Advertisement
ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಾಪಿಕಾಡ್-ಉಳ್ಳಾಲ ಇಲ್ಲಿ ಗೇರು ಮೇಳ ಮತ್ತು ವಿಚಾರ ಸಂಕಿರಣ-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
Related Articles
Advertisement
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಹಿರಿಯ ವಿಜ್ಞಾನಿ ಡಾ| ಧನಂಜಯ ಬಿ., ಬಹ್ಮಾವರ ಕೃಷಿ ವಿ.ವಿ. ಪ್ರಾಂಶುಪಾಲ ಡಾ| ಕೆ.ವಿ. ಸುಧೀರ್ ಕಾಮತ್, ಕೆವಿಕೆ ಮುಖಸ್ಥ ರಮೇಶ್ ಟಿ.ಜೆ., ಮಂಗಳೂರು ಮೀನುಗಾರಿಕೆ ವಿ.ವಿ. ಡೀನ್ಡಾ| ಎಚ್. ಎಸ್. ಆಂಜನೇಯಪ್ಪ, ರೈತ ಸಂಘ ಗೌರವಾಧ್ಯಕ್ಷ ಧನಕೀರ್ತಿ ಬಲಿಪ, ಉಳ್ಳಾಲ ನಗರಸಭಾ ಸದಸ್ಯೆ ನಮಿತಾ ಗಟ್ಟಿ
ಉಪಸ್ಥಿತರಿದ್ದರು. ಸಮ್ಮಾನ
ಪ್ರಗತಿಪರ ಕೃಷಿ ಸಾಧಕರಾದ ದಯಾನಂದ ಭಟ್, ಪ್ರೇಮಾ ಹೆಗ್ಡೆ ಮಾಲಾಡಿ ಬೀಡು, ನಿರಂಜನ ಸೇಮಿತ ತೆಂಕಬೆಳ್ಳೂರು, ಸಿ. ಕೆ. ನವೀನ್ ಚಂದ್ರ ಐವರ್ ನಾಡು, ವಿಲ್ಮಾ ಪ್ರಿಯಾ ಅಲ್ಬು ಕರ್ಕ್ ಅಮಾrಡಿ ಅವರನ್ನು ಸಮ್ಮಾನಿಸಲಾಯಿತು. ವಿಚಾರ ಸಂಕಿರಣದಲ್ಲಿ ಕೀಟ ಶಾಸ್ತ್ರ ವಿಭಾಗದ ಡಾ| ರೇವಣ್ಣನವರ್, ಕೃಷಿ ವಿಭಾಗದ ಅಭಿಯಂತ ವಿ.ಆರ್. ವಿನೋದ್, ಮಣ್ಣು ವಿಜ್ಞಾನ ಕೃಷಿ ರಸಾಯನ ಶಾಸ್ತ್ರದ ಜಯಪ್ರಕಾಶ್, ತೋಟಗಾರಿಕಾ ಸಹಾಯಕ ಪ್ರಾಧ್ಯಾಪಕ ಡಾ| ಆರ್. ಚೈತನ್ಯ, ಬೇಸಾಯ ಶಾಸ್ತ್ರದ
ಡಾ| ಹರೀಶ್ ಶೆಣೈ, ಕೀಟಶಾಸ್ತ್ರದ ನಿಶ್ಮಿತಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಉಳ್ಳಾಲ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ| ಮಾರುತೇಶ್ ಎ. ಎಂ. ಸ್ವಾಗತಿಸಿದರು. ಬ್ರಹ್ಮಾವರ ವಲಯ ಕೃಷಿ ಸಂಶೋಧನ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ| ಲಕ್ಷ್ಮಣ ಪ್ರಸ್ತಾವನೆಗೈದರು. ಸಹಾಯಕ ಪ್ರಾಧ್ಯಾಪಿಕೆ ಡಾ| ಆರತಿ ಯಾದವಾಡ ವಂದಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಮನೆಗೊಂದು ಗೇರು ಗಿಡ
ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿ, ಗೇರು ಕೃಷಿಕರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ವ್ಯಾಪಕ ಕೆಲಸ ಆಗಬೇಕಾಗಿದೆ. ಗೇರು ಕೃಷಿಯಲ್ಲಿ ಎಲರೂ ತೊಡಗಿಸುವ ನಿಟ್ಟಿನಲ್ಲಿ ಮನೆಗೊಂದು ಗೇರು ಗಿಡ ಯೋಜನೆಯನ್ನು ರೂಪಿಸಬೇಕಾಗಿದೆ. ಗೇರು ಹಣ್ಣು ಕಿತ್ತಲೆ ಹಣ್ಣಿಗಿಂತ ಹೆಚ್ಚಿನ ಪೋಷಕಾಂಶ ಹೊಂದಿದೆ. ಮಕ್ಕಳ ಆರೋಗ್ಯವರ್ಧನೆಗೆ ತಾಯಂದಿರು ಗೇರು ಹಣ್ಣನ್ನು ತಿನ್ನಲು ನೀಡಬೇಕು ಎಂದರು.