ನವದೆಹಲಿ: ಹರ್ಯಾಣದ ಪಂಚಕುಲದಲ್ಲಿ ನಡೆದ ತ್ರಿವಳಿ ಕೊ*ಲೆ ಪ್ರಕರಣದಲ್ಲಿ ಬೇಕಾಗಿದ್ದ ಕಪಿಲ್ ಸಂಗ್ವಾನ್ ಅಲಿಯಾಸ್ ನಂದು ಗ್ಯಾಂಗ್ನ ಇಬ್ಬರು ಶಾರ್ಪ್ಶೂಟರ್ಗಳನ್ನು ದೆಹಲಿ ಪೊಲೀಸರ ವಿಶೇಷ ದಳ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಗುರುವಾರ(ಜ9) ತಿಳಿಸಿದ್ದಾರೆ.
ಆರೋಪಿಗಳನ್ನು ಸಾಹಿಲ್ ಅಲಿಯಾಸ್ ಪೋಲಿ ಮತ್ತು ವಿಜಯ್ ಗೆಹ್ಲೋಟ್ ಎಂದು ಗುರುತಿಸಲಾಗಿದ್ದು, ಬುಧವಾರ ಮಧ್ಯರಾತ್ರಿ ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಇಬ್ಬರು ಶಂಕಿತರು ದೆಹಲಿಯಲ್ಲಿ ನಡೆದ ಹಾಡ ಹಗಲೇ ಕೊ*ಲೆಗಳು ಮತ್ತು ಹರಿಯಾಣದ ಪಂಚಕುಲದಲ್ಲಿ ನಡೆದ ಹೈ-ಪ್ರೊಫೈಲ್ ತ್ರಿವಳಿ ಕೊ*ಲೆ ಪ್ರಕರಣ ಸೇರಿದಂತೆ ಬಹು ಅಪರಾಧಗಳಲ್ಲಿ ಭಾಗಿಯಾಗಿದ್ದರು. ಬಂಧಿಸುವ ಮೊದಲು ಹರ್ಯಾಣ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಕರ್ನಾಟಕದಾದ್ಯಂತ ಅನೇಕ ಕಡೆ ದಾಳಿಗಳನ್ನು ನಡೆಸಲಾಗಿತ್ತು, ಪರಾರಿಯಾಗುತ್ತಿದ್ದ ಇಬ್ಬರ ಚಲನವಲನಗಳನ್ನು ಆಧರಿಸಿ ತಂಡ ಸೆರೆ ಹಿಡಿದಿದೆ ಎಂದು ಅಧಿಕಾರಿ ಹೇಳಿದರು.
ಬಂಧಿತ ಆರೋಪಿಗಳಿಂದ ಮೂರು ಮೊಬೈಲ್ ಫೋನ್ಗಳು ಮತ್ತು 2 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
2018ರಲ್ಲಿ ನಜಾಫ್ಗಢದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಸಾಹಿಲ್ನನ್ನು ಮೊದಲು ಬಂಧಿಸಲಾಗಿತ್ತು, ಆವೇಳೆ ನಂದು ಗ್ಯಾಂಗ್ನ ಪ್ರಮುಖ ಸದಸ್ಯ ಸಚಿನ್ ಚಿಕಾರನೊಂದಿಗೆ ಪರಿಚಯವಾಗಿತ್ತು. ಬಿಡುಗಡೆಯಾದ ನಂತರ, ನಜಾಫ್ಗಢದಲ್ಲಿ ರೋಷನ್ ಅಲಿಯಾಸ್ ಛೋಟಾ ಹ*ತ್ಯೆ ಸೇರಿದಂತೆ ಗ್ಯಾಂಗ್ನ ಸೂಚನೆಯ ಮೇರೆಗೆ ಸಾಹಿಲ್ ಮತ್ತಷ್ಟು ಅಪರಾಧಗಳನ್ನು ಮಾಡಿದ್ದ. ನಂದು ಗ್ಯಾಂಗ್ನ ನಿಕಟ ಸಹವರ್ತಿ ಗೆಹ್ಲೋಟ್ ಅದರ ಅತ್ಯಂತ ವಿಶ್ವಾಸಾರ್ಹ ಶೂಟರ್ ಗಳಲ್ಲಿ ಒಬ್ಬನಾಗಿದ್ದ ಎಂದು ಅಧಿಕಾರಿ ಹೇಳಿದರು.