Advertisement
ಚಿಂಗಾಣಿ ಗುಡ್ಡೆಯಲ್ಲಿ ಒಂದು ಶುದ್ಧೀ ಕರಣ ಟ್ಯಾಂಕ್ ಹಾಗೂ ಇನ್ನೊಂದು ನೀರು ತುಂಬುವ ಟ್ಯಾಂಕ್ ನಿರ್ಮಾಣಗೊಂಡಿದೆ. ಪಂಜ ಸಮೀಪದ ಕುಮಾರಧಾರ ನದಿಯಿಂದ ಜಾಕ್ವೆಲ್ ಮೂಲಕ ನೀರನ್ನು ಚಿಂಗಾಣಿಗುಡ್ಡೆಗೆ ಪೂರೈಸುವ ಯೋಜನೆ ರೂಪಿಸಲಾಗಿತ್ತು. ಆದರೆ ಎತ್ತರಕ್ಕೆ ನೀರು ಹತ್ತಲು ಸಾಧ್ಯವಾಗದೇ ನೀರು ಇಷ್ಟು ವರ್ಷ ಟ್ಯಾಂಕ್ಗೆ ಸರಬರಾಜು ಆಗಿರಲಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿತ್ತು.
Related Articles
– ಜಿನ್ನಪ್ಪ ಗೌಡ, ಸ್ಥಳೀಯರು
Advertisement
ಲೋಕಾಯುಕ್ತಕ್ಕೂ ದೂರುಚಿಂಗಾಣಿಗುಡ್ಡೆ ಟ್ಯಾಂಕ್ ಉಪಯೋಗಕ್ಕೆ ದೊರಕದೆ ಇರುವ ಬಗ್ಗೆ ಉದಯವಾಣಿ ಸಹಿತ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೆ ಇಲ್ಲಿ ಸಾಮಾಜಿಕ ಕಾರ್ಯಕರ್ತ ಜಿನ್ನಪ್ಪ ಗೌಡ ಆಳ್ಪೆ ಅವರು ಸಂಬಂಧಿಸಿದವರು ಹಾಗೂ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. ಇದೀಗ ಟ್ಯಾಂಕ್ ನಿರ್ಮಾಣಗೊಂಡು ಹಲವು ವರ್ಷ ಆಗಿರುವುದರಿಂದ ಟ್ಯಾಂಕ್ನ ಸದ್ಯದ ಗುಣಮಟ್ಟ, ಸಾಮರ್ಥ್ಯ ಪರೀಕ್ಷೆ ಆಗಲಿ ಎಂದೂ ಜನರು ಒತ್ತಾಯಿಸಿದ್ದಾರೆ. ಮನೆ ಮನೆಗೆ ನೀರು ನಿರೀಕ್ಷೆ
ಈಗ ಟ್ಯಾಂಕ್ವರೆಗಿನ ಪೈಪ್ಲೈನ್, ಅಲ್ಲಿಂದ ಮನೆಗೆ ಮನೆಗೆ ಪೈಪ್ಲೈನ್ ಕಾಮಗಾರಿ ನಡೆದಿದೆ. ಇದರ ನಡುವೆ ಟ್ಯಾಂಕ್ ಬಳಿ ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದು, ಅದು ಮುಗಿದ ಮೇಲೆ ಮನೆ ಮನೆಗೆ ನೀರು ಸರಬರಾಜು ಆಗುವ
ನಿರೀಕ್ಷೆ ಇದೆ. -ದಯಾನಂದ ಕಲ್ನಾರ್