Advertisement
ಆರಂಭಿಕ ಬಳಿಕ ಟೆಸ್ಟ್ ಅನುಭವಿ ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರನ್ನು ತಂಡ ಕಳೆದುಕೊಂಡಿದೆ. ಪೂಜಾರ ಮತ್ತು ಕೊಹ್ಲಿ 14 ರನ್ನಿಗೆ ಔಟಾದರೆ ಜಡೇಜ 48 ರನ್ ಗಳಿಸಿ ಔಟಾದರು. ಅವರು ಅಜಿಂಕ್ಯ ರಹಾನೆ ಜತೆ ಐದನೇ ವಿಕೆಟಿಗೆ 71 ರನ್ ಪೇರಿಸಿದ್ದು ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ದ್ವಿತೀಯ ದಿನದ ಆಟ ನಿಂತಾಗ ರಹಾನೆ 29 ಮತ್ತು ಶ್ರೀಕರ್ ಭರತ್ 5 ರನ್ನಿನಿಂದ ಆಡುತ್ತಿದ್ದರು. ಮೂರನೇ ದಿನದ ಬೆಳಗ್ಗಿನ ಅವಧಿಯಲ್ಲಿ ಭಾರತ ಎಚ್ಚರಿಕೆಯಿಂದ ಆಡಿ ಫಾಲೋಆನ್ ತಪ್ಪಿಸಲು ಪ್ರಯತ್ನಿಸಬೇಕಾಗಿದೆ.
ಟೀ ವಿರಾಮದ ಮೊದಲು 10 ಓವರ್ ಆಡಿದ ಭಾರತವು ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ನಾಯಕ ರೋಹಿತ್ ಶರ್ಮ 15 ರನ್ನಿಗೆ ಔಟಾದರೆ ಶುಭ್‌ಮನ್ ಗಿಲ್ ಅವರು ಸ್ಕಾಟ್ ಬೋಲ್ಯಾಂಡ್ ಅವರ ಎಸೆತವನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿ ಕ್ಲೀನ್‌ಬೌಲ್ಡ್ ಆದರು.
Related Articles
ಈ ಮೊದಲು ಮೂರು ವಿಕೆಟಿಗೆ 327 ರನ್ನುಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ತಂಡವು ಟ್ರ್ಯಾವಿಸ್ ಹೆಡ್, ಸ್ಮಿತ್ ಮತ್ತು ಕ್ಯಾರಿ ಅವರ ಉತ್ತಮ ಆಟದಿಂದಾಗಿ 469 ರನ್ ಗಳಿಸಿ ಆಲೌಟಾಯಿತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ಹೆಡ್ ಮತ್ತು ಸ್ಮಿತ್ ಆಟ ಮುಂದುವರಿಸಿದ್ದು ನಾಲ್ಕನೇ ವಿಕೆಟಿಗೆ 285 ರನ್ನುಗಳ ಜತೆಯಾಟ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
Advertisement
ಮೊದಲ ದಿನ 95 ರನ್ ಗಳಿಸಿದ್ದ ಸ್ಮಿತ್ ದ್ವಿತೀಯ ದಿನ ಸಿರಾಜ್ ಅವರ ಬೌಲಿಂಗ್‌ನಲ್ಲಿ ಎರಡು ಬೌಂಡರಿ ಬಾರಿಸಿ ಶತಕ ಪೂರ್ತಿಗೊಳಿಸಿದರು. ಇದು ಇಂಗ್ಲೆಂಡಿನಲ್ಲಿ ಅವರ ಏಳನೇ ಮತ್ತು ಓವಲ್‌ನಲ್ಲಿ ಮೂರನೇ ಶತಕವಾಗಿದೆ. ಒಟ್ಟಾರೆ ಟೆಸ್ಟ್ ಬಾಳ್ವೆಯ 31ನೇ ಶತಕ ಆಗಿದೆ. ಸ್ಮಿತ್ ಅಂತಿಮವಾಗಿ 268 ಎಸೆತ ಎದುರಿಸಿ 121 ರನ್ ಗಳಿಸಿ ಔಟಾದರು. ಮೊದಲ ದಿನ ಶತಕ ಸಿಡಿಸಿ ಸಂಭ್ರಮಿಸಿದ್ದ ಹೆಡ್ 174 ಎಸೆತಗಳಿಂದ 163 ರನ್ ಗಳಿಸಿ ಔಟಾದರು. 25 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು.
ಕೊನೆ ಹಂತದಲ್ಲಿ ಅಲೆಕ್ಸ್ ಕ್ಯಾರಿ ಬಿರುಸಿನ ಆಟ ಆಡಿದ್ದರಿಂದ ಆಸ್ಟ್ರೇಲಿಯದ ಮೊತ್ತ 450ರ ಗಡಿ ದಾಟುವಂತಾಯಿತು. ಅವರು 69 ಎಸೆತಗಳಿಂದ 48 ರನ್ ಹೊಡೆದರು. ಈ ನಡುವೆ ಭಾರತ ಬೆಳಗ್ಗಿನ ಅವಧಿಯಲ್ಲಿ ಆಸ್ಟ್ರೇಲಿಯದ ನಾಲ್ಕು ವಿಕೆಟ್ ಕಿತ್ತ ಕಾರಣ ಸ್ವಲ್ಪಮಟ್ಟಿಗೆ ಮೇಲುಗೈ ಸಾಧಿಸಿತ್ತು.
ಬಿಗು ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 108 ರನ್ನಿಗೆ 4 ವಿಕೆಟ್ ಪಡೆದರೆ ಶಮಿ ಮತ್ತು ಠಾಕೂರ್ ತಲಾ ಎರಡು ವಿಕೆಟ್ ಕಿತ್ತರು.