Advertisement

Chandrayaan-3; ಚಂದ್ರಯಾನ-3 ದಕ್ಷಿಣಾಯಣ- ಇಂದು(ಜು.14) ಮಧ್ಯಾಹ್ನ 2.35ಕ್ಕೆ ನಭಕ್ಕೆ

09:53 AM Jul 14, 2023 | Team Udayavani |

ಅಲ್‌ದ ಬೆಸ್ಟ್‌ ಇಸ್ರೋ
ಎಲ್ಲವೂ ಸಿದ್ಧಗೊಂಡಿದೆ. ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿಯೇ ಅದ್ವಿತೀಯ ಎಂದು ಬಣ್ಣಿಸಬಹುದಾದ ಚಂದ್ರಯಾನ-3 ಗಗನಕ್ಕೆ ತೆರಳಲು ಕ್ಷಣಗಣನೆ ಶುರುವಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿ ಇರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಎಲ್‌ವಿಎಂ3-ಎಂ4 (ಹಿಂದಿನ ಹೆಸರು ಜಿಎಸ್‌ಎಲ್‌ವಿ ಎಂಕೆ-2) ಮೂಲಕ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಚಂದ್ರಯಾನ 3ರ ಕನಸು ನನಸಾಗಲು ಕ್ಷಣಗಳನ್ನು ಕಾಯಲಾಗುತ್ತಿದೆ. ಈ ಬಾರಿ ಚಂದ್ರನ ದಕ್ಷಿಣ ಭಾಗದ ಅಧ್ಯಯನವೇ ಪ್ರಧಾನ ಉದ್ದೇಶವಾಗಲಿದೆ.

Advertisement

ನಮಗೂ ಹೆಗ್ಗಳಿಕೆ ಖಚಿತ
ಉದ್ದೇಶಿತ ಯಾನ ಯಶಸ್ವಿಯಾದರೆ ಚಂದ್ರನಲ್ಲಿ ತೆರಳಿದ ಆಯ್ದ 3 ರಾಷ್ಟ್ರಗಳಾಗಿರುವ ಹಿಂದಿನ ಸೋವಿ ಯತ್‌ ಒಕ್ಕೂಟ, ಅಮೆರಿಕ, ಚೀನಾದ ಬಳಿಕ ಭಾರತಕ್ಕೆ ಆ ಹೆಗ್ಗಳಿಕೆ ಸಿಗಲಿದೆ.

ದೇಶೀಯ ತಂತ್ರಜ್ಞಾನಕ್ಕೇ ಒತ್ತು
ದೇಶೀಯವಾಗಿಯೇ ನಿರ್ಮಿಸಲಾಗಿರುವ ಪ್ರೊಪಲ್ಶನ್‌ ಪೇಲೋಡ್‌, ಲ್ಯಾಂಡರ್‌ ವಿಕ್ರಂ ಮತ್ತು ರೋವರ್‌ ಪ್ರಗ್ಯಾನ್‌ ಅನ್ನು ಹೊತ್ತು ನಭಕ್ಕೆ ನೆಗೆಯಲಿದೆ. ಅದು ಆ.23ರ ವೇಳೆಗೆ ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಇಳಿಯಲಿದೆ. ಇದು 2019ರ ಚಂದ್ರಯಾನ2ರ ಮುಂದುವರಿದ ಭಾಗ.

ಪ್ರಾಧಾನ್ಯತೆ ಏನು?
● ಅದು ಚಂದ್ರನ ಭಾಗದ ಅತ್ಯಂತ ಕಠಿಣ ಪ್ರದೇಶ ಎಂಬ ಹೆಗ್ಗಳಿಕೆ.
● ಅದರ ಕೆಲವು ಪ್ರದೇಶಗಳಿಗೆ ಸೂರ್ಯನ ಬೆಳಕು ಪ್ರವೇಶ ಮಾಡುತ್ತಿಲ್ಲ.
● ಅಲ್ಲಿನ ತಾಪಮಾನ ಮೈನಸ್‌ 230 ಡಿಗ್ರಿ ಸೆಲ್ಸಿಯಸ್‌. ಈ ವಾತಾವರಣದಲ್ಲಿ ಇಲೆಕ್ಟ್ರಾನಿಕ್‌ ಉಪಕರಣಗಳನ್ನು ಕಾರ್ಯವೆಸಗುವಂತೆ ಮಾಡುವುದು ಸವಾಲಿನದ್ದೇ.

● ಅಲ್ಲಿ ಹಲವಾರು ಆಳದ ಕುಳಿಗಳು ಇವೆ. ಶಶಾಂಕನ ದಕ್ಷಿಣ ಭಾಗದಲ್ಲಿ ಇಳಿದರೆ ಮೊದಲ ಯಾನ ಎಂಬ ಹೆಗ್ಗಳಿಕೆ.

Advertisement

ಉದ್ದೇಶವೇನು?
● ಚಂದ್ರಯಾನ 1ರಲ್ಲಿ ಕಂಡುಕೊಂಡಿದ್ದ ಪ್ರಕಾರ ಅಲ್ಲಿನ ನೀರಿನ ಅಂಶಗಳು ಇವೆ. ಈ ಬಗ್ಗೆ ಹೆಚ್ಚಿನ ಅಧ್ಯಯನದ ಆಸಕ್ತಿ.
● ಖನಿಜಗಳು, ಮಣ್ಣಿನ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next