Advertisement

ನಾಸಾಕ್ಕೆ ಹಂಗಾಮಿ ಮುಖ್ಯಸ್ಥೆಯಾಗಿ ಭವ್ಯಾ ಲಾಲ್‌ ನೇಮಕ

07:22 PM Feb 02, 2021 | Team Udayavani |

ವಾಷಿಂಗ್ಟನ್‌: ಇಂಡೋ- ಅಮೆರಿಕನ್‌ ವಿಜ್ಞಾನಿ ಭವ್ಯಾ ಲಾಲ್‌ ಅವರು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಕ್ಕೆ ನೂತನ ಹಂಗಾಮಿ ಮುಖ್ಯಸ್ಥರಾಗಿ ಸೋಮವಾರ ನೇಮಕಗೊಂಡಿದ್ದಾರೆ.

Advertisement

ನಾಸಾದಲ್ಲಿ ಅವರು ಆಯವ್ಯಯ ಮತ್ತು ಹಣಕಾಸು ವಿಭಾಗಕ್ಕೆ ಹಿರಿಯ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ವೈಟ್‌ಹೌಸ್‌ ಬಳಗದ ಟ್ರಾನ್ಸಿಷನ್‌ ರಿವ್ಯೂ ಟೀಮ್‌ನಲ್ಲಿ ಭವ್ಯಾ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೆ, ಭದ್ರತಾ ವಿಶ್ಲೇಷಣೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಂಸ್ಥೆಯ (ಎಸ್‌ಟಿಪಿಐ) ಸಂಶೋಧನಾ ವಿಭಾಗದಲ್ಲಿ 2005-2020ರವರೆಗೆ ಸೇವೆ ಸಲ್ಲಿಸಿದ ಅಪಾರ ಅನುಭವವೂ ಇವರಿಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು ಕಾಫಿ ಮಂಡಳಿ ಕಚೇರಿ ಮುಚ್ಚಲು ಬೆಳೆಗಾರರ ವಿರೋಧ 

Advertisement

Udayavani is now on Telegram. Click here to join our channel and stay updated with the latest news.

Next