ಹೊಸದಿಲ್ಲಿ : ಕಳೆದ ಶನಿವಾರ ಪಾಕ್ ಸೇನೆ ಗಡಿ ಕದನ ವಿರಾಮ ಉಲ್ಲಂಘನೆ ಮಾಡಿ ನಾಲ್ವರು ಭಾರತೀಯ ಯೋಧರನ್ನು ಕೊಂದದ್ದಕ್ಕೆ ಸೇಡು ತೀರಿಸಲು ಭಾರತೀಯ ಸೇನಾ ಪಡೆ ನಿನ್ನೆ ಸೋಮವಾರ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಮೂವರು ಪಾಕ್ ಸೈನಿಕರನ್ನು ಹತ್ಯೆಗೈದಿತು.
ಸೇಡಿನ ಈ ದಾಳಿಯಲ್ಲಿ ಒಬ್ಬ ಪಾಕ್ ಸೈನಿಕ ಗಂಭೀರವಾಗಿ ಗಾಯಗೊಂಡ ಎಂದು ಸೇನಾ ಮೂಲಗಳನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ. ಆದರೂ ಈ ಘಟನೆ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.
ಕಳೆದ ಡಿ.23ರ ಶನಿವಾರ ಓರ್ವ ಭಾರತೀಯ ಸೇನಾ ಮೇಜರ್ ಸಹಿತ ನಾಲ್ಕು ಯೋಧರು ಪಾಕ್ ಗುಂಡಿನ ಮತ್ತು ಶೆಲ್ ದಾಳಿಗೆ ಹುತಾತ್ಮರಾಗಿದ್ದರು. ಜಮ್ಮು ಕಾಶ್ಮೀರದ ರಾಜೋರಿ ಜಿಲ್ಲೆಯ ಎಲ್‌ಓಸಿಯಲ್ಲಿ ಪಾಕ್ ಸೇನೆಯಿಂದ ಈ ದಾಳಿ ನಡೆದಿತ್ತು.
ಪಾಕ್ ದಾಳಿಗೆ ಹುತಾತ್ಮರಾಗಿದ್ದ ಮೇಜರ್ ಅವರನ್ನು 32ರ ಹರೆಯದ ಮೇಜರ್ ಮೋಹರ್‌ಕರ್ ಪ್ರಫುಲ್ಲ ಅಂಬಾದಾಸ್ ಎಂದು ಗುರುತಿಸಲಾಗಿದ್ದು ಇವರು ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯವರು; 120 ಇನ್‌ಫ್ಯಾಂಟ್ರಿ ಬ್ರಿಗೇಡ್‌ಗೆ ಸೇರಿದವರು. ಇವರು ಪತ್ನಿ ಅವೋಳಿ ಮೋಹರ್‌ಕರ್ ಅವರನ್ನು ಅಗಲಿದ್ದಾರೆ.
ಹುತಾತ್ಮರಾಗಿದ್ದ ಇತರ ಯೋಧರೆಂದರೆ 34ರ ಹರೆಯದ ಲ್ಯಾನ್ಸ್ ನಾಯಕ್ ಗುರ್‌ವೆುàಲ್ ಸಿಂಗ್, ಅಮೃತ್‌ಸರ, ಪಂಜಾಬ್, (ಪತ್ನಿ ಕುಲಜಿತ್ ಕೌರ್ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ) 30ರ ಹರೆಯದ ಸಿಪಾಯ್ ಪರ್ಗತ್ ಸಿಂಗ್, ಕರ್ನಾಲ್, ಹರಿಯಾಣ (ಪತ್ನಿ ರಮಣ್‌ಪ್ರೀತ್ ಕೌರ್ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ).