ಕೊಲಂಬೊ: ಏಕದಿನ ಸರಣಿಯಲ್ಲಿ ಆತಿಥೇಯ ಶ್ರೀಲಂಕಾವನ್ನು ಮಣಿಸಿ ಮೆರೆದ ಭಾರತವೀಗ ಟಿ20 ಸರಣಿಯಲ್ಲೂ ಇದೇ ಫಲಿತಾಂಶವನ್ನು ದಾಖಲಿಸುವ ಯೋಜನೆಯಲ್ಲಿದೆ.
ಮಂಗಳವಾರ ದ್ವಿತೀಯ ಮುಖಾಮುಖೀ ಏರ್ಪಡಲಿದ್ದು, ಇದನ್ನು ಗೆದ್ದರೆ ಸರಣಿ ಶಿಖರ್ ಧವನ್ ಪಡೆಯ ಪಾಲಾಗಲಿದೆ. ಇದಕ್ಕಾಗಿ 3ನೇ ಪಂದ್ಯದ ತನಕ ಕಾಯುವುದು ಬೇಡವೆಂಬುದು ಕೋಚ್ ರಾಹುಲ್ ದ್ರಾವಿಡ್ ನಿರ್ಧಾರ. ಭಾನುವಾರದ ಮೊದಲ ಪಂದ್ಯದಲ್ಲಿ 38 ರನ್ನುಗಳಿಂದ ಲಂಕೆಯನ್ನು ಮಣಿಸಿದ ಭಾರತ, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ನಿಚ್ಚಳ ಮೇಲುಗೈ ಸಾಧಿಸಿತ್ತು.
ಲಂಕೆಗೆ ಕಠಿಣ ಸವಾಲು: ಲಂಕೆಗೆ ಟಿ20 ಸರಣಿ ಎನ್ನುವುದು ಏಕದಿನಕ್ಕಿಂತಲೂ ಕಠಿಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಾರಣ, ಅವರಲ್ಲಿ ಸಿಡಿದು ನಿಲ್ಲಬಲ್ಲ ಬಿಗ್ ಗನ್‌ಗಳಿಲ್ಲ. 18.3 ಓವರ್‌ಗಳಲ್ಲಿ 126ಕ್ಕೆ ಆಲೌಟ್ ಆದುದೇ ಇದಕ್ಕೆ ಸಾಕ್ಷಿ. ಹಾಗೆಯೇ ಘಾತಕ ಬೌಲರ್ ಕೂಡ ಇಲ್ಲ. ಒಟ್ಟಾರೆಯಾಗಿ, ಟಿ20 ಸ್ಪೆಷಲಿಸ್ಟ್‌ಗಳ ತೀವ್ರ ಕೊರತೆ ಎದ್ದು ಕಾಣುತ್ತಿದೆ.
ಪಂದ್ಯಾರಂಭ: ರಾತ್ರಿ 8.00
ನೇರಪ್ರಸಾರ: ಸೋನಿ ಟೆನ್ 1