Advertisement

ಐಎಎಫ್ ಗೆ ದೇಸೀ ಬಲ; ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗೆ ಒಪ್ಪಿಗೆ: ಚೌಧರಿ ಘೋಷಣೆ

12:36 AM Oct 09, 2022 | Team Udayavani |

ಚಂಡೀಗಢ: ಭಾರತೀಯ ವಾಯುಪಡೆ (ಐಎಎಫ್) ಯ ಅಧಿಕಾರಿಗಳಿಗಾಗಿ ವಿಶೇಷವಾಗಿರುವ ಶಸ್ತ್ರಾಸ್ತ್ರ ಮತ್ತು ತರಬೇತಿ ವ್ಯವಸ್ಥೆಯನ್ನು ಹೊಂದಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರ ಜತೆಗೆ ಮುಂದಿನ ವರ್ಷದಿಂದ ಮಹಿಳಾ ಅಗ್ನಿವೀರರನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ವಿ.ಆರ್‌.ಚೌಧರಿ ಹೇಳಿದ್ದಾರೆ.

Advertisement

ಚಂಡೀಗಢದಲ್ಲಿ ಶನಿವಾರ ಆಯೋಜಿಸಲಾಗಿದ್ದ ಐಎಎಫ್ ಗೆ 90ನೇ ವಾರ್ಷಿಕ ದಿನ ಕಾರ್ಯ ಕ್ರಮದಲ್ಲಿ ಅವರು ಪರೇಡ್‌ ವೀಕ್ಷಿಸಿ ಮಾತ ನಾ ಡಿದ್ದಾರೆ. “ಹೊಸ ವ್ಯವಸ್ಥೆ ಯಿಂ ದಾಗಿ ಐಎಎಫ್ ಗೆ 3,400 ಕೋಟಿ ರೂ. ಉಳಿತಾಯವಾಗ ಲಿದೆ. ಬದಲಾಗಿರುವ ಬಹುಸ್ತರೀಯ ಯುದ್ಧ ತಂತ್ರಕೌಶಲ ಬಳಕೆ ಮಾಡುವ ಈ ದಿನಮಾನಗಳಲ್ಲಿ ಹೊಂದಿಕೊಳ್ಳುವ, ಸದೃಢವಾದ ಮತ್ತು ಅನಗತ್ಯ ನಿಯಂತ್ರಣ ವ್ಯವಸ್ಥೆ ಇಲ್ಲದಿರುವ ವ್ಯವಸ್ಥೆಯೇ ಪ್ರಧಾನವಾಗಿ ಬೇಕಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

ಮೊದಲ ಬಾರಿಗೆ: ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ಹೊಸತಾಗಿ ಶಸ್ತ್ರಾಸ್ತ್ರ ಮತ್ತು ತರಬೇತಿ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ವಿ.ಆರ್‌.ಚೌಧರಿ ಹೇಳಿದ್ದಾರೆ. ನೆಲದಿಂದ ನೆಲಕ್ಕೆ, ನೆಲದಿಂದ ಬಾಹ್ಯಾಕಾಶಕ್ಕೆ ನಗೆಯುವ ಕ್ಷಿಪಣಿಗಳು, ದೂರನಿಯಂತ್ರಿತ ವಿಮಾನಗಳ ನಿರ್ವಹಣೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಈ ವಿಭಾಗ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಯಾವುದೇ ಒಂದು ಸೇನೆಯ ವಿಭಾಗ ತನ್ನದೇ ಆಗಿ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಐಎಎಫ್ ಮುಖ್ಯಸ್ಥರು, “ಸೇನೆಯ ಮೂರು ವಿಭಾಗಗಳಿಗೆ ಅನ್ವಯವಾಗುವಂತೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ.

