Advertisement

ಕೋವಿಡ್ 19; ಭಾರತದಲ್ಲಿ ಕಳೆದ 24 ಕೋವಿಡ್ ಪ್ರರಕಣಗಳ ಸಂಖ್ಯೆ, ಸಾವು ಮತ್ತೆ ಹೆಚ್ಚಳ

03:21 PM Oct 23, 2021 | Team Udayavani |

ನವದೆಹಲಿ: ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಸ್ವಲ್ಪ ಹೆಚ್ಚಳವಾಗಿದ್ದು, ಕಳೆದ 24ಗಂಟೆಗಳಲ್ಲಿ 16, 326 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ(ಅಕ್ಟೋಬರ್ 23) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಪತ್ನಿ ಸಾವಿನ ನೋವು: ಮನನೊಂದು ತನ್ನ 4 ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಂದೆ

ದೇಶದಲ್ಲಿನ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,41,59,562ಕ್ಕೆ ಏರಿಕೆಯಾಗಿದೆ. ಕಳೆದ 24ಗಂಟೆಗಳಲ್ಲಿ 666 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ಈವರೆಗೆ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,53,708ಕ್ಕೆ ತಲುಪಿದೆ.

ಭಾರತದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,73,728ಕ್ಕೆ ಇಳಿಕೆಯಾಗಿದ್ದು, ಇದು 233 ದಿನಗಳಲ್ಲಿಯೇ ಅತೀ ಕನಿಷ್ಠ ಪ್ರಮಾಣದ ಸಂಖ್ಯೆಯಾಗಿದೆ. ಸತತ 29ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ 30,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ವರದಿಯಾಗುತ್ತಿದೆ.

ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,73, 728ಕ್ಕೆ ಇಳಿಕೆಯಾಗಿದ್ದು, ಇದು 2020ರ ಮಾರ್ಚ್ ನಂತರ ಅತೀ ಕಡಿಮೆ ಪ್ರಮಾಣದ ಪ್ರಕರಣವಾಗಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಶೇ.98.16ಕ್ಕೆ ಏರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next