Advertisement
ಮೊದಲು ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ 5 ಪಂದ್ಯಗಳ ಸರಣಿಯನ್ನಾಡಿದ ಭಾರತ, ಇದನ್ನು 4-1 ಅಂತರದಿಂದ ಜಯಿಸಿತ್ತು. ನಾಯಕರಾಗಿದ್ದವರು ಶುಭಮನ್ ಗಿಲ್. ಬಳಿಕ ಶ್ರೀಲಂಕಾ ವಿರುದ್ಧ ಅವರದೇ ನೆಲದಲ್ಲಿ ಆಡಲಾದ ಸರಣಿಯನ್ನು 3-0 ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಂಡಿತು. ಈ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕತ್ವವಿತ್ತು. ಬಾಂಗ್ಲಾ ವಿರುದ್ಧ ಸೂರ್ಯ ಅವರೇ ಸಾರಥಿಯಾಗಿದ್ದಾರೆ. ಅಂದಹಾಗೆ, ಇದು ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡ ತವರಲ್ಲಿ ಆಡುತ್ತಿರುವ ಮೊದಲ ಟಿ20 ಸರಣಿ. ಹೀಗಾಗಿ ಕುತೂಹಲ ಜಾಸ್ತಿ.
Related Articles
Advertisement
ಇವರಂತೆ ದಿಲ್ಲಿ ಪೇಸರ್ ಹರ್ಷಿತ್ ರಾಣಾ, ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ಟಿ20 ಪದಾರ್ಪಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ರಾಣಾ ಕಳೆದ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಗಾಯಾಳಾಗಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು.
ತಂಡದಲ್ಲಿರುವ 3 ದೊಡ್ಡ ಹೆಸರೆಂದರೆ ನಾಯಕ ಸೂರ್ಯಕುಮಾರ್ ಯಾದವ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೀಪರ್ ಸಂಜು ಸ್ಯಾಮ್ಸನ್ ಅವರದು. ರಿಂಕು, ಅರ್ಷದೀಪ್, ವಾಷಿಂಗ್ಟನ್, ಬಿಷ್ಣೋಯಿ ಮೊದಲಾದವರು ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ.
ಐಪಿಎಲ್ ಹೀರೋ, ಜಿಂಬಾಬ್ವೆಯಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಅಭಿಷೇಕ್ ಶರ್ಮ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇವರಿಗೆ ಸ್ಯಾಮ್ಸನ್ ಜೋಡಿಯಾಗುವ ಸಾಧ್ಯತೆ ಇದೆ. ಪರಾಗ್, ಜಿತೇಶ್ ಶರ್ಮ, ವರುಣ್ ಚಕ್ರವರ್ತಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ಆದರೆ ಶಿವಂ ದುಬೆ ಗಾಯಾಳಾಗಿ ಸರಣಿಯಿಂದ ಬೇರ್ಪಟ್ಟಿದ್ದು, ಇವರ ಸ್ಥಾನಕ್ಕೆ ತಿಲಕ್ ವರ್ಮ ಬಂದಿದ್ದಾರೆ.
ಕಾಡಲಿದೆ ಶಕಿಬ್ ಗೈರು:
ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಅವರ ನಿವೃತ್ತಿ ಬಾಂಗ್ಲಾದೇಶಕ್ಕೆ ಹಿನ್ನಡೆಯಾಗಿ ಪರಿಣಮಿಸಬಹುದು. ಇದರ ಹೊರತಾಗಿಯೂ ಬಾಂಗ್ಲಾ ಟಿ20 ಸ್ಪೆಷಲಿಸ್ಟ್ ಆಟಗಾರರನ್ನೇ ಹೊಂದಿದೆ. ಆಫ್ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ 14 ತಿಂಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಹಿರಿಯ ಬ್ಯಾಟರ್ ಮಹ್ಮದುಲ್ಲ ಅವರನ್ನೂ ಕರೆಸಿಕೊಳ್ಳಲಾಗಿದೆ. ಉಳಿದಂತೆ ಟೆಸ್ಟ್ ಸರಣಿಯ ಪ್ರಮುಖರೆಲ್ಲ ಬಾಂಗ್ಲಾ ತಂಡದಲ್ಲಿದ್ದಾರೆ.
14 ವರ್ಷ ಬಳಿಕ ಗ್ವಾಲಿಯರ್‌ನಲ್ಲಿ ಪಂದ್ಯ:
ಗ್ವಾಲಿಯರ್‌ನಲ್ಲಿ 14 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯವೊಂದು ನಡೆಯಲಿದೆ. ಇಲ್ಲಿ ಕೊನೆಯ ಪಂದ್ಯ ನಡೆದದ್ದು 2010ರಲ್ಲಿ. ಅದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯವಾಗಿತ್ತು. ಸಚಿನ್ ತೆಂಡುಲ್ಕರ್ ಅವರ “ಫೇಮಸ್ ಡಬಲ್ ಸೆಂಚುರಿ’ಯಿಂದ ಈ ಪಂದ್ಯ ಮನೆಮಾತಾಗಿತ್ತು.
ವೇಳಾಪಟ್ಟಿ:
ಅ. 6 ಮೊದಲ ಟಿ20 ಗ್ವಾಲಿಯರ್
ಅ. 9 2ನೇ ಟಿ20 ಹೊಸದಿಲ್ಲಿ
ಅ. 12 3ನೇ ಟಿ20 ಹೈದರಾಬಾದ್
ಪ್ರಸಾರ: ಸ್ಪೋರ್ಟ್ಸ್ 18