ಆತ್ಮನಿರ್ಭರತೆಗೆ ಆದ್ಯತೆ: ಮುಂದಿನ ದಿನಗಳಲ್ಲಿ ಆತ್ಮನಿರ್ಭರತೆಯನ್ನು ಭಾರತೀಯ ವಾಯುಪಡೆ ಯಲ್ಲಿ ಅನುಷ್ಠಾನಗೊಳಿಸಲು ಆದ್ಯತೆ ನೀಡಲಾಗುತ್ತದೆ ಎಂದು ವಿ.ಆರ್‌.ಚೌಧರಿ ಹೇಳಿದ್ದಾರೆ. ಐಎಎಫ್ ಗೆ ಕಾರ್ಯನಿರ್ವಹಣೆಯಲ್ಲಿಯೂ ಬದಲಾವಣೆ ಯಾಗಲಿದೆ ಎಂದು ಹೇಳಿದ ಅವರು, ಡಿಸೆಂಬರ್‌ನಲ್ಲಿ 3 ಸಾವಿರ ಮಂದಿ “ಅಗ್ನಿವೀರ ವಾಯು’ ಸಿಬಂದಿಯನ್ನು ಸೇರ್ಪಡೆ ಮಾಡಲಾಗುತ್ತದೆ. ಈ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುತ್ತದೆ. ಇದ ಜತೆಗೆ ಐಎಎಫ್ ನಲ್ಲಿ ಶೇ.10ಮಂದಿ ಮಹಿಳಾ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.

Advertisement

ಈ ಅಂಶ ಸವಾಲಿನದ್ದು ಎಂದು ಹೇಳಿದ ಐಎಎಫ್ ಮುಖ್ಯಸ್ಥ “ದೇಶದ ಯುವ ಸಮುದಾಯಕ್ಕೆ ಐಎಎಫ್ ನಲ್ಲಿ ಸೇವೆ ಸಲ್ಲಿಸಲು ಹೊಸ ಅವಕಾಶ ಸಿಗುವಂತಾಗಲಿದೆ’ ಎಂದರು.

ಡ್ರೋನ್‌ಗಳ ಆವಿಷ್ಕಾರ ಯುದ್ಧ ತಂತ್ರದಲ್ಲಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದೆ ಎಂದು ಹೇಳಿದ ಅವರು, ಹೈಪರ್‌ ಸಾನಿಕ್‌ ಶಸ್ತ್ರಾಸ್ತ್ರಗಳ ಮೂಲಕ ಯುದ್ಧದ ಭಾಷ್ಯವೇ ಬದಲಾಗಿದೆ ಎಂದರು.

ಇದೇ ಮೊದಲು: ಇದೇ ಮೊದಲ ಬಾರಿಗೆ ಹೊಸದಿಲ್ಲಿಯಿಂದ ಹೊರಗೆ ಐಎಎಫ್ ನ ವಾರ್ಷಿಕ ದಿನದ ಕಾರ್ಯಕ್ರಮವನ್ನು ಚಂಡೀಗಢದಲ್ಲಿ ಆಯೋಜಿಸಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಐಎಎಫ್ ನ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು. ಐಎಎಫ್ ನ ಯುದ್ಧ ವಿಮಾನಗಳಿಂದ ಮೈ ನವಿರೇಳಿಸುವ ಸಾಹಸ ಪ್ರದರ್ಶನವೂ ನಡೆಯಿತು.

ಐಎಎಫ್ ಯೋಧರಿಗೆ ಟಿ -ಶರ್ಟ್‌
ಇದೇ ಕಾರ್ಯಕ್ರಮದಲ್ಲಿ ಐಎಎಫ್ ಯೋಧರಿಗೆ ಹೊಸ ಸಮವಸ್ತ್ರವನ್ನು ಪರಿಚಯಿಸಲಾಯಿತು. ಡಿಜಿಟಲ್‌ ಸಾಧನಗಳನ್ನೂ ಮರೆ ಮಾಚುವಂಥ ಸಾಮರ್ಥ್ಯ ಇರುವ ಸಮವಸ್ತ್ರವನ್ನು ಯೋಧರಿಗಾಗಿ ಸಿದ್ಧಪಡಿಸಲಾಗಿದೆ. ಇದೇ ಮೊದಲ ಬಾರಿಗೆ ವಾಯುಪಡೆ ಯೋಧರಿಗೆ ಟಿ-ಶರ್ಟ್‌ಗಳನ್ನೂ ಸಮವಸ್ತ್ರದ ಭಾಗವನ್ನಾಗಿಸಲಾಗಿದೆ. ನೂತನ ಶೈಲಿಯ ಬೂಟುಗಳು, ಬೆಲ್ಟ್, ಟೋಪಿ, ಟರ್ಬನ್‌ಗಳು ಈಗ ಪರಿಚಯಿಸಲಾಗಿರುವ ಸಮವಸ್ತ್ರದಲ್ಲಿದೆ. ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಹೊಸ ಸಮವಸ್ತ್ರದ ವಿನ್ಯಾಸವನ್ನು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next