Advertisement
ಅದರಲ್ಲೂ ಈ ದುರಂತ ಸಂಭವಿಸಿದ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ನಾಯಕ ನಟ ಕಮಲ್ ಹಾಸನ್ ಅವರನ್ನು ಈ ಘಟನೆ ಬಹುವಾಗಿ ಕಾಡುತ್ತಿದೆಯಂತೆ. ಈ ಕುರಿತಾಗಿ ಕಮಲ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಪ್ರೊಡಕ್ಷನ್ ಸ್ಥಾಪಕಾಧ್ಯಕ್ಷರಾಗಿರುವ ಸುಭಾಸ್ಕರನ್ ಅವರಿಗೆ ಬರೆದಿರುವ ಪತ್ರವೊಂದು ಇದೀಗ ಟ್ವಿಟ್ಟರ್ ನಲ್ಲೂ ಹರಿದಾಡುತ್ತಿದೆ.
ಫೆಬ್ರವರಿ 19ರ ದುರಂತ ಘಟನೆಯ ಕುರಿತಾಗಿ ಲೈಕಾ ಪ್ರೊಡಕ್ಷನ್ ಮುಖ್ಯಸ್ಥರಿಗೆ ಕಮಲ್ ಬರೆದಿರುವ ಪತ್ರದಲ್ಲಿ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಬಹುದಾಗಿರುವ ಅವಘಡಗಳಿಗೆ ಸೂಕ್ತ ಮುಂಜಾಗರುಕತಾ ಕ್ರಮಗಳನ್ನು ವಹಿಸುವಂತೆ ಹಾಗೂ ಶೂಟಿಂಗ್ ಯೂನಿಟ್ ಸಿಬ್ಬಂದಿಗಳಿಗೆ ಸರಿಯಾದ ರೀತಿಯ ವಿಮೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಕುರಿತಾದಂತೆ ಕಮಲ್ ವಿವರವಾಗಿ ಬರೆದುಕೊಂಡಿದ್ದಾರೆ. ‘ಘಟನೆ ನಡೆದ ಸಂದರ್ಭದಲ್ಲಿ ನಾನು ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದೆ, ಇಲ್ಲದಿದ್ದರೆ ಈ ದುರ್ಘಟನೆಯ ಸಂತ್ರಸ್ತರಲ್ಲಿ ನಾನೂ ಒಬ್ಬನಾಗಿರುತ್ತಿದ್ದೆ. ಈ ದುರ್ಘಟನೆ ಭೀಕರತೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮತ್ತು ಈ ಘಟನೆಯಲ್ಲಿ ಸಂತ್ರಸ್ತರಾದವರಿಗೆ ಪರಿಹಾರವನ್ನು ನಿಡಿದ ಮಾತ್ರಕ್ಕೆ ನಮ್ಮ ಜವಾಬ್ದಾರಿ ಮುಕ್ತಾಯಗೊಳ್ಳಬಾರದು. ಒಂದು ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಹಲವರು ಕೆಲಸ ಮಾಡುತ್ತಾರೆ, ಅವರೆಲ್ಲರ ಭದ್ರತೆ ಮತ್ತು ಜೀವರಕ್ಷಣೆಗೆ ನಿರ್ಮಾಣ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯ.’ ಎಂದು 65 ವರ್ಷ ಪ್ರಾಯದ ನಟ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.
Related Articles
Advertisement
ಶೂಟಿಂಗ್ ಸಂದರ್ಭದಲ್ಲಿ ಲೈಟಿಂಗ್ ವ್ಯವಸ್ಥೆಗಾಗಿ ಅಳವಡಿಸಲಾಗಿದ್ದ ಬೃಹತ್ ಕ್ರೇನೊಂದು ಉರುಳಿಬಿದ್ದು ಮೂವರು ಶೂಟಿಂಗ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದರು ಹಾಗೂ ಒಂಭತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಕಮಲ್ ಹಾಸನ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಸಿದ್ದಾರ್ಥ್ ಮತ್ತು ಪ್ರಿಯಾ ಭವಾನಿ ಶಂಕರ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ‘ಇಂಡಿಯನ್-2’ ಚಿತ್ರವನ್ನು ಎಸ್. ಶಂಕರ್ ಅವರು ನಿರ್ದೇಶಿಸುತ್ತಿದ್ದು, 1996ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಇಂಡಿಯನ್’ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಈ ಚಿತ್ರ 2021ರಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.