Advertisement

ಇಂದು ಭಾರತ-ಸ್ಕಾಟ್ಲೆಂಡ್‌ ಮಹತ್ವದ ಪಂದ್ಯ

08:11 AM Nov 05, 2021 | Team Udayavani |

ದುಬೈ: ಕೊನೆಗೂ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಹಳಿ ಏರುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ಗೆ ಸವಾಲೊಡ್ಡದೆಯೇ ಶರಣಾಗಿದ್ದ ಕೊಹ್ಲಿ ಪಡೆ; ಅಪಾಯಕಾರಿ ಎನಿಸಿದ್ದ ಅಫ್ಘಾನಿಸ್ತಾನ ವಿರುದ್ಧ ಅಮೋಘ ಪ್ರದರ್ಶನ ನೀಡಿ ಅಂಕದ ಖಾತೆ ತೆರೆದಿದೆ. ಶುಕ್ರವಾರ ಇದೇ ಹುರುಪಿನಲ್ಲಿ ಸ್ಕಾಟ್ಲೆಂಡ್‌ ಸವಾಲನ್ನು ಎದುರಿಸಲಿದೆ.

Advertisement

ಭಾರತ ಮೊದಲೆರಡು ಪಂದ್ಯಗಳಲ್ಲಿ ಆಡಿದ ರೀತಿಯನ್ನು ಕಂಡಾಗ ಅಫ್ಘಾನಿಸ್ತಾನ ವಿರುದ್ಧವೂ ಇವರಿಗೆ ಅಪಾಯ ಎದುರಾದೀತೆಂಬ ಆತಂಕ ಇತ್ತು. ಮೊಹಮ್ಮದ್‌ ನಬಿ ಪಡೆ ಕೂಟದ ಕಪ್ಪುಗುದುರೆ ಎನಿಸಿಕೊಂಡಿದ್ದರಿಂದ ಫಲಿತಾಂಶ ಏನಾದೀತು ಎಂಬ ಕುತೂಹಲವಿತ್ತು. ಅಫ್ಘಾನ್‌ ವಿರುದ್ಧವೂ ಕೊಹ್ಲಿ ತಂಡ ಸೋಲದಿರಲಿ ಎಂದು ಪ್ರಾರ್ಥಿಸಿದವರು ಅದೆಷ್ಟು ಮಂದಿಯೋ!

ಆದರೆ ಬುಧವಾರ ರಾತ್ರಿ ಅಬುಧಾಬಿ ಅಂಗಳದಲ್ಲಿ ಭಾರತ ತನ್ನ ನೈಜ ಆಟಕ್ಕೆ ಮರಳುವ ಮೂಲಕ ಮತ್ತೆ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇಂಥದೇ ಪ್ರದರ್ಶನವನ್ನು ಕನಿಷ್ಠ ಕಳೆದೊಂದು ಪಂದ್ಯದಲ್ಲಿ ನೀಡಿರುತ್ತಿದ್ದರೆ ಇಂಥ ಸಂಕಟದ ಸ್ಥಿತಿಯನ್ನು ಎದುರಿಸುವ ಪ್ರಮೇಯ ಖಂಡಿತ ಎದುರಾಗುತ್ತಿರಲಿಲ್ಲ ಎಂದು ಅಭಿಮಾನಿಗಳು ಪರಿತಪಿಸುತ್ತಿರುವುದರಲ್ಲೂ ಅರ್ಥವಿದೆ. ಮುಂದಿನ ಮಾರ್ಗ ಏನು ಎಂಬುದಷ್ಟೇ ಇನ್ನು ಮುಖ್ಯ.

ಸಂಕಟದಲ್ಲಿ ಸ್ಕಾಟ್ಲೆಂಡ್‌: ಇರಲಿ… ಸ್ಕಾಟ್ಲೆಂಡ್‌ ವಿಚಾರಕ್ಕೆ ಬರೋಣ. ಇದು ಅರ್ಹತಾ ಸುತ್ತಿ­ನಲ್ಲಿ ಬಾಂಗ್ಲಾದೇಶವನ್ನೂ ಮಣಿಸಿ, ಗೆಲುವಿನ ಹ್ಯಾಟ್ರಿಕ್‌ ಸಾಧಿಸಿ ಸೂಪರ್‌-12 ಹಂತಕ್ಕೆ ಬಂದಿತ್ತು. ಆದರೆ ಇಲ್ಲಿ ಹ್ಯಾಟ್ರಿಕ್‌ ಸೋಲಿನ ಸಂಕಟಕ್ಕೆ ಸಿಲುಕಿತು. ಹೀಗಾಗಿ ಭಾರತ ವಿರುದ್ಧ ಏರುಪೇರಿನ ಫಲಿತಾಂಶ ಅಸಾಧ್ಯ ಎಂದೇ ಹೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next