Advertisement

ರಫೇಲ್‌ ಸ್ವಾಗತಕ್ಕೆ ಅಂಬಾಲ ಸನ್ನದ್ಧ ; ಇಂದು 5 ಫೈಟರ್‌ಜೆಟ್‌ಗಳ ಆಗಮನ

03:18 AM Jul 29, 2020 | Hari Prasad |

ಹೊಸದಿಲ್ಲಿ: ಫ್ರಾನ್ಸ್‌ನಿಂದ 7,634 ಕಿ.ಮೀ. ದೂರ ಕ್ರಮಿಸಿ ಭಾರತಕ್ಕೆ ಆಗಮಿಸುತ್ತಿರುವ 5 ರಫೇಲ್‌ ಯುದ್ಧ ವಿಮಾನಗಳನ್ನು ಸ್ವಾಗತಿಸಲು ಹರಿಯಾಣದ ಅಂಬಾಲ ವಾಯುನೆಲೆ ಸಂಪೂರ್ಣ ಸಿದ್ಧವಾಗಿದೆ.

Advertisement

ಫ್ರೆಂಚ್‌ ವಾಯುಯಾನ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್‌ ಕಾರ್ಖಾನೆ ನಿರ್ಮಿಸಿದ ಫೈಟರ್‌ ಜೆಟ್‌ಗಳು ದಕ್ಷಿಣ ಫ್ರಾನ್ಸ್‌ನ ಬೋರ್ಡಾಕ್ಸ್‌ ನಗರದ ಮೆರಿಗ್ನಾಕ್‌ ವಾಯು ನೆಲೆಯಿಂದ 7 ತಾಸಿನ ಪ್ರಯಾಣ ಮುಗಿಸಿ, ಮಂಗಳವಾರ ಯುಎಇಯ ಅಲ್‌ದಾಫ್ರಾ ನೆಲೆಯಲ್ಲಿ ಸುರಕ್ಷಿತವಾಗಿ ಇಳಿದಿವೆ.

ಆಗಸದಲ್ಲಿಯೇ ಇಂಧನ: ಫ್ರಾನ್ಸ್‌ನಿಂದ ಹೊರಟು ಯುಎಇಯ ಅಲ್‌-ಧಫ್ರಾ ವಾಯು ನೆಲೆಯಲ್ಲಿ ವಿಶ್ರಾಂತಿಗಾಗಿ ತಂಗಿದ್ದ ರಫೇಲ್‌ ಪೈಲಟ್‌ಗಳು ಮಂಗಳವಾರ ಅಲ್ಲಿಂದ ಅಂಬಾಲದತ್ತ ಪ್ರಯಾಣ ಶುರು ಮಾಡಿದ್ದಾರೆ.

ಮಾರ್ಗ ಮಧ್ಯೆಯೇ 30 ಸಾವಿರ ಅಡಿ ಎತ್ತರದಲ್ಲಿ ಯುದ್ಧ ವಿಮಾನಗಳಿಗೆ ಇಂಧನ ಪೂರೈಸಲಾಗಿದೆ. ಭಾರತದ ಮಟ್ಟಿಗೆ ಇದೊಂದು ಮಹತ್ವದ ಸಾಧನೆಯೇ ಆಗಿದೆ.

ಫ್ರಾನ್ಸ್‌ನ ವಾಯುಪಡೆಯ ನೆರವಿನ ಜತೆಯಲ್ಲಿ ಇಂಧನ ಪೂರೈಸಲಾಗಿದೆ. ಭಾರತೀಯ ವಾಯುಪಡೆ ಈ ಫೋಟೋಗಳನ್ನು ಟ್ವೀಟ್‌ ಮಾಡಿದ್ದು, ವೈರಲ್‌ ಆಗಿದೆ.

Advertisement

ಅಧಿಕೃತವಾಗಿ ಐ..ಎ.ಎಫ್.ಗೆ ಯುದ್ಧ ವಿಮಾನಗಳನ್ನು ಸೇರ್ಪಡೆಗೊಳಿಸುವ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ವಾಯು ಸೇನೆಯ ಹೊಸ ಶಕ್ತಿ ‘ರಫೇಲ್’ ಗೆ ಆಗಸದಲ್ಲೇ ಇಂಧನ ಭರ್ತಿ!


ಬಿಗಿಭದ್ರತೆ: ಅಂಬಾಲ ವಾಯುನೆಲೆ ಸುತ್ತಮುತ್ತಲಿನ 3 ಕಿ.ಮೀ. ಪ್ರದೇಶವನ್ನು ‘ಡ್ರೋನ್‌ರಹಿತ ವಲಯ’ ಎಂದು ಘೋಷಿಸಲಾಗಿದೆ. ಭದ್ರತಾ ವ್ಯವಸ್ಥೆ ಉಲ್ಲಂಘಿಸಿದ ಯಾರೇ ಆದರೂ ಕಠಿನ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಂಬಾಲ ಕಂಟೋನ್ಮೆಂಟ್‌ ಡಿಎಸ್ಪಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಭಾರತದ ರಫೇಲ್‌ v/s ಚೀನದ J-11: ಯಾರದ್ದು ಸ್ಟ್ರಾಂಗ್ – ಇಲ್ಲಿದೆ ಡಿಟೇಲ್ಸ್

ಸಂಪೂರ್ಣ ಫಿಟ್‌
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರಫೇಲ್‌ ಫೈಟರ್‌ ಜೆಟ್‌ಗಳನ್ನು ಚಲಾಯಿಸಲು ಭಾರತೀಯ ಪೈಲಟ್‌ಗಳಿಗೆ ಫ್ರಾನ್ಸ್‌ ತರಬೇತಿ ನೀಡುತ್ತಿದೆ. ಪ್ರಸ್ತುತ 5 ರಫೇಲ್‌ಗ‌ಳಿಗಾಗಿ 12 ಪೈಲಟ್‌ಗಳು ಸಂಪೂರ್ಣ ತರಬೇತಿ ಪಡೆದಿದ್ದಾರೆ. ಮತ್ತಷ್ಟು ಪೈಲಟ್‌ಗಳು ಫ್ರೆಂಚ್‌ ವಾಯುನೆಲೆಗಳಲ್ಲಿ ತರಬೇತಿ ಮುಂದುವರಿಸಿದ್ದಾರೆ.



ಇದನ್ನೂ ಓದಿ: 7 ಸಾವಿರ ಕಿ.ಮೀ ಹಾರಾಟದ ಮೂಲಕ ಭಾರತಕ್ಕೆ ಆಗಮಿಸ್ತಿದೆ 5 ರಾಫೆಲ್ ಯುದ್ಧ ವಿಮಾನ

Advertisement

Udayavani is now on Telegram. Click here to join our channel and stay updated with the latest news.

Next