Advertisement

ಭಾರತ-ವೆಸ್ಟ್‌ ಇಂಡೀಸ್‌: ಫ್ಲೋರಿಡಾದಲ್ಲಿ T-20 ಸರಣಿ ಇತ್ಯರ್ಥ

10:40 PM Aug 09, 2023 | Team Udayavani |

ಪ್ರೊವಿಡೆನ್ಸ್‌ (ಗಯಾನಾ): ಟೀಮ್‌ ಇಂಡಿಯಾದ ವೆಸ್ಟ್‌ ಇಂಡೀಸ್‌ ಪ್ರವಾಸ ಒಂದು ಹಂತಕ್ಕೆ ಕೊನೆಗೊಂಡಿದೆ. ಮೊದಲು 2 ಟೆಸ್ಟ್‌, ಅನಂತರ 3 ಪಂದ್ಯಗಳ ಏಕದಿನ ಮುಖಾಮುಖೀ, ಬಳಿಕ 3 ಟಿ20 ಪಂದ್ಯಗಳನ್ನು ಕೆರಿಬಿಯನ್‌ ದ್ವೀಪದಲ್ಲಿ ಆಡಲಾಯಿತು. ಮುಂದಿನೆರಡು ಟಿ20 ಪಂದ್ಯ ಅಮೆರಿಕ ದಲ್ಲಿ ನಡೆಯಲಿದೆ. ಅರ್ಥಾತ್‌, ಯುಎಸ್‌ಎಯ ಫ್ಲೋರಿಡಾದಲ್ಲಿ ಟಿ20 ಸರಣಿ ಇತ್ಯರ್ಥವಾಗಲಿದೆ. ಇಲ್ಲಿನ ಲೌಡರ್‌ಹಿಲ್‌ನಲ್ಲಿ ವಾರಾಂತ್ಯವಾದ ಶನಿವಾರ ಹಾಗೂ ರವಿವಾರದಂದು ಈ ಪಂದ್ಯಗಳು ನಡೆಯಲಿವೆ.

Advertisement

ಇವೆರಡೂ ಟಿ20 ಸರಣಿಯ ಹೆಚ್ಚು ವರಿ ಪಂದ್ಯಗಳಾಗಿವೆ. ಮೊದಲು ಮೂರೇ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಅನಂತರ 2 ಪಂದ್ಯಗಳನ್ನು ಯುಎಸ್‌ಎಯಲ್ಲಿ ಆಡಲು ಬಿಸಿಸಿಐ ಸಮ್ಮತಿಸಿತು.

ಮಂಗಳವಾರದ 3ನೇ ಟಿ20 ಪಂದ್ಯವನ್ನು 7 ವಿಕೆಟ್‌ಗಳಿಂದ ಅಧಿ ಕಾರಯುತವಾಗಿ ಗೆದ್ದ ಭಾರತ ಸರಣಿ ಯನ್ನು ಜೀವಂತವಾಗಿ ಇರಿಸಲು ಯಶಸ್ವಿಯಾಗಿದೆ. ಇದರ ಬಹುಪಾಲು ಶ್ರೇಯಸ್ಸು ಕುಲದೀಪ್‌ ಯಾದವ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರಿಗೆ ಸಲ್ಲುತ್ತದೆ.

ಭರ್ಜರಿ ಗೆಲುವು
ಬ್ಯಾಟಿಂಗ್‌ ಆಯ್ದುಕೊಂಡ ವೆಸ್ಟ್‌ ಇಂಡೀಸ್‌ 5 ವಿಕೆಟಿಗೆ 159 ರನ್‌ ಪೇರಿಸಿತು. ಭಾರತ ಆರಂಭಿಕ ವೈಫ‌ಲ್ಯಕ್ಕೆ ಸಿಲುಕಿದರೂ ಮೂರೇ ವಿಕೆಟಿಗೆ 17.5 ಓವರ್‌ಗಳಲ್ಲಿ 164 ರನ್‌ ಬಾರಿಸಿ ಮೊದಲ ಗೆಲುವು ಸಾಧಿ ಸಿತು. ಇದರೊಂದಿಗೆ ಭಾರತ ತನ್ನ ಹಿನ್ನಡೆ ಯನ್ನು 1-2ಕ್ಕೆ ಇಳಿಸಿಕೊಂಡಿದೆ.

ಪದಾರ್ಪಣ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್‌ (1) ಮತ್ತು ಶುಭಮನ್‌ ಗಿಲ್‌ (6) ಯಶಸ್ಸು ಕಾಣಲಿಲ್ಲ. ಆದರೆ ಸೂರ್ಯಕುಮಾರ್‌ ಯಾದವ್‌ ಸಿಡಿದು ನಿಂತರು. ಮೊದಲ ಸರಣಿ ಆಡುತ್ತಿರುವ ತಿಲಕ್‌ ವರ್ಮ ಬಹಳ ಅನುಭವಿಯಂತೆ ಬ್ಯಾಟಿಂಗ್‌ ನಡೆಸಿ ಮತ್ತೂಂದು ಭರವಸೆಯ ಇನ್ನಿಂಗ್ಸ್‌ ಕಟ್ಟಿದರು. ವಿಂಡೀಸ್‌ ಬೌಲಿಂಗ್‌ ಧೂಳೀಪಟಗೊಂಡಿತು.
ಸೂರ್ಯಕುಮಾರ್‌ ಬೊಂಬಾಟ್‌ ಆಟವಾಡಿ ಕೇವಲ 44 ಎಸೆತಗಳಿಂದ 83 ರನ್‌ ಬಾರಿಸಿದರು. ಈ ಪಂದ್ಯ ಶ್ರೇಷ್ಠ ಇನ್ನಿಂಗ್ಸ್‌ 4 ಸಿಕ್ಸರ್‌, 10 ಬೌಂಡರಿಗಳನ್ನು ಒಳಗೊಂಡಿತ್ತು. ತಿಲಕ್‌ ವರ್ಮ ಅವರದು ಅಜೇಯ 49 ರನ್‌ ಕೊಡುಗೆ (37 ಎಸೆತ, 4 ಫೋರ್‌, 1 ಸಿಕ್ಸರ್‌). ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ ಸಿಕ್ಸರ್‌ ಬಾರಿಸಿ ಜಯಭೇರಿ ಮೊಳಗಿಸಿದ ಕಾರಣ ತಿಲಕ್‌ಗೆ ಅರ್ಧ ಶತಕ ತಪ್ಪಿತು. ಇದಕ್ಕೆ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

