Advertisement

Davis Cup: ಭಾರತಕ್ಕೆ 4-1 ರಿಂದ ಜಯ- ಡಬಲ್ಸ್‌ ನಲ್ಲಿ ಗೆದ್ದು ವಿದಾಯ ಹೇಳಿದ ರೋಹನ್‌ ಬೋಪಣ್ಣ

11:46 PM Sep 17, 2023 | Team Udayavani |

ಲಕ್ನೋ: ಡೇವಿಸ್‌ ಕಪ್‌ ವಿಶ್ವ ಗುಂಪು-2ರಲ್ಲಿ ಭಾರತ ತಂಡ ದುರ್ಬಲ ಮೊರಾಕ್ಕೊವನ್ನು 4-1ರಿಂದ ಸುಲಭವಾಗಿ ಸೋಲಿಸಿದೆ. ಶನಿವಾರ ಭಾರತ 1-1ರಿಂದ ಸಮಬಲ ಸಾಧಿಸಿತ್ತು. ರವಿವಾರ ಆಡಿದ ಮೂರೂ ಪಂದ್ಯ ಗಳನ್ನು ಸುಲಭವಾಗಿ ಗೆದ್ದಿದೆ. ಶನಿವಾರ ಎಸ್‌.ಮಕುಂದ್‌ ಗಾಯ ಗೊಂಡಿದ್ದರಿಂದ ಒಂದು ಪಂದ್ಯ ಎದುರಾಳಿಯ ಪಾಲಾಗಿತ್ತು. ರವಿವಾರ ರೋಹನ್‌ ಬೋಪಣ್ಣ ಡೇವಿಸ್‌ ಕಪ್‌ನಲ್ಲಿ ತಮ್ಮ ವಿದಾಯದ ಪಂದ್ಯವಾಡಿದರು. ಹೀಗಾಗಿ ಎಲ್ಲರ ಕೇಂದ್ರಬಿಂದು ಅವರೇ ಆಗಿದ್ದರು.

Advertisement

ರವಿವಾರ 3 ಪಂದ್ಯಗಳು ನಡೆದವು. ಮೊದಲು ನಡೆದ ಡಬಲ್ಸ್‌ ಪಂದ್ಯದಲ್ಲಿ ರೋಹನ್‌ ಬೋಪಣ್ಣ-ಯೂಕಿ ಭಾಂಬ್ರಿ ಪಾಲ್ಗೊಂಡಿದ್ದರು. ಈ ಜೋಡಿ ಅತ್ಯಂತ ಸುಲಭವಾಗಿ ಎಲಿಯಟ್‌ ಬೆಂಕೆಟ್ರಿಟ್‌-ಯೂನೆಸ್‌ ಲಲಾಮಿ ಲಾರೊಸಿಯನ್ನು ಸೋಲಿಸಿತು. ಗೆಲುವಿನ ಅಂತರ 6-2, 6-1. ಅಲ್ಲಿಗೆ ಬೋಪಣ್ಣ ಭಾರತದ ರಾಷ್ಟ್ರಧ್ವಜವನ್ನು ಸುತ್ತಿಕೊಂಡು ಇಡೀ ಅಂಕಣದಲ್ಲಿ ಸುತ್ತಾಡಿದರು. ಭಾರತೀಯ ಆಟಗಾರರು ಅವರನ್ನು ಎತ್ತಿಕೊಂಡು ಮೆರೆಸಿದರು.

ಗಾಯಾಳು ಮುಕುಂದ್‌ ಬದಲು ರಿವರ್ಸ್‌ ಸಿಂಗಲ್ಸ್‌ ನಲ್ಲಿ ಕಣಕ್ಕಿಳಿದ ದಿಗ್ವಿಜಯ್‌ ಪ್ರತಾಪ್‌ ಸಿಂಗ್‌ 6-1, 5-7, 10-6ರಿಂದ ವಾಲಿದ್‌ ಅಹೌದ ಅವರನ್ನು ಸೋಲಿಸಿದರು. ಇನ್ನೊಂದು ರಿವರ್ಸ್‌ ಸಿಂಗಲ್ಸ್‌ ಪಂದ್ಯದಲ್ಲಿ ಸುಮಿತ್‌ ನಾಗಲ್‌ 6-3, 6-3 ಅಂಕಗಳಿಂದ ಯಾಸಿನ್‌ ದಿಲಿ¾ಯನ್ನು ಸೋಲಿಸಿದರು. ಒಟ್ಟು 4-1 ಅಂತರದಿಂದ ಭಾರತ ಗೆಲುವು ಸಾಧಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next