Advertisement

ಆಕಸ್ಮಿಕವಾಗಿ ಗಡಿ ದಾಟಿದ ಇಬ್ಬರು ಪಾಕಿಸ್ಥಾನಿ ಪ್ರಜೆಗಳ ಬಿಡುಗಡೆ

05:50 PM Apr 17, 2022 | Team Udayavani |

ನವದೆಹಲಿ: 2016 ಮತ್ತು 2018 ರಲ್ಲಿ ಪಂಜಾಬ್ ನಲ್ಲಿ ಆಕಸ್ಮಿಕವಾಗಿ ಭಾರತದ ಗಡಿಯನ್ನು ದಾಟಿದ ಇಬ್ಬರು ಪಾಕಿಸ್ಥಾನಿ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ.

Advertisement

ಸರ್ವರ್ ಬೇಗ್ ಮತ್ತು ಮೊಹಮ್ಮದ್ ಆಸಿಫ್ ಅವರ ಅವರ ದಾಖಲೆಗಳನ್ನು ಪರಿಶೀಲಿಸಿ ಮತ್ತು ಕಸ್ಟಮ್ ವಲಸೆಯನ್ನು ಪೂರ್ಣಗೊಳಿಸಿದ ನಂತರ ಪಾಕಿಸ್ಥಾನಕ್ಕೆ ವಾಪಸು ಕಳುಹಿಸಲಾಗಿದೆ ಎಂದು ಪ್ರೋಟೋಕಾಲ್ ಅಧಿಕಾರಿ ಅರುಣ್ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.

“ನಾನು ತಿಳಿಯದೆ ಗಡಿಯನ್ನು ದಾಟಿದ್ದೇನೆ. ನಾನು ನನ್ನ ಕುಟುಂಬಕ್ಕೆ ಹಿಂತಿರುಗುತ್ತಿದ್ದೇನೆ ಎಂದು ನನಗೆ ಸಂತೋಷವಾಗಿದೆ” ಎಂದು ಸರ್ವಾರ್ ಬೇಗ್ ಸುದ್ದಿ ಸಂಸ್ಥೆ ಎಎನ್ ಐ ಗೆ ತಿಳಿಸಿದ್ದಾರೆ.

ಗಡಿ ದಾಟಿ ನಾಲ್ಕು ವರ್ಷಗಳಾಗಿವೆ, ತಪ್ಪಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಮೊಹಮ್ಮದ್ ಆಸಿಫ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next