Advertisement

ರತನ್‌ ಲಾಲ್‌ಗೆ ಕೃಷಿ ನೊಬೆಲ್‌

12:23 AM Jun 13, 2020 | Sriram |

ಹೊಸದಿಲ್ಲಿ/ ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕದ ಮಣ್ಣು ವಿಜ್ಞಾನಿ ಡಾ| ರತನ್‌ ಲಾಲ್‌ ಅವರನ್ನು ಈ ವರ್ಷದ ವಿಶ್ವ ಆಹಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದು ಕೃಷಿ ಕ್ಷೇತ್ರದ ನೊಬೆಲ್‌ ಪುರಸ್ಕಾರ ಎಂದೇ ಮಾನ್ಯವಾಗಿದೆ.

Advertisement

ಭಾರತೀಯ ಶಾಸ್ತ್ರ, ಪುರಾಣಗಳಿಂದ ಸ್ಫೂರ್ತಿ ಪಡೆದು ಮಣ್ಣಿನ ಗುಣಮಟ್ಟ ಸಂರಕ್ಷಣೆಗಾಗಿ ಡಾ| ಲಾಲ್‌ ರೂಪಿಸಿದ ಮಾದರಿಗಳು ಸಣ್ಣ ರೈತರಿಗೆ ವರದಾನವಾಗಿವೆ. ಇವರ ಸಲಹೆಗಳು ಜಾಗತಿಕ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಮಹತ್ತರ ನೆರವು ನೀಡಿರುವುದನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಹಿಂದೆ 1987ರಲ್ಲಿ ದೇಶದ ಹಸುರು ಕ್ರಾಂತಿಯ ಹರಿಕಾರ ಡಾ| ಎಂ.ಎಸ್‌. ಸ್ವಾಮಿನಾಥನ್‌ ಈ ಪ್ರಶಸ್ತಿಗೆ ಭಾಜನರಾಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next