Advertisement

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

07:33 PM Nov 02, 2024 | Team Udayavani |

ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ನೂತನ ಅಧ್ಯಕ್ಷರು ತಿರುಮಲದಲ್ಲಿ ಹಿಂದೂ ಸಿಬಂದಿ ಮಾತ್ರ ನೀತಿಗೆ ಒಲವು ತೋರಿದ್ದಾರೆ, ಆದರೆ ಕೇಂದ್ರದ ಎನ್‌ಡಿಎ ಸರಕಾರವು ಮುಸ್ಲಿಮೇತರರನ್ನು ವಕ್ಫ್ ಮಂಡಳಿಗಳಲ್ಲಿ ಸೇರಿಸಲು ಬಯಸಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶನಿವಾರ(ನ2) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

Advertisement

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪೋಷಕರಿಗೆ ಹೆಚ್ಚು ಮಕ್ಕಳನ್ನು ಹೊಂದುವ ಕುರಿತು ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಿ, ಓವೈಸಿ ಎಲ್ಲಾದರೂ ಅದೇ ಮಾತನ್ನು ಹೇಳಿದ್ದರೆ “ಜನಸಂಖ್ಯೆಯ ಜಿಹಾದ್” ಮಾಡುತ್ತಿದ್ದಾನೆ ಎಂದು ನನ್ನನ್ನು ದೂಷಿಸುತ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.

ಟಿಟಿಡಿ ಅಧ್ಯಕ್ಷರು ಎಲ್ಲಾ ನೌಕರರು ಹಿಂದೂಗಳಾಗಿರಬೇಕು ಎಂದು ಹೇಳುತ್ತಾರೆ. ಆಯುಕ್ತರು ಸೇರಿದಂತೆ ಎಲ್ಲಾ ನೌಕರರು ಹಿಂದೂ ಧರ್ಮದವರಾಗಿರಬೇಕು ಎಂದು ಕಾಶಿ ವಿಶ್ವನಾಥ್ ಮಂಡಳಿ ಹೇಳಿದೆ ಎಂದು ಅಸಮಾಧಾನ ಹೊರಹಾಕಿ ಮೋದಿ ಸರಕಾರವು ಮುಸ್ಲಿಮೇತರರನ್ನು ವಕ್ಫ್ ಮಂಡಳಿ ಸದಸ್ಯರನ್ನಾಗಿ ಮಾಡಲು ಏಕೆ ಬಯಸುತ್ತಿದೆ ಎಂದು ಪ್ರಶ್ನಿಸಿದರು.

ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ವಿಂಗಡಣೆಯನ್ನು ನಡೆಸಿದರೆ ದಕ್ಷಿಣ ಭಾರತಕ್ಕೆ ಹಾನಿಯಾಗುತ್ತದೆ ಎಂದು ಓವೈಸಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next