Advertisement

ಲಾರ್ಡ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ ಪಡೆ

10:21 PM Aug 10, 2021 | Team Udayavani |

ಲಂಡನ್‌: ಆತಿಥೇಯ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯವಾಡುವ ಸಲುವಾಗಿ ಕೊಹ್ಲಿ ಪಡೆ ಈಗಾಗಲೇ ಲಂಡನ್‌ ತಲುಪಿದ್ದು. ಅದರಂತೆ ಮಂಗಳವಾರ ಅಭ್ಯಾಸದಲ್ಲಿ ತೊಡಗಿದೆ. ಆ.12 ಗುರುವಾರದಿಂದ ಲಾರ್ಡ್ಸ್‌ ಮೈದಾನದಲ್ಲಿ ಪಂದ್ಯ ಆರಂಭವಾಗಲಿದೆ.

Advertisement

ಆದರೆ ಬದಲಿನ ಆಟಗಾರರಾಗಿ ಇಂಗ್ಲೆಂಡ್‌ಗೆ ತೆರಳಿರುವ ಸೂರ್ಯಕುಮಾರ್‌ ಯಾದವ್‌ ಮತ್ತು ಪೃಥ್ವಿ ಶಾ ಕ್ವಾರಟೈನ್‌ ಅವಧಿ ಮುಕ್ತಾಯಗೊಳ್ಳದ ಹಿನ್ನೆಲೆಯಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿಯೇ ಉಳಿದಿದ್ದಾರೆ. ಇವರ ಕ್ವಾರಂಟೈನ್‌ ಅವಧಿ ಆ.13ಕ್ಕೆ ಮುಕ್ತಾಯಗೊಳ್ಳಲಿದ್ದು ಆ. 14ರಿಂದ ಟೀಮ್‌ ಇಂಡಿಯಾ ಸದಸ್ಯರ ಜತೆ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಭಯ ಆಟಗಾರರು ಆ.25 ರಿಂದ ಲೀಡ್ಸ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ ಪಂದ್ಯಕ್ಕೆ ಲಭ್ಯರಿರುವರು.

ಅಭ್ಯಾಸ ನಡೆಸಿದ ಆಟಗಾರರು:

ಸೋಮವಾರ ಲಂಡನ್‌ಗೆ ಬಂದಿಳಿದ ಭಾರತೀಯ ಆಟಗಾರರು ಮಂಗಳವಾರ ಹೊರಾಂಗಣ ಅಭ್ಯಾಸದಲ್ಲಿ ತೊಡಗಿಕೊಂಡರು. ಕೆಲ ಕಾಲ ರನ್ನಿಂಗ್‌ ಅಭ್ಯಾಸ ನಡೆಸಿ ಬಳಿಕ ನೆಟ್ಸ್‌ನಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಅಭ್ಯಾಸ ನಡೆಸುತ್ತಿರುವ ಫೋಟೋವೊಂದನ್ನು ಬಿಸಿಸಿಐ ಟ್ವೀಟ್‌ ಮಾಡಿದ್ದು “ಹಲೋ ಲಾರ್ಡ್ಸ್‌ ನಾವು ಇಲ್ಲಿದ್ದೇವೆ’ ಎಂದು ಬರೆದುಕೊಂಡಿದೆ.

2ನೇ ಟೆಸ್ಟ್‌ಗೆ ಗಂಗೂಲಿ ಹಾಜರ್‌ :

Advertisement

ಭಾರತದಿಂದ ಲಂಡನ್‌ಗೆ ತೆರಳುವ ಪ್ರವಾಸಿಗರಿಗೆ ಯುಕೆ ಸರಕಾರ ನಿರ್ಬಂಧ ಸಡಿಲಗೊಳಿಸಿರುವ ಕಾರಣ ದ್ವಿತೀಯ ಟೆಸ್ಟ್‌ ಪಂದ್ಯ ವೀಕ್ಷಣೆಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತೆರಳಲಿದ್ದಾರೆ. ಬ್ರಿಟನ್‌ ಆರೋಗ್ಯ ಇಲಾಖೆ ಪ್ರಕಾರ ಎರಡು ಡೋಸ್‌ ಲಸಿಕೆ ಪಡೆದಿರುವ ಯಾವುದೇ ವ್ಯಕ್ತಿಗೆ ಲಂಡನ್‌ಗೆ ಬರಬಹುದು ಮತ್ತು 10 ದಿನಗಳ ಕಠಿನ ಕ್ವಾರಂಟೈನ್‌ ಅಗತ್ಯವಿಲ್ಲ ಎಂದು ತಿಳಿಸಿದೆ. ಇನ್ನು ಗಂಗೂಲಿ ಜತೆ ಬಿಸಿಸಿಐ ಕಾರ್ಯ ದರ್ಶಿ ಜಯ್‌ ಶಾ, ಉಪಾಧ್ಯಕ್ಷ ರಾಜಿವ್‌ ಶುಕ್ಲಾ, ಖಜಾಂಜಿ ಅರುಣ್‌ ಧುಮಲ್‌ ಸೇರಿದಂತೆ ಮತ್ತಿತರರು ಪಂದ್ಯ ವೀಕ್ಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂಗ್ಲೆಂಡ್‌ ತಂಡ ಸೇರಿದ ಮೊಯಿನ್‌ ಅಲಿ :

ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಮೊಯಿನ್‌ ಅಲಿ ಮಂಗಳವಾರ ತಂಡದ ಇತರ ಆಟಗಾರರೊಂದಿಗೆ ಅಭ್ಯಾಸ ನಡೆಸಿದ್ದು ದ್ವಿತೀಯ ಪಂದ್ಯಕ್ಕೆ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಮಾಹಿತಿ ನೀಡಿದೆ. ಆಲ್‌ರೌಂಡರ್‌ಗಳಾದ ಬೆನ್‌ ಸ್ಟೋಕ್ಸ್‌ ಮತ್ತು ಕ್ರಿಸ್‌ ವೋಕ್ಸ್‌ ಅನುಪಸ್ಥಿಯಲ್ಲಿ ಮೊಯಿನ್‌ ಅಲಿ ತಂಡಕ್ಕೆ ನೆರವಾಗಬಲ್ಲರು ಜತೆಗೆ ಮೊದಲ ಪಂದ್ಯದಲ್ಲಿ ತಂಡದಲ್ಲಿದ್ದ ಆಲ್‌ರೌಂಡರ್‌ ಸಮಸ್ಯೆಯೂ ಅಲಿ ಆಗಮನದಿಂದ ಈಗ ನೀಗಿದೆ ಎಂದು ಕೋಚ್‌ ಸಿಲ್ವರ್‌ವುಡ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next