Advertisement

ಏಕದಿನಕ್ಕೆ ಮಳೆ ಅಡ್ಡಿ; ಪಂದ್ಯ ರದ್ದು

10:04 AM Aug 10, 2019 | keerthan |

ಪ್ರೊವಿವಿಡೆನ್ಸ್‌ (ಗಯಾನ): ಭಾರತ-ವೆಸ್ಟ್‌ ಇಂಡೀಸ್‌ ನಡುವಿನ ಗುರುವಾರದ ಮೊದಲ ಏಕದಿನ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಇದರಿಂದ 2 ಗಂಟೆ ವಿಳಂಬವಾಗಿ ಪಂದ್ಯ ಆರಂಭವಾಗಿದರೂ ನಂತರ ಮತ್ತೆ ಕಾಡಿದ ಮಳೆಯಿಂದಾಗಿ ಪಂದ್ಯ ರದ್ದು ಮಾಡಲಾಗಿದೆ.

Advertisement

ಟಾಸ್‌ ಗೆದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬೌಲಿಂಗ್‌ ಆಯ್ದುಕೊಂಡರು. ಆದರೆ 5.4 ಓವರ್‌ಗಳ ಆಟ ಆಗುವಷ್ಟರಲ್ಲಿ ಪುನಃ ಮಳೆ ಸುರಿಯಿತು. ಆಗ ವಿಂಡೀಸ್‌ ವಿಕೆಟ್‌ ನಷ್ಟವಿಲ್ಲದೆ 9 ರನ್‌ ಮಾಡಿತ್ತು. ಕ್ರಿಸ್‌ ಗೇಲ್‌ 3 ಮತ್ತು ಎವಿನ್‌ ಲೆವಿಸ್‌ 4 ರನ್‌ ಮಾಡಿ ಆಡುತ್ತಿದ್ದರು. ಮತ್ತೆ ಆಟ ನಿಂತಿದ್ದರಿಂದ ಓವರ್‌ಗಳ ಸಂಖ್ಯೆಯಲ್ಲಿ ಇನ್ನಷ್ಟು ಕಡಿತವಾಗಿ 34 ಓವರ್‌ ಗೆ ಇಳಿಸಲಾಯಿತು.

ನಿಧಾನಗತಿಯ ಪಿಚ್‌ ನಲ್ಲಿ ಪರದಾಡಿದ ಕ್ರಿಸ್‌ ಗೇಲ್‌ 31 ಎಸೆತ ಎದುರಿಸಿ ಗಳಿಸಿದ್ದು ಕೇವಲ ನಾಲ್ಕು ರನ್.‌ ಬಿರುಸಾಗಿ ಆಡಿದ ಇವಿನ್‌ ಲೂಯಿಸ್‌ 36 ಎಸೆತಗಳಲ್ಲಿ 40 ರನ್‌ ಬಾರಿಸಿದರು. ವಿಂಡೀಸ್‌ 13 ಓವರ್‌ ಗಳಲ್ಲಿ 54 ರನ್‌ ಗಳಿಸದ್ದ ವೇಳೆ ಮತ್ತೆ ಮಳೆ ಕಾಡಿದ ಕಾರಣ ಪಂದ್ಯ ವನ್ನು ರದ್ದುಗೊಳಿಸಲಾಯಿತು.

ಎರಡನೇ ಏಕದಿನ ಪಂದ್ಯ ಟ್ರಿನಿಡಾಡ್‌ ನಲ್ಲಿ ಆಗಸ್ಟ್‌ 11ರಂದು ನಡೆಯಲಿದೆ.

ಭಾರತದ ಆಡುವ ಬಳಗದಲ್ಲಿ ಕೆ.ಎಲ್‌. ರಾಹುಲ್‌, ಟಿ20ಯಲ್ಲಿ ಮಿಂಚಿದ ನೂತನ ವೇಗದ ಬೌಲರ್‌ ನವದೀಪ್‌ ಸೈನಿ ಸ್ಥಾನ ಪಡೆಯಲಿಲ್ಲ. ಇವರ ಬದಲು ಶ್ರೇಯಸ್‌ ಅಯ್ಯರ್‌ ಮತ್ತು ಕೆ. ಖಲೀಲ್‌ ಅಹ್ಮದ್‌ ಅವಕಾಶ ಪಡೆದರು.

Advertisement

ಕ್ರಿಸ್‌ಗೇಲ್‌ ಸರ್ವಾಧಿಕ ಪಂದ್ಯ
ವಿದಾಯ ಸರಣಿ ಆಡುತ್ತಿರುವ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಗುರುವಾರದ ಪಂದ್ಯವನ್ನು ಆಡಲಿಳಿಯುವ ಮೂಲಕ ಹೊಸ ದಾಖಲೆಯೊಂದನ್ನು ಬರೆದರು. ವೆಸ್ಟ್‌ ಇಂಡೀಸ್‌ ಪರ ಅತೀ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಹೆಗ್ಗಳಿಕೆಗೆ ಪಾತ್ರರಾದರು.
ಇದು ಕ್ರಿಸ್‌ ಗೇಲ್‌ ಅವರ 296ನೇ ಪಂದ್ಯ. ಈ ಸಂದರ್ಭದಲ್ಲಿ ಅವರು 295 ಪಂದ್ಯಗಳನ್ನಾಡಿದ ಬ್ರಿಯಾನ್‌ ಲಾರಾ ದಾಖಲೆ ಮುರಿದರು. ಶಿವನಾರಾಯಣ್‌ ಚಂದರ್‌ಪಾಲ್‌ (268) ಅನಂತರದ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next