Advertisement

India ತಿರುಗೇಟು; ಬಾಂಗ್ಲಾದೇಶ ರಾಯಭಾರಿಗೆ ಸಮನ್ಸ್

05:54 PM Jan 13, 2025 | Team Udayavani |

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಳಸಿರುವ ಮಧ್ಯೆಯೇ, ಬಾಂಗ್ಲಾದ ಡೆಪ್ಯುಟಿ ಹೈ ಕಮಿಷನರ್ ನೂರಾಲ್ ಇಸ್ಲಾಂ ಅವರಿಗೆ ಸೋಮವಾರ ಭಾರತ ಸರಕಾರ ಸಮನ್ಸ್ ನೀಡಿ ಕರೆಸಿದೆ. ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮ ಅವರಿಗೆ ಸಮನ್ಸ್ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದ್ದು, ಏಟಿಗೆ ತಿರುಗೇಟು ಎನ್ನುವಂತಾಗಿದೆ.

Advertisement

ನೂರಾಲ್ ಇಸ್ಲಾಂ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಸಮನ್ಸ್ ಪಡೆದ ನಂತರ ಸೌತ್ ಬ್ಲಾಕ್‌ನಿಂದ ಹೊರಟು ಹೋಗುತ್ತಿರುವುದು ಕಂಡುಬಂದಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಐದು ಸ್ಥಳಗಳಲ್ಲಿ ಬೇಲಿಗಳನ್ನು ನಿರ್ಮಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಢಾಕಾ ಆರೋಪಿಸಿದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಗಡಿ ಉದ್ವಿಗ್ನತೆ ತೀವ್ರವಾಗಿ ಉಲ್ಬಣಗೊಂಡಿದೆ.

“ಬಿಎಸ್ಎಫ್ ಮತ್ತು ಬಿಜಿಬಿ (ಬಾಂಗ್ಲಾದೇಶ) ಈ ನಿಟ್ಟಿನಲ್ಲಿ ಸಂವಹನ ನಡೆಸುತ್ತಿವೆ.ತಿಳಿವಳಿಕೆಯನ್ನು ಕಾರ್ಯಗತಗೊಳಿಸಲಾಗುವುದು ಮತ್ತು ಗಡಿಯಲ್ಲಿ ಅಪರಾಧಗಳನ್ನು ಎದುರಿಸಲು ಸಹಕಾರಿ ವಿಧಾನ ಅನುಸರಿಸಲಾಗುತ್ತದೆ” ಎಂದು ಪ್ರಣಯ್ ವರ್ಮ ಪ್ರತಿಕ್ರಿಯೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.