ಕಿಂಗ್‌ಸ್ಟನ್: ಇವಿನ್ ಲೆವಿಸ್ (125* ರನ್) ಸ್ಫೋಟಕ ಶತಕದ ನೆರವಿನಿಂದ ಭಾರತದ ವಿರುದ್ಧದ ಏಕೈಕ ಟಿ20 ಸರಣಿಯ ಪಂದ್ಯದಲ್ಲಿ
ವೆಸ್ಟ್ ಇಂಡೀಸ್ 9 ವಿಕೆಟ್‌ನಿಂದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗೆ 6 ವಿಕೆಟ್ ಕಳೆದುಕೊಂಡು 190 ರನ್ ಬಾರಿಸಿತ್ತು. ಗುರಿ ಬೆನ್ನು ಹತ್ತಿದ ವೆಸ್ಟ್ ಇಂಡೀಸ್ 18.3 ಓವರ್‌ಗೆ 1 ವಿಕೆಟ್ ಕಳೆದುಕೊಂಡು194 ರನ್ ಬಾರಿಸಿ ಜಯ ದಾಖಲಿಸಿತು.
ವಿಂಡೀಸ್ ಪರ ಆರಂಭಿಕರಾಗಿ ಬಂದ ಕ್ರಿಸ್ ಗೇಲ್ ಮತ್ತು ಇವಿನ್ ಲೆವಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ 1ನೇ ವಿಕೆಟ್‌ಗೆ 82 ರನ್ ಸೇರಿಸಿದರು. ಈ ಹಂತದಲ್ಲಿ ಸ್ಯಾಮ್ಯುಯೆಲ್ಸ್, ಲೆವಿಸ್ ಸ್ಫೋಟಕ ಬ್ಯಾಟಿಂಗ್ ನಡೆಸಿ ವಿಂಡೀಸ್‌ಗೆ ಗೆಲುವು ತಂದರು. ಲೆವಿಸ್ 62 ಎಸೆತದಲ್ಲಿ ಅಜೇಯ 125 ರನ್ ಬಾರಿಸಿದರು. ಅವರ ಆಟದಲ್ಲಿ 6 ಬೌಂಡರಿ, 12 ಸಿಕ್ಸರ್ ಸೇರಿತ್ತು. ಸ್ಯಾಮ್ಯುಯೆಲ್ಸ್ ಅಜೇಯ 36 ರನ್ ಬಾರಿಸಿದರು.
ಕಾರ್ತಿಕ್, ಕೊಹ್ಲಿ ಸ್ಫೋಟಕ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ ನೆರವಾದರು. ಆರಂಭಿಕರಾಗಿ ಬಂದ ಕೊಹ್ಲಿ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 5.3 ಓವರ್‌ನಲ್ಲಿ 64 ರನ್ ಜತೆಯಾಟ ಆಡುವ ಮೂಲಕ ಭದ್ರ ಅಡಿಪಾಯ ಹಾಕಿದರು. 3ನೇ ವಿಕೆಟ್ ಜತೆಯಾದ ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್‌ಗೆ 190/6(ಕಾರ್ತಿಕ್ 48, ಕೊಹ್ಲಿ 39, ಪಂತ್ 38, ಟೇಲರ್ 31ಕ್ಕೆ 2), ವೆಸ್ಟ್ ಇಂಡೀಸ್
18.3 ಓವರ್‌ಗೆ 194/1(ಲೆವಿಸ್ ಅಜೇಯ 125, ಸ್ಯಾಮ್ಯುಯೆಲ್ಸ್ 36, ಕುಲದೀಪ್ 34ಕ್ಕೆ 1).