ಅಹ್ಮದಾಬಾದ್: ಸಹೋದರಿಯ ಮದುವೆಯ ಕಾರಣ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಕೆ.ಎಲ್. ರಾಹುಲ್ ಸೋಮವಾರ ತಂಡವನ್ನು ಸೇರಿಕೊಂಡು ಅಭ್ಯಾಸ ಆರಂಭಿಸಿದ್ದಾರೆ.
ಹೀಗಾಗಿ ಅವರು ಬುಧವಾರದ ದ್ವಿತೀಯ ಪಂದ್ಯದ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ರಾಹುಲ್ ಬದಲು ಅವಕಾಶ ಪಡೆದ ಮಾಯಾಂಕ್ ಅಗರ್ವಾಲ್ ಅವರ ಕ್ವಾರಂಟೈನ್ ಅವಧಿ ಕೂಡ ಮುಗಿದಿದೆ. ಹಾಗೆಯೇ ನವದೀಪ್ ಸೈನಿ ಕೋವಿಡ್ ಪಾಸಿಟಿವ್‌ನಿಂದ ಚೇತರಿಸಿಕೊಂಡಿದ್ದಾರೆ. ಇವರಿಬ್ಬರೂ ತಂಡವನ್ನು ಸೇರಿಕೊಂಡಿದ್ದಾರೆ.
ಇದನ್ನೂ ಓದಿ:ಪ್ರೊ ಕಬಡ್ಡಿ : ಜೈಪುರ್ ಪಿಂಕ್ ಪ್ಯಾಂಥರ್ ಎಂಟನೇ ಗೆಲುವು
ರಾಹುಲ್ ತಂಡಕ್ಕೆ ಮರಳಿದರೂ 3 ದಿನಗಳ ಕ್ವಾರಂಟೈನ್‌ನಲ್ಲಿ ಇರುವುದರಿಂದ ದ್ವಿತೀಯ ಪಂದ್ಯದಲ್ಲೂ ಆಡುವುದು ಅನುಮಾನ ಎಂದು ಮೊದಲು ವರದಿ ಯಾಗಿತ್ತು. ತಂಡದಲ್ಲಿ ಪಾಸಿಟಿವ್ ಕೇಸ್ ಬಂದಿರುವುದರಿಂದ ಬಿಸಿಸಿಐ ಕ್ವಾರಂಟೈನ್ ನಿಯಮವನ್ನು ಬಿಗಿಗೊಳಿಸಲಿದೆ ಎನ್ನಲಾಗಿತ್ತು. ಆದರೆ ಈ ಕುರಿತು ಬಿಸಿಸಿಐ ಯಾವುದೇ ಪ್ರಕಟನೆ ನೀಡಿಲ್ಲ.
ಹೀಗಾಗಿ ಬುಧವಾರದ ಪಂದ್ಯದಲ್ಲಿ ರಾಹುಲ್ ಅವರು ನಾಯಕ ರೋಹಿತ್ ಶರ್ಮ ಜತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.