“ಒಂದು ತಂಡವಾಗಿ ನಾವು 7 ಮಂದಿ ಬ್ಯಾಟ್ಸ್‌ಮನ್‌ಗಳೊಂದಿಗೆ ಆಡಲು ನಿರ್ಧರಿಸಿದ್ದೇವೆ. ಇದರಿಂದ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳ ಬೇಕಿದೆ. ಆಗ 8ನೇ ಸ್ಥಾನದಲ್ಲಿ ಯಾರ ಅಗತ್ಯವೂ ಕಾಣಿ ಸದು’ ಎಂಬುದಾಗಿ ನಾಯಕ ಹಾರ್ದಿಕ್‌ ಪಾಂಡ್ಯ ಪ್ರತಿ ಕ್ರಿಯಿಸಿದರು. ಸೂರ್ಯಕುಮಾರ್‌ ಆಟ ಸರಣಿ ಯನ್ನು ಜೀವಂತವಾಗಿ ಇರಿಸಲು ಕಾರಣ ವಾಯಿತು ಎಂದೂ ಹೇಳಿದರು.

ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿದ ಭಾರತ, ನಿರ್ಣಾಯಕ ಪಂದ್ಯದಲ್ಲಿ ಬೊಂಬಾಟ್‌ ಪ್ರದರ್ಶನ ನೀಡಿತು. ಎಂದಿನಂತೆ ಕುಲದೀಪ್‌ ಸಿಂಗ್‌ ಕೆರಿಬಿಯನ್ನರಿಗೆ ಕಡಿವಾಣ ಹಾಕಿದರು. ಸರಣಿ ವಶಪಡಿಸಿಕೊಳ್ಳಬೇಕಾದರೆ ಭಾರತ ಫ್ಲೋರಿಡಾದ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ.

ಸೂರ್ಯಕುಮಾರ್‌ಗೆ ಏಕದಿನದ ಚಿಂತೆ
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಸೂರ್ಯ ಕುಮಾರ್‌ ಯಾದವ್‌, ತನ್ನ ಏಕದಿನ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದಾಗಿ ಹೇಳಿದರು.
“ನನ್ನ ಏಕದಿನ ದಾಖಲೆ ಉತ್ತಮವಾಗಿಲ್ಲ. ಹೀಗೆ ಹೇಳಿಕೊಳ್ಳಲು ನಾನೇನೂ ನಾಚಿಕೆಪಡುತ್ತಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಷಯ. ನಾವು ಯಾವತ್ತೂ ನಮ್ಮ ಸಾಧನೆ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ಹೊಂದಿರಬೇಕು. ಇದನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಬೇಕು’ ಎಂಬುದಾಗಿ ಸೂರ್ಯ ಹೇಳಿದರು.

“ರೋಹಿತ್‌ ಮತ್ತು ರಾಹುಲ್‌ ಸರ್‌ ಯಾವತ್ತೂ ಏಕದಿನ ಪಂದ್ಯಗಳಲ್ಲಿ ನನ್ನ ವೈಫ‌ಲ್ಯದ ಕುರಿತು ಹೇಳುತ್ತಲೇ ಇರುತ್ತಾರೆ. ಈ ಕುರಿತು ಉಪಯುಕ್ತ ಟಿಪ್ಸ್‌ ಕೂಡ ನೀಡುತ್ತಾರೆ. ಸಹಜ ಶೈಲಿಯ ಆಟವನ್ನೇ ಆಡುವಂತೆ ಸೂಚಿಸಿದ್ದಾರೆ. ಇದನ್ನು ಪಾಲಿಸುವುದು ನನ್ನ ಕೈಯಲ್ಲೇ ಇದೆ” ಎಂದರು.

ವಿಂಡೀಸ್‌ ಎದುರಿನ 3 ಪಂದ್ಯಗಳಲ್ಲಿ ಸೂರ್ಯ ಕುಮಾರ್‌ ಗಳಿಸಿದ್ದು 19, 24 ಹಾಗೂ 35 ರನ್‌ ಮಾತ್ರ. ಈವರೆಗಿನ 26 ಏಕದಿನ ಪಂದ್ಯಗಳಲ್ಲಿ ಸೂರ್ಯ ಕೇವಲ 511 ರನ್‌ ಮಾಡಿದ್ದಾರೆ. ಸರಾಸರಿ 24.33. ಆದರೆ ಟಿ20ಯಲ್ಲಿ 45.6ರಷ್ಟು ಉತ್ತಮ ಸರಾಸರಿ ಹೊಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next