Advertisement

ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಕಡಿತಕ್ಕೆ ಕೇಂದ್ರ ನಿರ್ಧಾರ

10:24 PM Mar 18, 2021 | Team Udayavani |

ನವದೆಹಲಿ: ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಭಾರತ ನಿರ್ಧರಿಸಿದೆ. ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂಬ ಮನವಿಗೆ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ, ಒಪೆಕ್‌ ಪುರಸ್ಕರಿಸದೇ ಇದ್ದುದನ್ನು ಖಂಡಿಸಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ, ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಮಂಗಳೂರು ತೈಲ ಶುದ್ಧೀಕರಣಗಾರ ಮತ್ತು ಪೆಟ್ರೋಕೆಮಿಕಲ್ಸ್‌ ಜತೆಯಾಗಿ 10.8 ಮಿಲಿಯನ್‌ ಬ್ಯಾರಲ್‌ ಕಚ್ಚಾತೈಲವನ್ನು ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಖರೀದಿಸಿದ ಬಳಿಕ ಮೇ ಮಧ್ಯಭಾಗದಿಂದ ನಿರ್ಧಾರ ಜಾರಿಯಾಗಲಿದೆ. ಸೌದಿ ಅರೇಬಿಯಾದಿಂದಲೇ 14.7- 14.8 ಮಿಲಿಯ ಬ್ಯಾರಲ್‌ ಕಚ್ಚಾ ತೈಲವನ್ನು ಭಾರತ ಆಮದು ಮಾಡುತ್ತಿದೆ.

ಆ ಬಳಿಕ ಕಚ್ಚಾ ತೈಲವನ್ನು ಅಮೆರಿಕದಿಂದ ಖರೀದಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಕಚ್ಚಾ ತೈಲ ಉತ್ಪಾದನೆ ಕಡಿಮೆ ಮಾಡುವ ಒಪೆಕ್‌ ರಾಷ್ಟ್ರಗಳ ನಿರ್ಧಾರದಿಂದ ದೇಶದಲ್ಲಿ ತೈಲೋತ್ಪನ್ನಗಳ ದರ ಗಣನೀಯವಾಗಿ ಏರಿಕೆಯಾಗಿ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸೌದಿ ಅರೇಬಿಯಾದಿಂದ ಮುಂದಿನ ತಿಂಗಳು ಕೂಡ ಕಚ್ಚಾ ತೈಲ ಭಾರತಕ್ಕೆ ಬರಲಿದೆ. ಮೇ ಬಳಿಕ ಸೌದಿ ಅರೇಬಿಯಾದಿಂದ ಎಷ್ಟು ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿ ಮಾಡಬೇಕು ಎಂಬ ಬಗ್ಗೆ ನಂತರ ತೀರ್ಮಾನಿಸಲಾಗುತ್ತದೆ.

ಇದನ್ನೂ ಓದಿ :ಐಫೋನ್‌ ತಯಾರಿಕಾ ಘಟಕ ಧ್ವಂಸ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

Advertisement

Udayavani is now on Telegram. Click here to join our channel and stay updated with the latest news.

Next