Advertisement

ಧೋನಿ ಸ್ಟೆಂಪಿಂಗ್‌ ವಿಡಿಯೊ ವೈರಲ್‌

03:45 AM Jun 27, 2017 | Team Udayavani |

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ವಿಕೆಟ್‌ ಕೀಪರ್‌ ಧೋನಿ ನಡೆಸಿದ ಸ್ಟಂಪಿಂಗ್‌ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

Advertisement

ಜಾಸನ್‌ ಹೋಲ್ಡರ್‌ರನ್ನು ತಮಾಷೆಯ ರೀತಿಯಲ್ಲಿ ಧೋನಿ ಸ್ಟಂಪ್‌ ಮಾಡಿರುವುದು ಚರ್ಚೆಯ ವಿಷಯವಾಗಿದೆ. ವಿಂಡೀಸ್‌ ಗೆಲ್ಲಲು 52 ಎಸೆತದಲ್ಲಿ 138 ರನ್‌ ಬೇಕಿತ್ತು. ಹೋಲ್ಡರ್‌ ಹಾಗೂ ರೋಸ್ಟನ್‌ ಸೇರಿಕೊಂಡು ಸಣ್ಣ ಜತೆಯಾಟ ನಿರ್ವಹಿಸಿ ಗೆಲುವಿನ ಆಸೆ ಉಳಿಸಿದ್ದರು. ಈ ಹಂತದಲ್ಲಿ ಕುಲದೀಪ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಹೋಲ್ಡರ್‌ ಕೀಪರ್‌ ಧೋನಿ ಸ್ಟಂಪ್‌ಗೆ ಬಲಿಯಾಗಬೇಕಾಯಿತು. ಕ್ವಿಕ್‌ ಸ್ಟಂಪಿಂಗ್‌ನಿಂದ ಖ್ಯಾತಿ ಪಡೆದಿರುವ ಧೋನಿ ನಿಧಾನವಾಗಿ ಸ್ಟಂಪ್‌ ಮಾಡಿದರು. ಒಂದು ರೀತಿಯಲ್ಲಿ ನೋಡುವುದಾದರೆ  ಹೋಲ್ಡರ್‌ ಅವರನ್ನು ಧೋನಿ ಅಣಕಿಸಿದಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next