Advertisement
ಮೊಹಾಲಿಯಲ್ಲಿ ಭಾರತಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಿದ್ದು ಬೌಲಿಂಗ್ ದೌರ್ಬಲ್ಯ. ಅದರಲ್ಲೂ ಡೆತ್ ಓವರ್ ಬೌಲಿಂಗ್ ಸಂಪೂರ್ಣ ನೆಲಕಚ್ಚಿತ್ತು. ಆದರೆ ಮೊಹಾಲಿ ಟ್ರ್ಯಾಕ್ ಸಂಪೂರ್ಣವಾಗಿ ಬ್ಯಾಟಿಂಗ್‌ಗೆ ಸಹಕರಿಸುತ್ತಿದ್ದುದನ್ನೂ ಅಲ್ಲಗಳೆಯುವಂತಿಲ್ಲ. ಇದು ಬ್ಯಾಟಿಂಗ್ ಸ್ವರ್ಗವಾಗಿತ್ತು. ಆದರೂ ಕೊನೆಯ 5 ಓವರ್‌ಗಳಲ್ಲಿ ಬೌಲಿಂಗ್ ಹಿಡಿತ ಸಾಧಿಸಿದ್ದೇ ಆದರೆ ಭಾರತದ ಗೆಲುವಿನ ಸಾಧ್ಯತೆಯನ್ನು ತಳ್ಳಿಹಾಕು ವಂತಿರಲಿಲ್ಲ. ಸೋಲಿನಲ್ಲಿ ನಮ್ಮವರ ಕಳಪೆ ಫೀಲ್ಡಿಂಗ್ ಪಾಲೂ ಇದ್ದಿತ್ತು.
Related Articles
Advertisement
ಮೊಹಾಲಿಯಲ್ಲಿ ಬೌಲಿಂಗ್ ನಿಯಂತ್ರಣ ಸಾಧಿಸಿದ್ದು ಸ್ಪಿನ್ನರ್ ಅಕ್ಷರ್ ಪಟೇಲ್ ಮಾತ್ರ (4-0-17-3).
ಬ್ಯಾಟಿಂಗ್ ವಿಭಾಗದ ಸಮಸ್ಯೆ:
ಭಾರತದ ಬ್ಯಾಟಿಂಗ್ ವಿಭಾಗದಲ್ಲೂ ಸಮಸ್ಯೆಗಳಿವೆ. ರೋಹಿತ್, ಕೊಹ್ಲಿ ವೈಫಲ್ಯ ಅನುಭವಿಸಿದ್ದರು. ರೋಹಿತ್ ಸಿಡಿದರೂ ಅವರಿಗೆ ಇನ್ನಿಂಗ್ಸ್ ವಿಸ್ತರಿಸಲು ಸಾಧ್ಯವಾಗಲಿಲ್ಲ. ಅಫ್ಘಾನ್ ವಿರುದ್ಧ ಶತಕ ಹೊಡೆದಿದ್ದ ಕೊಹ್ಲಿ ಈ ಲಯದಲ್ಲಿ ಸಾಗದೇ ಹೋದರೆ ಅಗ್ರ ಕ್ರಮಾಂಕದ ಮೇಲೆ ಒತ್ತಡ ತಪ್ಪಿದ್ದಲ್ಲ. ಹಾಗೆಯೇ ದಿನೇಶ್ ಕಾರ್ತಿಕ್ ಬ್ಯಾಟ್ ಕೂಡ ಮಾತಾಡಿರಲಿಲ್ಲ. ಇವರು ರಿಷಭ್ ಪಂತ್‌ಗೆ ಜಾಗ ಬಿಡುವ ಸಾಧ್ಯತೆಯೊಂದಿದೆ. ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಮಾತ್ರ ಮೊಹಾಲಿ ಬ್ಯಾಟಿಂಗ್ ಹೀರೋಗಳೆನಿಸಿದ್ದರು.
ಆಸೀಸ್ ಬಲಾಡ್ಯ ತಂಡ :
ಕಳೆದ ಒಂದೆರಡು ವರ್ಷಗಳ ತನಕ ಟಿ20 ಕ್ರಿಕೆಟ್ ಪಂದ್ಯಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಆಸ್ಟ್ರೇಲಿಯ ಈಗ ಚುಟುಕು ಮಾದರಿಯಲ್ಲೂ ಆಧಿ ಪತ್ಯ ಸ್ಥಾಪಿಸಲು ಹೊರಟಿದೆ. ಹಾಲಿ ಚಾಂಪಿಯನ್ ಆಗಿರುವ ಆಸೀಸ್‌ಗೆ ತಮ್ಮಲ್ಲೇ ನಡೆಯುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಟ್ಟ ಉಳಿಸಿಕೊಳ್ಳುವ ತವಕ. ಇದಕ್ಕಾಗಿ ಟಿ20 ಸ್ಪೆಷಲಿಸ್ಟ್‌ಗಳನ್ನೇ ಕಟ್ಟಿಕೊಂಡು ಬಂದಿದೆ. ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್, ವಾರ್ನರ್ ಜಾಗವನ್ನು ಸಮರ್ಥ ರೀತಿಯಲ್ಲಿ ತುಂಬಿದ್ದಾರೆ. ನಾಯಕ ಫಿಂಚ್, ಅನುಭವಿ ಸ್ಟೀವನ್ ಸ್ಮಿತ್, ಕೀಪರ್ ಮ್ಯಾಥ್ಯೂ ವೇಡ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್ ಅವರೆಲ್ಲ ಆಸೀಸ್ ಬ್ಯಾಟಿಂಗ್ ಸರದಿಗೆ ಬಲ ತುಂಬಲಿದ್ದಾರೆ.
ಆಸೀಸ್ ಬೌಲಿಂಗ್ ಲೈನ್‌ಅಪ್ ಮೇಲ್ನೋಟಕ್ಕೆ ಘಾತಕವೆನಿಸಿದರೂ ಮೊಹಾಲಿಯಲ್ಲಿ ಛಿದ್ರಗೊಂಡಿತ್ತು. ಹೀಗಾಗಿ ಭಾರತದ ಬೌಲಿಂಗ್ ಹಳಿ ತಪ್ಪಿದ್ದರಲ್ಲಿ ಅಚ್ಚರಿ ಇಲ್ಲ ಎಂಬ ತೀರ್ಮಾನಕ್ಕೆ ಬರುವಂತಿಲ್ಲ!