Advertisement

“ಪ್ರಳಯ್‌’ಪರೀಕ್ಷೆ ಯಶಸ್ವಿ : ಪಯಣದ ಮಧ್ಯೆಯೇ ಪಥ ಬದಲಿಸುವ ಹೊಸ ತಲೆಮಾರಿನ ಕ್ಷಿಪಣಿ

08:17 PM Dec 22, 2021 | Team Udayavani |

– ಉಡಾವಣೆಯಾದ ಸಮಯ- ಬುಧವಾರ ಬೆಳಗ್ಗೆ 10.30
– ಪ್ರಳಯ್‌ ಕ್ಷಿಪಣಿಯ ವ್ಯಾಪ್ತಿ- 150- 500 ಕಿ.ಮೀ.
– ಪೇಲೋಡ್‌ ಸಾಮರ್ಥ್ಯ- 500-1000 ಕೆಜಿ.
– ಅತ್ಯಾಧುನಿಕ ನೇವಿಗೇಷನ್‌ ಮತ್ತು ಏವಿಯೋನಿಕ್ಸ್‌ ಒಳಗೊಂಡ ಮಾರ್ಗದರ್ಶನ ವ್ಯವಸ್ಥೆ
– ಈ ಕ್ಷಿಪಣಿ ಅಭಿವೃದ್ಧಿ ಯೋಜನೆಗೆ ಒಪ್ಪಿಗೆ ಸಿಕ್ಕಿದ್ದು- ಮಾರ್ಚ್‌ 2015ರಲ್ಲಿ
– ಒಟ್ಟಾರೆ ಯೋಜನೆಯ ವೆಚ್ಚ – 333 ಕೋಟಿ ರೂ.

Advertisement

ಬಾಲಸೋರ್‌ : ಸ್ವದೇಶಿ ನಿರ್ಮಿತ, ನೆಲದಿಂದ ನೆಲಕ್ಕೆ ಚಿಮ್ಮಬಲ್ಲ “ಪ್ರಳಯ್‌’ ಕ್ಷಿಪಣಿಯ ಚೊಚ್ಚಲ ಪರೀಕ್ಷೆ ಬುಧವಾರ ಯಶಸ್ವಿಯಾಗಿ ನೆರವೇರಿದೆ.

ಒಡಿಶಾದ ಬಾಲಸೋರ್‌ನ ಎಪಿಜೆ ಅಬ್ದುಲ್‌ ಕಲಾಂ ದ್ವೀಪದಿಂದ ಬೆಳಗ್ಗೆ 10.30ಕ್ಕೆ ಸರಿಯಾಗಿ ಈ ಅಲ್ಪ ವ್ಯಾಪ್ತಿಯ ಅತ್ಯಾಧುನಿಕ ಕ್ಷಿಪಣಿ ನಭಕ್ಕೆ ಚಿಮ್ಮಿದ್ದು, ನಿಖರವಾಗಿ ತನ್ನ ಗುರಿ ತಲುಪಿದೆ ಎಂದು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ(ಡಿಆರ್‌ಡಿಒ) ತಿಳಿಸಿದೆ.

ಭಾರತದ ಖಂಡಾಂತರ ಕ್ಷಿಪಣಿ ಯೋಜನೆಯ ಪೃಥ್ವಿ ಡಿಫೆನ್ಸ್‌ ವೆಹಿಕಲ್‌ ಆಧರಿಸಿ ಪ್ರಳಯ್‌ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸ ತಲೆಮಾರಿನ ಈ ಕ್ಷಿಪಣಿಯು ದೇಶದ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಬಲ ತಂದುಕೊಡಲಿದೆ ಎಂದು ಡಿಆರ್‌ಡಿಒ ಮುಖ್ಯಸ್ಥ ಡಾ. ಜಿ. ಸತೀಶ್‌ ರೆಡ್ಡಿ ಹೇಳಿದ್ದಾರೆ.

ವೈಶಿಷ್ಟ್ಯ :
ಪ್ರಳಯ್‌ ನೆಲದಿಂದ ನೆಲಕ್ಕೆ ಚಿಮ್ಮಬಲ್ಲ, ಭಾಗಶಃ ಖಂಡಾಂತರ ಕ್ಷಿಪಣಿಯಾಗಿದೆ. ಪ್ರತಿಬಂಧಕ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲಂಥ ಛಾತಿ ಹೊಂದುವಂತೆ ಈ ಸುಧಾರಿತ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ನಿರ್ದಿಷ್ಟ ದೂರ ಸಾಗಿದ ಬಳಿಕ ತನ್ನ ಪಥವನ್ನು ಬದಲಿಸುವಂಥ ವಿಶೇಷ ಸಾಮರ್ಥ್ಯ ಇದಕ್ಕಿದೆ.

Advertisement

ಡಿಆರ್‌ಡಿಒ ಇಂದು ಮಹತ್ವದ ಮೈಲುಗಲ್ಲೊಂದನ್ನು ಸಾಧಿಸಿದೆ. ಅತ್ಯಾಧುನಿಕ ಕ್ಷಿಪಣಿಯ ತ್ವರಿತಗತಿಯ ಅಭಿವೃದ್ಧಿ ಮತ್ತು ಯಶಸ್ವಿ ಉಡಾವಣೆಗೆ ಕಾರಣವಾದ ಡಿಆರ್‌ಡಿಒ ತಂಡಕ್ಕೆ ಅಭಿನಂದನೆಗಳು.
– ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next