Advertisement
77 ರನ್ನುಗಳ ಮುನ್ನಡೆ ಪಡೆದ ದಕ್ಷಿಣ ಆಫ್ರಿಕಾ ದಿನದಾಟದ ಅಂತ್ಯಕ್ಕೆ 2 ವಿಕೆಟಿಗೆ 65 ರನ್ ಗಳಿಸಿದ್ದು, ಒಟ್ಟು 142 ರನ್ ಲೀಡ್ ಹೊಂದಿದೆ. ಎರಡೂ ವಿಕೆಟ್‌ಗಳು ಪಾಂಡ್ಯ ಪಾಲಾದವು. ಈ ಆಲ್‌ರೌಂಡ್ ಪ್ರದರ್ಶನದೊಂದಿಗೆ ಪಾಂಡ್ಯ 2ನೇ ದಿನದಾಟದ ಹೀರೋ ಎನಿಸಿಕೊಂಡರು. ಆರಂಭಿಕರಾದ ಮಾರ್ಕ್‌ರಮ್ 34 ಮತ್ತು ಎಲ್ಗರ್ 25 ರನ್ ಗಳಿಸಿ ಔಟಾಗಿದ್ದಾರೆ. ನೈಟ್ ವಾಚ್‌ಮನ್ ರಬಾಡ (2) ಮತ್ತು ಹಾಶಿಮ್ ಆಮ್ಲ (4) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.92 ರನ್ನಿಗೆ 7 ವಿಕೆಟ್ ಉದುರಿಸಿಕೊಂಡು ಭಾರೀ ಹಿನ್ನಡೆಯ ಭೀತಿಗೆ ಸಿಲುಕಿದ್ದ ಭಾರತವನ್ನು ಹಾರ್ದಿಕ್ ಪಾಂಡ್ಯ ಎತ್ತಿ ನಿಲ್ಲಿಸಿದರು. ಅವರಿಗೆ ಬೌಲರ್ ಭುವನೇಶ್ವರ್ ಕುಮಾರ್ ಅತ್ಯುತ್ತಮ ಬೆಂಬಲ ಒದಗಿಸಿದರು. ಇವರಿಬ್ಬರು ಸೇರಿಕೊಂಡು 8ನೇ ವಿಕೆಟಿಗೆ 99 ರನ್ ಪೇರಿಸುವ ಮೂಲಕ ಭಾರತದ ಸ್ಕೋರ್‌ಬೋರ್ಡ್‌ನಲ್ಲಿ ಇನ್ನೂರರ ಮೊತ್ತ ಕಾಣುವಂತೆ ಮಾಡಿದರು.
ಪ್ರವಾಸಿಗರ ಎಲ್ಲ ವಿಕೆಟ್‌ಗಳನ್ನೂ ವೇಗಿಗಳೇ ಉಡಾಯಿಸಿದರು. ಫಿಲಾಂಡರ್ ಮತ್ತು ರಬಾಡ ತಲಾ 3; ಸ್ಟೇನ್ ಮತ್ತು ಮಾರ್ಕೆಲ್ ತಲಾ 2 ವಿಕೆಟ್ ಕಿತ್ತರು. ಪೂಜಾರ ಅವರನ್ನು ಔಟ್ ಮಾಡುವ ಮೂಲಕ ಫಿಲಾಂಡರ್ ತವರಿನ ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಬೇಟೆ ಪೂರ್ತಿಗೊಳಿಸಿದರು.
Related Articles
ಭಾರತ 3ಕ್ಕೆ 28 ರನ್ ಮಾಡಿದಲ್ಲಿಂದ ಶನಿವಾರದ ಆಟ ಆರಂಭಿಸಿತು. ಚೇತೇಶ್ವರ್ ಪೂಜಾರ ಮತ್ತು ರೋಹಿತ್ ಶರ್ಮ ಅತ್ಯಂತ ಎಚ್ಚರಿಕೆಯಿಂದ ಸಾಗಿದರು. ಆಫ್ರಿಕನ್ನರ ವೇಗದ ದಾಳಿಯನ್ನು ನಿಭಾಯಿಸಸುವಲ್ಲಿ ಸಾಮಾನ್ಯ ಮಟ್ಟದ ಯಶಸ್ಸು ಕೂಡ ಸಿಕ್ಕಿತು. ಸ್ಕೋರ್ ನಿಧಾನ ಗತಿಯಲ್ಲಿ ಏರತೊಡಗಿತು. ಮೊದಲ ಅವಧಿಯಲ್ಲಿ ಉರುಳಿದ್ದು ರೋಹಿತ್ (59 ಎಸೆತ, 11 ರನ್) ವಿಕೆಟ್ ಮಾತ್ರ. ಭಾರತದ ಲಂಚ್ ಸ್ಕೋರ್ 4ಕ್ಕೆ 76 ರನ್.
