ. ಅಗಲ, 2.22 ಮೀ. ಎತ್ತರದ ದೈತ್ಯ. ಇನ್ವಾರ್‌ ಆ್ಯಂಟಿ ಟ್ಯಾಂಕರ್‌ ಕ್ಷಿಪಣಿ  ಹಾರಿಸಬಲ್ಲ ಯುದ್ಧ ಪಟು. ಟಿ-90 ಭೀಷ್ಮ ಟ್ಯಾಂಕರ್‌ನ 12.8 ಎಂ.ಎಂ. ಮೆಷಿನ್‌ ಗನ್ನನ್ನು ರಿಮೋಟ್‌ ಮೂಲಕವೇ ಚಲಾಯಿಸಬಹುದಾಗಿದೆ. ಭೀಷ್ಮ 2001ರಿಂದ ನಮ್ಮ ಭೂಸೇನೆಗೆ ಬಲ ತುಂಬಿದ್ದಾನೆ.

ಇನ್ನೊಂದೆಡೆ ಎಲ್‌ಎಸಿ ಉದ್ದಕ್ಕೆ ಭೂಸೇನೆಯ ಟ್ಯಾಂಕರ್‌ ನಿಯೋಜಿಸಲಾಗಿದೆ. ಎಲ್ಲ ಕಡೆ ಭೂಸೇನೆಯ ಯುದ್ಧ ವಾಹನ ನಿಯೋಜಿಸಲಾಗಿದೆ. ಇವು 155 ಎಂ.ಎಂ. ಹೊವಿಟ್ಜರ್‌ ಶೆಲ್‌ಗ‌ಳನ್ನು ಸಮರ್ಥವಾಗಿ ಉಡಾಯಿಸಬಲ್ಲವು.

ಇಸ್ರೇಲ್‌ನಿಂದ ಬರಲಿವೆ ಇನ್ನಷ್ಟು ಸ್ಪೈಸ್‌ ಬಾಂಬ್‌
ಚೀನ ಜತೆಗಿನ ಗಡಿ ತಿಕ್ಕಾಟದ ನಡುವೆಯೇ ಭಾರತೀಯ ಸೇನೆಯು ತನ್ನ ಬಲವರ್ಧನೆ ಆರಂಭಿಸಿದ್ದು, ಇಸ್ರೇಲ್‌ ನಿಂದ ಇನ್ನಷ್ಟು ಸ್ಪೈಸ್‌-2000 ಬಾಂಬ್‌ ಖರೀದಿಸಲು ಮುಂದಾಗಿದೆ. ಪಾಕಿಸ್ಥಾನದ ಬಾಲಾಕೋಟ್‌ನಲ್ಲಿ ನಡೆಸಿದ ದಾಳಿಯ ವೇಳೆ ಭಾರತೀಯ ವಾಯು ಪಡೆ ಇದೇ ಬಾಂಬ್‌ಗಳನ್ನು ಬಳಸಿತ್ತು.

Advertisement

ಆ್ಯಪ್‌ ನಿಷೇಧಕ್ಕೆ ಚೀನ ತಬ್ಬಿಬ್ಬು
ಟಿಕ್‌ಟಾಕ್‌ ಸೇರಿದಂತೆ 59 ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ಕ್ರಮಕ್ಕೆ ಚೀನ ತಬ್ಬಿಬ್ಟಾಗಿದೆ. ಟಿಕ್‌ಟಾಕ್‌ ಭಾರತೀಯ ಕಾನೂನಿನಡಿಯಲ್ಲಿ ಡೇಟಾ ಗೌಪ್ಯತೆ ಮತ್ತು ಭದ್ರತಾ ನೀತಿಗಳನ್ನು ಅನುಸರಿಸುತ್ತಲೇ ಬಂದಿದೆ. ನಮ್ಮ ಬಳಕೆದಾರರ ಯಾವ ಮಾಹಿತಿಯನ್ನೂ ನಾವು ಚೀನ ಸರಕಾರ ಅಥವಾ ವಿದೇಶಿ ಸರಕಾರಗಳ ಜತೆ ಹಂಚಿಕೊಂಡಿಲ್ಲ ಎಂದು ಟಿಕ್‌ಟಾಕ್‌ ಇಂಡಿಯಾದ ಮುಖ್ಯಸ್ಥ ನಿಖೀಲ್‌ ಗಾಂಧಿ ಸಮಜಾಯಿಷಿ ನೀಡಿದ್ದಾರೆ.

ಇನ್ನೊಂದೆಡೆ ಚೀನದ ವಿದೇಶಾಂಗ ಇಲಾಖೆ, ಆ್ಯಪ್‌ಗಳಿಗೆ ನಿರ್ಬಂಧ ಹೇರಿರುವ ಭಾರತ ಸರಕಾರದ ಕ್ರಮದ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಅಂತಾರಾಷ್ಟ್ರೀಯ ಬಂಡವಾಳ ಹೂಡಿಕೆದಾರರ ಹಿತಾಸಕ್ತಿಗಳನ್ನು ಭಾರತ ಕಾಯಬೇಕು ಎಂದು ಚೀನ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್‌ ಹೇಳಿದ್ದಾರೆ.

ಟಿಕ್‌ಟಾಕ್‌ ಆಟ ಸಂಪೂರ್ಣ ಬಂದ್‌!
ಭಾರತದಲ್ಲಿ ಟಿಕ್‌ಟಾಕ್‌ ಆಟ ಸಂಪೂರ್ಣ ಸ್ಥಗಿತಗೊಂಡಿದೆ. 59 ಆ್ಯಪ್‌ಗಳಿಗೆ ನಿಷೇಧದ ಮುದ್ರೆ ಬಿದ್ದ 24 ತಾಸುಗಳ ಒಳಗೆ ಚೀನೀ ಟಿಕ್‌ಟಾಕ್‌ನ ಸದ್ದಡಗಿದೆ. ನಿಷೇಧವಾದ ಕೆಲವು ತಾಸುಗಳವರೆಗೆ ಅದು ಸಕ್ರಿಯವಾಗಿತ್ತು. ಆದರೆ ಈಗ ಬಳಕೆದಾರರಿಗೆ ನೆಟ್‌ವರ್ಕ್‌ ಎರರ್‌ ಸಂದೇಶ ತೋರಿಸುತ್ತಿದೆ.

‘ಪ್ರಿಯ ಬಳಕೆದಾರರೆ, ನಾವು ಭಾರತ ಸರಕಾರ ಆದೇಶಿಸಿರುವ 59 ಆ್ಯಪ್‌ ಗಳ ನಿರ್ಬಂಧದ ಅಡಿಯಲ್ಲಿದ್ದೇವೆ. ಭಾರತದಲ್ಲಿ ನಮ್ಮ ಎಲ್ಲ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷೆ ಕಾಪಾಡುವುದು ನಮ್ಮ ಪ್ರಮುಖ ಆದ್ಯತೆ’ ಎಂಬ ಸಂದೇಶವನ್ನು ಟಿಕ್‌ಟಾಕ್‌ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next