Advertisement
ಮೊದಲೆರಡು ದಿನ ಕಾಡಿದ ಮಳೆ ಶನಿವಾರ ಬಿಡುವು ನೀಡಿತು. ಆದರೆ ಕೊನೆಯಲ್ಲಿ ಬೆಳಕಿನ ಅಭಾವ ಎದುರಾದ್ದರಿಂದ ದಿನದಾಟವನ್ನು ಬೇಗನೇ ಮುಗಿಸಲಾಯಿತು. ಇತ್ತಂಡಗಳಿಗೂ ಭಾನುವಾರದ ಆಟ ಆತ್ಯಂತ ಮಹತ್ವದ್ದಾಗಿದೆ. ಶ್ರೀಲಂಕಾ ದೊಡ್ಡ ಮೊತ್ತದ ಮುನ್ನಡೆ ಸಾಧಿಸೀತೇ, ಭಾರತದ ಬೌಲರ್‌ಗಳು ತಿರುಗಿ ಬೀಳಬಹುದೇ ಎಂಬ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳದ್ದು.
Related Articles
Advertisement
ಭುವನೇಶ್ವರ್ ಕುಮಾರ್ (13) ರೂಪದಲ್ಲಿ ಭಾರತದ 9ನೇ ವಿಕೆಟ್ 146ಕ್ಕೆ ಬಿತ್ತು. ಲಕ್ಮಲ್ “ಒಂದು ದಿನದ ವಿರಾಮ’ದ ಬಳಿಕ 4ನೇ ವಿಕೆಟ್ ಬೇಟೆಯಾಡಿದರು. ಬಳಿಕ ಮೊಹಮ್ಮದ್ ಶಮಿ-ಉಮೇಶ್ ಯಾದವ್ ಜೋಡಿಯಿಂದ ಅಂತಿಮ ವಿಕೆಟಿಗೆ 26 ರನ್ ಒಟ್ಟುಗೂಡಿತು. ಶಮಿ 22 ಎಸೆತಗಳಿಂದ 24 ರನ್ (3 ಬೌಂಡರಿ) ಬಾರಿಸಿದರೆ, ಯಾದವ್ 6 ರನ್ ಗಳಿಸಿ ಔಟಾಗದೆ ಉಳಿದರು.
ಲಂಕಾ ಪರ ಲಕ್ಮಲ್ ಗರಿಷ್ಠ 4 ವಿಕೆಟ್ ಉಡಾಯಿಸಿದರೆ, ಗಾಮಗೆ, ಶಣಕ ಮತ್ತು ಪೆರೆರ ತಲಾ 2 ವಿಕೆಟ್ ಕಿತ್ತರು. 3ನೇ ದಿನ ದಾಳಿಗಿಳಿದ ಪ್ರಧಾನ ಸ್ಪಿನ್ನರ್ ರಂಗನ ಹೆರಾತ್‌ಗೆ ಲಭಿಸಿದ್ದು 2 ಓವರ್ ಮಾತ್ರ. ಭಾರತ ತವರಿನ ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ 200ರ ಒಳಗೆ ಆಲೌಟಾದದ್ದು ಇದು ಕೇವಲ 2ನೇ ಸಲ. ಇದಕ್ಕೂ ಮುನ್ನ 2005ರ ಚೆನ್ನೈ ಟೆಸ್ಟ್‌ನಲ್ಲಿ 167ಕ್ಕೆ ಕುಸಿದಿತ್ತು.
ತಿರಿಮನ್ನೆ-ಮ್ಯಾಥ್ಯೂಸ್ ರಕ್ಷಣೆ: ಶ್ರೀಲಂಕಾ ಆರಂಭಿಕರಾದ ಸಮರವಿಕ್ರಮ (23) ಮತ್ತು ಕರುಣರತ್ನೆ (8) ಅವರನ್ನು ಭುವನೇಶ್ವರ್ ಕುಮಾರ್ 34 ರನ್ ಆಗುವಷ್ಟರಲ್ಲಿ ಪೆವಿಲಿಯನ್ನಿಗೆ ಅಟ್ಟಿದಾಗ ಭಾರತದ ಸೀಮ್ ಬೌಲರ್ ಕೂಡ ಬೊಂಬಾಟ್ ಪ್ರದರ್ಶನ ನೀಡಬಹುದೆಂಬ ನಿರೀಕ್ಷೆ ಮೂಡಿತು. ಆದರೆ ಅನುಭವಿ ಆಟಗಾರರಾದ ಲಹಿರು ತಿರಿಮನ್ನೆ ಹಾಗೂ ಏಂಜೆಲೊ ಮ್ಯಾಥ್ಯೂಸ್ ಸೇರಿಕೊಂಡು ಇದನ್ನು ಸುಳ್ಳು ಮಾಡಿದರು. ನಿಧಾನವಾಗಿ ಕ್ರೀಸ್ ಆಕ್ರಮಿಸಿಕೊಂಡ ಇವರಿಂದ 3ನೇ ವಿಕೆಟಿಗೆ 99 ರನ್ ಹರಿದು ಬಂತು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಇವರನ್ನು ಯಾದವ್ ಸತತ ಓವರ್‌ಗಳಲ್ಲಿ ಕೆಡವಿದಾಗ ಭಾರತಕ್ಕೆ ದೊಡ್ಡದೊಂದು ರಿಲೀಫ್ ಸಿಕ್ಕಿತು.
