Advertisement
ದೇಶದ ಬಹುತೇಕ ಕ್ರೀಡಾಭಿಮಾನಿಗಳು ರಶ್ಯದತ್ತ ಮುಖ ಮಾಡಿ ಮೆಸ್ಸಿ, ರೊನಾಲ್ಡೊ, ನೇಮರ್ ಮಂತ್ರ ಜಪಿಸುತ್ತಿರುವ ಸಂದರ್ಭದಲ್ಲೇ ಇತ್ತ ಕ್ರಿಕೆಟ್ ಅಭಿಮಾನಿಗಳು ರಶೀದ್ ಖಾನ್, ರಹಾನೆ, ಧವನ್ ಆಟವನ್ನು ಆಸ್ವಾದಿಸತೊಡಗಬೇಕಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿ ತಪ್ಪಿದ್ದಲ್ಲ ಎಂಬುದು ಸದ್ಯದ ಸ್ಥಿತಿ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಈಗಾಗಲೇ ತನ್ನ ಛಾಪು ಮೂಡಿಸಿ ರುವ ಅಫ್ಘಾನಿಸ್ಥಾನಕ್ಕೆ 5 ದಿನಗಳ ಪಂದ್ಯಕ್ಕೆ ಹೊಂದಿಕೊಳ್ಳುವುದು ಆರಂಭದಲ್ಲಿ ಸಹಜವಾಗಿಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸ ಬಹುದು. ಬಾಂಗ್ಲಾದೇಶ ವಿರುದ್ಧ ಡೆಹ್ರಾ ಡೂನ್‌ನಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿರುವ ಅಫ್ಘಾನ್, ಚೊಚ್ಚಲ ಟೆಸ್ಟ್ ಪಂದ್ಯ ಕ್ಕಾಗಿ ಹೆಚ್ಚಿನ ಆತ್ಮವಿಶ್ವಾಸ ಗಳಿಸಿರು ವುದು ನಿಜ. ಆದರೆ “ನಿಂತು ಆಡುವ’ ಕಲೆಗಾರಿಕೆಯನ್ನು ಹಂತ ಹಂತವಾಗಿಯೇ ಕರಗತ ಮಾಡಿ ಕೊಳ್ಳ ಬೇಕಿದೆ. ಅಂಗಳಕ್ಕಿಳಿಯದ ಹೊರತು ಟೆಸ್ಟ್ ಅಂದರೇನೆಂಬುದು ಅರಿವಾಗದು ಎಂಬ ಅಫ್ಘಾನ್ ಕೋಚ್ ಫಿಲ್ ಸಿಮನ್ಸ್ ಹೇಳಿಕೆ ಹೆಚ್ಚು ಅರ್ಥಪೂರ್ಣ. ಅಫ್ಘಾನ್ ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದಿರುವ ತಂಡ. ಅದರಲ್ಲೂ ಸ್ಪಿನ್ ವಿಭಾಗ ಹೆಚ್ಚು ಬಲಿಷ್ಠ. ರಶೀದ್ ಖಾನ್ ಈಗಾಗಲೇ ವಿಶ್ವ ಮಟ್ಟದ ಸ್ಪಿನ್ನರ್ ಆಗಿ ಗುರುತಿಸಿ ಕೊಂಡಾಗಿದೆ. ಇವರ ಟೆಸ್ಟ್ ಬೌಲಿಂಗ್ ಬಗ್ಗೆ ಕುತೂಹಲ ಸಹಜ.
Related Articles
Advertisement
ತಂಡಗಳುಭಾರತ: ಅಜಿಂಕ್ಯ ರಹಾನೆ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಕೆ.ಎಲ್. ರಾಹುಲ್, ಕರುಣ್ ನಾಯರ್, ದಿನೇಶ್ ಕಾರ್ತಿಕ್ (ವಿ.ಕೀ.), ಹಾರ್ದಿಕ್ ಪಾಂಡ್ಯ, ಶಾದೂìಲ್ ಠಾಕೂರ್, ನವದೀಪ್ ಸೈನಿ, ಆರ್. ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಇಶಾಂತ್ ಶರ್ಮ, ಉಮೇಶ್ ಯಾದವ್. ಅಫ್ಘಾನಿಸ್ಥಾನ: ಅಸ್ಕರ್ ಸ್ತಾನಿಕ್‌ಜಾಯ್ (ನಾಯಕ), ಮೊಹಮ್ಮದ್ ಶಾಜಾದ್, ಜಾವೇದ್ ಅಹ್ಮದಿ, ರೆಹಮಾನ್ ಶಾ, ಇಹಸಾನುಲ್ಲ ಜನತ್, ನಾಸಿರ್ ಜಮಾಲ್, ಹಶ್ಮತುಲ್ಲ ಶಾಹಿದಿ, ಅಫ್ಜರ್ ಜಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಜಹೀರ್ ಖಾನ್, ಆಮಿರ್ ಹಮ್ಜ ಹೋಟಕ್, ಸಯ್ಯದ್ ಅಹ್ಮದ್ ಶಿರ್ಜಾದ್, ಯಾಮಿನ್ ಅಹ್ಮದ್‌ಜಾಯ್ ವಫಾದಾರ್, ಮುಜೀಬ್ ಉರ್ ರೆಹಮಾನ್.