Advertisement

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

12:23 PM Nov 23, 2024 | Team Udayavani |

ಜೈಪುರ: ಮೊಬೈಲ್ ಶೋರೂಮ್ ನಿಂದ ಕಳವುಗೈದು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು ಎರಡು ಕೋಟಿ ಮೌಲ್ಯದ ಐಫೋನ್‌ ವಶಕ್ಕೆ ಪಡೆದು ಪ್ರಕರಣದ ಮಾಸ್ಟರ್ ಮೈಂಡ್ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಜೈಪುರ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಏನಿದು ಪ್ರಕರಣ:
ನವೆಂಬರ್ 6 ರಂದು ರಮೀಂದ್ರ ಸಿಂಗ್ ಮಖಿಜಾ ಒಡೆತನದ ಮೊಬೈಲ್ ಶೋರೂಮ್ ಗೆ ಕನ್ನ ಹಾಕಿದ ಖದೀಮರು ಶೋರೂಂನಿಂದ 120ಕ್ಕೂ ಹೆಚ್ಚು ಐಫೋನ್‌ಗಳು ಮತ್ತು ಸುಮಾರು 150 ಹಳೆಯ ಐಫೋನ್‌ಗಳು, ಐಪ್ಯಾಡ್‌ಗಳು, ಮ್ಯಾಕ್‌ಬುಕ್‌ಗಳು ಸೇರಿದಂತೆ ಸುಮಾರು ಎರಡು ಕೋಟಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿ ಅವುಗಳನ್ನು ಮುಂಬೈ ವ್ಯಕ್ತಿಗೆ ಮಾರಾಟ ಮಾಡಿ ಬಳಿಕ ಆತ ಅವುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಎನ್ನಲಾಗಿದೆ.

ಶೋರೂಮ್ ನಲ್ಲಿ ಮೊಬೈಲ್ ಕಳವಾಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಜೈಪುರ ಪೊಲೀಸರು ಕಳ್ಳರ ಪತ್ತೆಗೆ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ನಾಲ್ವರು ಕಳ್ಳರನ್ನು ವಶಕ್ಕೆ ಪಡೆದು ಜೊತೆಗೆ ಕಳ್ಳರಿಂದ ಮೊಬೈಲ್ ಖರೀಸಿಸುತ್ತಿದ್ದ ಆರೋಪಿ ಸೇರಿದಂತೆ ಒಟ್ಟು ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಮಧ್ಯಪ್ರದೇಶ ಮೂಲದ ಮಾಸ್ಟರ್ ಮೈಂಡ್ ಸಫಾನ್ ಖಾನ್ (30), ರಾಮಭರೋಸ್ ಪಟೇಲ್ (27), ಜತಿನ್ ಹದಾ (18), ಮತ್ತು ರಾಜೇಶ್ ಅಲಿಯಾಸ್ ಖನ್ನಾ ಅಲಿಯಾಸ್ ಮಾಮಾ (45) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಕದ್ದ ಮಾಲು ಖರೀದಿಸಿದ ಗವಂಡಿ (ಮುಂಬೈ) ನಿವಾಸಿ ಸಮೀರ್ ಅಹಮದ್ ಶೇಖ್ (38) ಎಂಬಾತನನ್ನೂ ಬಂಧಿಸಲಾಗಿದೆ. ಅಲ್ಲದೆ ಆರೋಪಿಗಳ ವಶದಿಂದ 2 ಕೋಟಿ ಮೌಲ್ಯದ ಐಫೋನ್‌ಗಳು, 3.85 ಲಕ್ಷ ನಗದು ಮತ್ತು ಕಳ್ಳತನಕ್ಕೆ ಬಳಸಲಾದ ಬಾಡಿಗೆ ಕಾರು ವಶಪಡಿಸಿಕೊಳ್ಳಲಾಗಿದೆ.

Advertisement

ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಸಫಾನ್ ಖಾನ್ ಮೊಬೈಲ್ ಅಂಗಡಿ ಮಾಲೀಕ ರಮೀಂದ್ರ ಸಿಂಗ್ ಮಖಿಜಾ ಅವರ ಹಳೆಯ ಸ್ನೇಹಿತನಾಗಿದ್ದ ಎನ್ನಲಾಗಿದೆ ಈತ ನಗರದಲ್ಲಿರುವ ಮೊಬೈಲ್ ಅಂಗಡಿಗಳ ಮಾಲೀಕರ ಗೆಳೆತನ ಮಾಡಿ ಅವರ ಅಂಗಡಿಗೆ ಕನ್ನ ಹಾಕುವ ಯೋಜನೆ ಮಾಡುತ್ತಿದ್ದ ಎನ್ನಲಾಗಿದೆ. ಕದ್ದ ಮಾಲುಗಳನ್ನು ಮುಂಬೈನಲ್ಲಿರುವ ಸಮೀರ್ ಅಹಮದ್ ಶೇಖ್ ಗೆ ಮಾರಾಟ ಮಾಡುತ್ತಿದ್ದು ಆ ಬಳಿಕ ಆತ ಅದನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಜೈಪುರ ಪೊಲೀಸರು ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next