ತಿರಿಮನ್ನೆ 94 ಎಸೆತಗಳಿಂದ 51 ರನ್ (8 ಬೌಂಡರಿ, 5ನೇ ಅರ್ಧ ಶತಕ), ಮ್ಯಾಥ್ಯೂಸ್ 94 ಎಸೆತಗಳಿಂದ 52 ರನ್ (8 ಬೌಂಡರಿ, 28ನೇ ಅರ್ಧ ಶತಕ) ಬಾರಿಸಿದರು. ನಾಯಕ ಚಂಡಿಮಾಲ್ (13) ಮತ್ತು ಕೀಪರ್ ಡಿಕ್ವೆಲ್ಲ (14) ಕ್ರೀಸಿನಲ್ಲಿದ್ದಾರೆ. ಉಳಿದೆರಡೂ ದಿನಗಳ ಆಟ ಪೂರ್ತಿ ನಡೆದರೆ ಈ ಪಂದ್ಯ ಅತ್ಯಂತ ಕುತೂಹಲ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ.
ಸ್ಕೋರ್ಪಟ್ಟಿಭಾರತ ಪ್ರಥಮ ಇನ್ನಿಂಗ್ಸ್
(2ನೇ ದಿನ: 5 ವಿಕೆಟಿಗೆ 74)
ಚೇತೇಶ್ವರ್ ಪೂಜಾರ ಬಿ ಗಾಮಗೆ 52
ವೃದ್ಧಿಮಾನ್ ಸಾಹಾ ಸಿ ಮ್ಯಾಥ್ಯೂಸ್ ಬಿ ಪೆರೆರ 29
ರವೀಂದ್ರ ಜಡೇಜ ಎಲ್‌ಬಿಡಬ್ಲ್ಯು ಪೆರೆರ 22
ಭುವನೇಶ್ವರ್ ಕುಮಾರ್ ಸಿ ಡಿಕ್ವೆಲ್ಲ ಬಿ ಲಕ್ಮಲ್ 13
ಮೊಹಮ್ಮದ್ ಶಮಿ ಸಿ ಶಣಕ ಬಿ ಗಾಮಗೆ 24
ಉಮೇಶ್ ಯಾದವ್ ಔಟಾಗದೆ 6
ಇತರ 10
ಒಟ್ಟು (ಆಲೌಟ್) 172
ವಿಕೆಟ್ ಪತನ: 6-79, 7-127, 8-128, 9-146.
ಬೌಲಿಂಗ್:
ಸುರಂಗ ಲಕ್ಮಲ್ 19-12-26-4
ಲಹಿರು ಗಾಮಗೆ 17.3-5-59-2
ದಸುನ್ ಶಣಕ 12-4-36-2
ದಿಮುತ್ ಕರುಣರತ್ನೆ 2-0-17-0
ರಂಗನ ಹೆರಾತ್ 2-0-5-0
ದಿಲುÅವಾನ್ ಪೆರೆರ 7-1-19-2 ಶ್ರೀಲಂಕಾ ಪ್ರಥಮ ಇನ್ನಿಂಗ್ಸ್
ಸದೀರ ಸಮರವಿಕ್ರಮ ಸಿ ಸಾಹಾ ಬಿ ಭುವನೇಶ್ವರ್ 23
ದಿಮುತ್ ಕರುಣರತ್ನೆ ಎಲ್‌ಬಿಡಬ್ಲ್ಯು ಭುವನೇಶ್ವರ್ 8
ಲಹಿರು ತಿರಿಮನ್ನೆ ಸಿ ಕೊಹ್ಲಿ ಬಿ ಯಾದವ್ 51
ಏಂಜೆಲೊ ಮ್ಯಾಥ್ಯೂಸ್ ಸಿ ರಾಹುಲ್ ಬಿ ಯಾದವ್ 52
ದಿನೇಶ್ ಚಂಡಿಮಾಲ್ ಬ್ಯಾಟಿಂಗ್ 13
ನಿರೋಷನ್ ಡಿಕ್ವೆಲ್ಲ ಬ್ಯಾಟಿಂಗ್ 14
ಇತರ 4
ಒಟ್ಟು (4 ವಿಕೆಟಿಗೆ) 165
ವಿಕೆಟ್ ಪತನ: 1-29, 2-34, 3-133, 4-138.
ಬೌಲಿಂಗ್:
ಭುವನೇಶ್ವರ್ ಕುಮಾರ್ 14.4-2-49-2
ಮೊಹಮ್ಮದ್ ಶಮಿ 13.5-5-63-0
ಉಮೇಶ್ ಯಾದವ್ 13-1-50-2
ಆರ್. ಅಶ್ವಿನ್ 4-0-9-0
ವಿರಾಟ್ ಕೊಹ್ಲಿ 0.1-0-0-0