ಇಂಧೋರ್: ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ವಿಜಯದ ನಾಗಾಲೋಟ ಮುಂದುವರಿಸಿರುವ ವಿರಾಟ್ ಪಡೆ ಮತ್ತೊಂದು ಭರ್ಜರಿ ಸಾಧಿಸಿದೆ.
ಪ್ರವಾಸಿ ಬಾಂಗ್ಲಾ ವಿರುದ್ದದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 130 ರನ್ ಅಂತರದಿಂದ ಗೆದ್ದುಕೊಂಡಿದೆ.
ಮೊದಲ ಇನ್ನಿಂಗ್ಸ್ ನ 343 ರನ್ ಹಿನ್ನಡೆಯೊಂದಿಗೆ ಇಂದು ಕಣಕ್ಕಿಳಿದ ಬಾಂಗ್ಲಾ ತಂಡ ಕೇವಲ 213 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಅನುಭವಿ ಆಟಗಾರ ಮುಶ್ಫಿಕರ್ ರಹೀಂ ಹೊರತುಪಡಿಸಿ ಬೇರಾವ ಆಟಗಾರನು ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ರಹೀಂ 64 ರನ್ ಮಾಡಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು. ಉಳಿದಂತೆ ವಿಕೆಟ್ ಕೀಪರ್ ಲಿಟನ್ ದಾಸ್ 35, ಮೆಹದಿ ಹಸನ್ 38 ರನ್ ಗಳಿಸಿದರು.
ಭಾರತದ ಪರ ವೇಗಿ ಶಮಿ ನಾಲ್ಕು ವಿಕೆಟ್ ಕಿತ್ತರೆ, ಗ್ರೀನ್ ಪಿಚ್ ನಲ್ಲೂ ಅದ್ಭುತ ಸ್ಪಿನ್ ಮಾಡಿದ ಅಶ್ವಿನ್ ಮೂರು ವಿಕೆಟ್ ಪಡೆದರು. ಯಾದವ್ ಎರಡು ಮತ್ತು ಇಶಾಂತ್ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್ ಕಾರ್ಡ್
ಬಾಂಗ್ಲಾ ಮೊದಲ ಇನ್ನಿಂಗ್ಸ್: 150-10 ( ರಹೀಂ 43, ಶಮಿ 3 ವಿಕೆಟ್)
ಭಾರತ ಮೊದಲ ಇನ್ನಿಂಗ್ಸ್: 493-6 ( ಮಯಾಂಕ್ ಅಗರ್ವಾಲ್ 243, ಅಬು ಜೈದ್ 4 ವಿಕೆಟ್)
ಬಾಂಗ್ಲಾ ದ್ವಿತೀಯ ಇನ್ನಿಂಗ್ಸ್: 213-10 ( ರಹೀಂ 64 ರನ್, ಶಮಿ 4 ವಿಕೆಟ್)