ಕೊಲಂಬೊ: 22: ಶ್ರೀಲಂಕಾ ಎದುರಿನ ದ್ವಿತೀಯ ಏಕದಿನವನ್ನು ಅಮೋಘ ರೀತಿಯಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿರುವ ಭಾರತ ಇನ್ನಷ್ಟು ಉತ್ಸಾಹ ಹಾಗೂ ಲವಲವಿಕೆಯಿಂದ 3ನೇ ಪಂದ್ಯಕ್ಕೆ ಅಣಿಯಾಗಿದೆ. ಈ ಅಹರ್ನಿಶಿ ಪಂದ್ಯ ಶುಕ್ರವಾರ “ಆರ್. ಪ್ರೇಮದಾಸ ಸ್ಟೇಡಿಯಂ’ನಲ್ಲಿ ಸಾಗಲಿದೆ.
ಭಾರತ ತಂಡ ವಿಪರೀತ ಖುಷಿಯಲ್ಲಿದ್ದರೂ ಕೋಚ್ ರಾಹುಲ್ ದ್ರಾವಿಡ್ ಮಾತ್ರ ದ್ವಂದ್ವದಲ್ಲಿದ್ದಾರೆ. ವಿನ್ನಿಂಗ್ ಕಾಂಬಿನೇಶನ್ ಉಳಿಸಿಕೊಂಡು ಕ್ಲೀನ್‌ಸಿÌàಪ್‌ಗೆ
ಸ್ಕೆಚ್ ಹಾಕುವುದೋ ಅಥವಾ ಪ್ರತಿಭಾನ್ವಿತ ಆಟಗಾರಿಗೆ ಅವಕಾಶ ಕೊಟ್ಟು ಪ್ರಯೋಗಕ್ಕೆ ಇಳಿಯುವುದೋ ಎಂಬ ಪ್ರಶ್ನೆ ದ್ರಾವಿಡ್ ಅವರನ್ನು ಕಾಡುತ್ತಿದೆ.
ಭಾರತ ದ್ವಿತೀಯ ಪಂದ್ಯಕ್ಕಾಗಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ಇನ್ನಷ್ಟು ಮೀಸಲು ಆಟಗಾರರಲ್ಲಿ ಕೆಲವರಿಗಾದರೂ ಅವಕಾಶ ಲಭಿಸೀತು ಎಂಬ ನಿರೀಕ್ಷೆ ಮೂಡಿದೆ. ಆಗ ಐಪಿಎಲ್ ಹೀರೋಗಳಾದ ದೇವದತ್ತ ಪಡಿಕ್ಕಲ್ ಅಥವಾ ಋತುರಾಜ್ ಗಾಯಕ್ವಾಡ್ ಅಗ್ರ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಇವರಿಗಾಗಿ ಪೃಥ್ವಿ ಶಾಗೆ ವಿಶ್ರಾಂತಿ ನೀಡಲೂಬಹುದು.
ಕಿಶನ್ ಬದಲು ಸಂಜು?:
ಹಾಗೆಯೇ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವರನ್ನು ತರುವುದು, ಇಶಾನ್ ಕಿಶಾನ್‌ಗೆ ವಿಶ್ರಾಂತಿ ಕೊಡುವ ಯೋಜನೆಯೂ ಇದೆ. ಸಂಜು ಕೂಡ ಹಾರ್ಡ್ ಹಿಟ್ಟಿಂಗ್ ಬ್ಯಾಟ್ಸ್‌ಮನ್ ಹಾಗೂ ಅನುಭವಿ ಕೀಪರ್ ಆಗಿದ್ದಾರೆ. ಮಧ್ಯಮ ಸರದಿಗೆ ಬಲ ತುಂಬಬೇಕಿರುವ ಮನೀಷ್ ಪಾಂಡೆ ಮತ್ತು ಸೂರ್ಯಕುಮಾರ್ ಯಾದವ್ ತಂಡದಲ್ಲಿ ಮುಂದುವರಿಯುವ ಸಾಧ್ಯತೆಯೇ ಹೆಚ್ಚು.
ಆರಂಭ: 3.00
ಪ್ರಸಾರ:
ಸೋನಿ ನೆಟ್‌ವರ್ಕ್