Advertisement
ದ್ವಿತೀಯ ಅವಧಿಯ ಆಟದಲ್ಲಿ ಭಾರತ ಪೂಜಾರ, ಅಶ್ವಿನ್ ಮತ್ತು ಸಾಹಾ ಅವರನ್ನು ಕಳೆದುಕೊಂಡಿತು. ಪೂಜಾರ 154 ನಿಮಿಷ ನಿಂತು, 92 ಎಸೆತಗಳಿಂದ 26 ರನ್ ಮಾಡಿದರು. ಬಡ್ತಿ ಪಡೆದು ಬಂದ ಅಶ್ವಿನ್ 12 ರನ್ ಮಾಡಿದರೆ, ಸಾಹಾ ಖಾತೆಯನ್ನೇ ತೆರೆಯಲಿಲ್ಲ.
ಸ್ಕೋರ್ಪಟ್ಟಿದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ 286
ಭಾರತ ಪ್ರಥಮ ಇನ್ನಿಂಗ್ಸ್
ಮುರಳಿ ವಿಜಯ್ ಸಿ ಎಲ್ಗರ್ ಬಿ ಫಿಲಾಂಡರ್ 1
ಶಿಖರ್ ಧವನ್ ಸಿ ಮತ್ತು ಬಿ ಸ್ಟೇನ್ 16
ಚೇತೇಶ್ವರ್ ಪೂಜಾರ ಸಿ ಡು ಪ್ಲೆಸಿಸ್ ಬಿ ಫಿಲಾಂಡರ್ 26
ವಿರಾಟ್ ಕೊಹ್ಲಿ ಸಿ ಡಿ ಕಾಕ್ ಬಿ ಮಾರ್ಕೆಲ್ 5
ರೋಹಿತ್ ಶರ್ಮ ಎಲ್‌ಬಿಡಬ್ಲ್ಯು ರಬಾಡ 11
ಆರ್. ಅಶ್ವಿನ್ ಸಿ ಡಿ ಕಾಕ್ ಬಿ ಫಿಲಾಂಡರ್ 12
ಹಾರ್ದಿಕ್ ಪಾಂಡ್ಯ ಸಿ ಡಿ ಕಾಕ್ ಬಿ ರಬಾಡ 93
ವೃದ್ಧಿಮಾನ್ ಸಾಹ ಎಲ್‌ಬಿಡಬ್ಲ್ಯು ಸ್ಟೇನ್ 0
ಭುವನೇಶ್ವರ್ ಕುಮಾರ್ ಸಿ ಡಿ ಕಾಕ್ ಬಿ ಮಾರ್ಕೆಲ್ 25
ಮೊಹಮ್ಮದ್ ಶಮಿ ಔಟಾಗದೆ 4
ಜಸ್‌ಪ್ರೀತ್ ಬುಮ್ರಾ ಸಿ ಎಲ್ಗರ್ ಬಿ ರಬಾಡ 2
ಇತರ 14
ಒಟ್ಟು (ಆಲೌಟ್) 209 ವಿಕೆಟ್ ಪತನ: 1-16, 2-18, 3-27, 4-57, 5-76, 6-81, 7-92, 8-191, 9-199.
ಬೌಲಿಂಗ್:
ವೆರ್ನನ್ ಫಿಲಾಂಡರ್ 14,3-33-3
ಡೇಲ್ ಸ್ಟೇನ್ 17.3-6-51-2
ಮಾರ್ನೆ ಮಾರ್ಕೆಲ್ 19-6-57-2
ಕಾಗಿಸೊ ರಬಾಡ 16.4-4-34-3
ಕೇಶವ್ ಮಹಾರಾಜ್ 6-0-20-0