Advertisement

ಪಾಕಿಸ್ಥಾನದ ಎಫ್-16 ಧ್ವಂಸ ; ಭಾರತದ ಪೈಲಟ್ ನಾಪತ್ತೆ

10:33 AM Feb 27, 2019 | Team Udayavani |

ಮಂಗಳವಾರ ಬಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ನಲ್ಲಿ ಪಾಕ್ ನೆಲದಲ್ಲಿದ್ದ ಜೈಶ್ ಉಗ್ರ ತರಬೇತಿ ಶಿಬಿರಗಳನ್ನು ನಾಶಪಡಿಸಿದ ಬಳಿಕ ಭಾರತ-ಪಾಕ್ ಗಡಿಯಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಬೆಳಿಗ್ಗೆ ಭಾರತದ ಯುದ್ಧ ವಿಮಾನವನ್ನು ನಾವು ಹೊಡೆದುರುಳಿಸಿದ್ದೇವೆ ಮತ್ತು ಅದರ ಪೈಲಟ್ ನಮ್ಮ ವಶದಲ್ಲಿದ್ದಾರೆ ಎಂಬ ಹೇಳಿಕೆಯನ್ನು ಪಾಕಿಸ್ಥಾನ ಸೇನೆ ಹೆಳಿಕೊಂಡಿತ್ತು. ಇತ್ತ ಭಾರತವು ಪಾಕ್ ನ ಎಫ್-16 ಯುದ್ಧ ವಿಮಾನವನ್ನು ನಾವು ಹೊಡೆದುರುಳಿಸುವುದಾಗಿ ಹೆಳಿಕೊಂಡಿತ್ತು. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಭಾರತೀಯ ವಿದೇಶಾಂಗ ಇಲಾಖೆಯು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಇಂದಿನ ಬೆಳವಣಿಗೆಗಳ ಕುರಿತಾದ ಮಾಹಿತಿಯನ್ನು ನೀಡಿದೆ. ವಿದೇಶಾಂಗ ಇಲಾಖೆ ಬಿಡುಗಡೆಗೊಳಿಸಿರುವ ಹೇಳಿಕೆ ಈ ರೀತಿಯಾಗಿದೆ:

Advertisement

‘ಬುಧವಾರ ಬೆಳಿಗ್ಗೆ ಭಾರತದ ವಾಯುಪ್ರದೇಶದೊಳಗೆ ಪ್ರವೇಶಿಸಿದ್ದ ಪಾಕಿಸ್ಥಾನದ ಯುದ್ಧ ವಿಮಾನ ಎಫ್-16ನ್ನು ನಮ್ಮ ವಾಯುಪಡೆಯ ಮಿಗ್-21 ವಿಮಾನಗಳು ಹೊಡೆದುರುಳಿಸಿದೆ. ಆದರೆ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ದುರದೃಷ್ಟವಶಾತ್ ನಮ್ಮ​​​​​​​ ಒಂದು​​​​​​​ ಮಿಗ್-21 ವಿಮಾನ ಪತನಗೊಂಡಿದೆ ಮತ್ತು ಅದರಲ್ಲಿದ್ದ ಪೈಲಟ್ ಕಾಣೆಯಾಗಿದ್ದಾರೆ. ಕಾಣೆಯಾಗಿರುವ ಭಾರತ ವಾಯುಪಡೆಯ ಪೈಲಟ್ ನಮ್ಮ ವಶದಲ್ಲಿದೆ ಎಂದು ಪಾಕಿಸ್ಥಾನವು ಹೆಳಿಕೊಳ್ಳುತ್ತಿದೆ, ಈ ವಿಚಾರವನ್ನು ನಾವು ಪರಾಮರ್ಶಿಸುತ್ತಿದ್ದೇವೆ’ ಎಂದು ವಿದೇಶಾಂಗ ಇಲಾಖೆ ಮಾಧ್ಯಮಕ್ಕೆ ನೀಡಿರುವ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.

ಈ ಮೂಲಕ ಪಾಕಿಸ್ಥಾನವು ಭಾರತದ ವಾಯುನೆಲೆಯೊಳಗೆ ಪ್ರವೆಶಿಸಿದ್ದು ನಿಜ ಮತ್ತು ಅದಕ್ಕೆ ನಮ್ಮ ವಾಯುಪಡೆಗಳು ದಿಟ್ಟ ಪ್ರತ್ಯುತ್ತರವನ್ನು ನೀಡಿರುವುದನ್ನು ಸರಕಾರವೇ ಖಚಿತಪಡಿಸಿದೆ. ಆದರೆ ಮಿಗ್-21ರ ಪೈಲಟ್ ನಾಪತ್ತೆಯಾಗಿರುವುದು ಮಾತ್ರ ಭಾರತದ ಪಾಲಿಗೆ ಆತಂಕದ ಸಂಗತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next