Advertisement

ವಿಂಡೀಸ್‌ ಚೇಸಿಂಗ್‌ ವಿಫ‌ಲ; ಭಾರತಕ್ಕೆ ಟಿ20 ಸರಣಿ

11:38 PM Feb 18, 2022 | Team Udayavani |

ಕೋಲ್ಕತಾ: ದೊಡ್ಡ ಮೊತ್ತದ ದ್ವಿತೀಯ ಟಿ20 ಪಂದ್ಯವನ್ನು 8 ರನ್ನುಗಳಿಂದ ರೋಚಕವಾಗಿ ಗೆದ್ದ ಭಾರತ, ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು ಏಕದಿನ ಸರಣಿಯಲ್ಲಿ ಕೆರಿಬಿಯನ್ನರಿಗೆ ವೈಟ್‌ವಾಶ್‌ ಮಾಡಿತ್ತು.

Advertisement

ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ನಿಕೋಲಸ್‌ ಪೂರಣ್‌ ಮತ್ತು ಪೊವೆಲ್‌ ಅವರ ಅರ್ಧ ಶತಕಗಳಿಂದ ಈ ಮುಖಾಮುಖಿ ರಂಗೇರಿಸಿಕೊಂಡಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 5 ವಿಕೆಟಿಗೆ 186 ರನ್‌ ಪೇರಿಸಿದರೆ, ವೆಸ್ಟ್‌ ಇಂಡೀಸ್‌ 3 ವಿಕೆಟಿಗೆ 178 ರನ್‌ ಬಾರಿಸಿತು. ಸರಣಿಯ ಅಂತಿಮ ಪಂದ್ಯ ರವಿವಾರ ನಡೆಯಲಿದೆ.

ವೆಸ್ಟ್‌ ಇಂಡೀಸ್‌ ಆರಂಭಿಕರು ಪವರ್‌ ಪ್ಲೇಯಲ್ಲಿ ಸಿಡಿಯಲು ವಿಫ‌ಲರಾದರು. ಕೈಲ್‌ ಮೇಯರ್ 6ನೇ ಓವರ್‌ ತನಕ ಇದ್ದರೂ ಗಳಿಸಿದ್ದು 9 ರನ್‌ ಮಾತ್ರ. ಕಿಂಗ್‌ ಗಳಿಕೆ 22 ರನ್‌. ಎರಡೂ ವಿಕೆಟ್‌ ಸ್ಪಿನ್ನರ್‌ಗಳ ಪಾಲಾಯಿತು.

ನಿಕೋಲಸ್‌ ಪೂರಣ್‌ ಮೊದಲ ಪಂದ್ಯದ ಅಬ್ಬರವನ್ನೇ ಮುಂದುವರಿಸಿದರು. ಅವರಿಗೆ ಪೊವೆಲ್‌ ಉತ್ತಮ ಬೆಂಬಲ ನೀಡಿದರು. ಆದರೂ ಅಂತಿಮ 6 ಓವರ್‌ಗಳಲ್ಲಿ 74 ರನ್‌ ತೆಗೆಯುವ ಕಠಿನ ಸವಾಲು ಎದುರಾಯಿತು. ಈ ಹಂತದಲ್ಲಿ ಭಾರತದ ಫೀಲ್ಡಿಂಗ್‌ ಬಹಳ ಕಳಪೆಯಾಗಿ ಕಂಡಿತು. ಸುಲಭದ ಕ್ಯಾಚ್‌ಗಳು ನೆಲಕ್ಕೆ ಬಿದ್ದವು.
ಪೂರಣ್‌ ಸತತ ಎರಡನೇ ಅರ್ಧ ಶತಕದೊಂದಿಗೆ ಅಬ್ಬರಿದರು. ಪೊವೆಲ್‌ ಕೂಡ ಫಿಫ್ಟಿ ದಾಖಲಿಸಿದರು. ಈ ಜೋಡಿ 60 ಎಸೆತಗಳಲ್ಲಿ 100 ರನ್‌ ಪೇರಿಸಿತು. ಇದು ಭಾರತದೆದುರು ವಿಂಡೀಸ್‌ ದಾಖಲಿಸಿದ 3ನೇ ಶತಕದ ಜತೆಯಾಟ.

Advertisement

ವಿಂಡೀಸ್‌ ಜಯಕ್ಕೆ ಅಂತಿಮ 2 ಓವರ್‌ಗಳಲ್ಲಿ 29 ರನ್‌ ಬೇಕಿತ್ತು. ಆದರೆ 19ನೇ ಓವರ್‌ ಎಸೆದ ಭುವನೇಶ್ವರ್‌, ಕೇವಲ 4 ರನ್‌ ನೀಡುವ ಮೂಲಕ ಪೂರಣ್‌ ವಿಕೆಟ್‌ ಉಡಾಯಿಸಿದರು. ಪೂರಣ್‌ ಗಳಿಕೆ 41 ಎಸೆತಗಳಲ್ಲಿ 62 ರನ್‌ (5 ಫೋರ್‌, 3 ಸಿಕ್ಸರ್‌). ಪೊವೆಲ್‌ 68 ರನ್‌ ಮಾಡಿ ಅಜೇಯರಾಗಿ ಉಳಿದರು (36 ಎಸೆತ, 4 ಬೌಂಡರಿ, 5 ಸಿಕ್ಸರ್‌).

ಸ್ಕೋರ್‌ ಪಟ್ಟಿ

ಭಾರತ
ರೋಹಿತ್‌ ಶರ್ಮ ಸಿ ಕಿಂಗ್‌ ಬಿ ಚೇಸ್‌ 19
ಇಶಾನ್‌ ಕಿಶನ್‌ ಸಿ ಮೇಯರ್ ಬಿ ಕಾಟ್ರೆಲ್‌ 2
ವಿರಾಟ್‌ ಕೊಹ್ಲಿ ಬಿ ಚೇಸ್‌ 52
ಸೂರ್ಯಕುಮಾರ್‌ ಯಾದವ್‌ ಸಿ ಮತ್ತು ಬಿ ಚೇಸ್‌ 8
ರಿಷಭ್‌ ಪಂತ್‌ ಔಟಾಗದೆ 52
ವೆಂಕಟೇಶ್‌ ಅಯ್ಯರ್‌ ಬಿ ಶೆಫ‌ರ್ಡ್‌ 33
ಹರ್ಷಲ್‌ ಪಟೇಲ್‌ ಔಟಾಗದೆ 1
ಇತರ 19
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 186
ವಿಕೆಟ್‌ ಪತನ: 1-10, 2-59, 3-72, 4-106, 5-182.
ಬೌಲಿಂಗ್‌:
ಅಖೀಲ್‌ ಹೊಸೇನ್‌ 4-0-30-0
ಶೆಲ್ಡನ್‌ ಕಾಟ್ರೆಲ್‌ 3-1-20-1
ಜೇಸನ್‌ ಹೋಲ್ಡರ್‌ 4-0-45-0
ರೊಮಾರಿಯೊ ಶೆಫ‌ರ್ಡ್‌ 3-0-34-1
ರೋಸ್ಟನ್‌ ಚೇಸ್‌ 4-0-25-3
ಓಡೀನ್‌ ಸ್ಮಿತ್‌ 1-0-10-0
ಕೈರನ್‌ ಪೊಲಾರ್ಡ್‌ 1-0-14-0

ವೆಸ್ಟ್‌ ಇಂಡೀಸ್‌
ಬ್ರ್ಯಾಂಡನ್‌ ಕಿಂಗ್‌ ಸಿ ಸೂರ್ಯ ಬಿ ಬಿಷ್ಣೋಯಿ 22
ಕೈಲ್‌ ಮೇಯರ್ ಸಿ ಮತ್ತು ಬಿ ಚಹಲ್‌ 9
ನಿಕೋಲಸ್‌ ಪೂರಣ್‌ ಸಿ ಬಿಷ್ಣೋಯಿ ಬಿ ಭವನೇಶ್ವರ್‌ 62
ಪೊವೆಲ್‌ ಔಟಾಗದೆ 68
ಕೈರನ್‌ ಪೊಲಾರ್ಡ್‌ ಔಟಾಗದೆ 3
ಇತರ 14
ಒಟ್ಟು (3 ವಿಕೆಟಿಗೆ) 178
ವಿಕೆಟ್‌ ಪತನ: 1-34, 2-59, 3-159.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-29-1
ದೀಪಕ್‌ ಚಹರ್‌ 4-0-40-0
ಯಜುವೇಂದ್ರ ಚಹಲ್‌ 4-0-31-1
ಹರ್ಷಲ್‌ ಪಟೇಲ್‌ 4-0-46-0
ರವಿ ಬಿಷ್ಣೋಯಿ 4-0-30-1

Advertisement

Udayavani is now on Telegram. Click here to join our channel and stay updated with the latest news.

Next