Advertisement
ಇದರೊಂದಿಗೆ ಲೀಗ್ ಸ್ಪರ್ಧೆ ಮುಗಿದಂತಾಯಿತು. 12 ಪಂದ್ಯಗಳಲ್ಲಿ ಫಲಿತಾಂಶ ದಾಖಲಾದದ್ದು ಐದಕ್ಕೆ ಮಾತ್ರ. ಉಳಿದ 7 ಪಂದ್ಯಗಳಲ್ಲಿ ಟಾಸ್ ಕೂಡ ಹಾರಿಸಲಾಗಲಿಲ್ಲ.ಆದರೂ ನಾಕೌಟ್ ಸ್ಪರ್ಧೆಗಳಿಗೆ ವೇದಿಕೆ ಸಜ್ಜುಗೊಂಡಿದೆ. “ಎ” ವಿಭಾಗದಿಂದ ಭಾರತ, ಪಾಕಿಸ್ಥಾನ; “ಬಿ’ ವಿಭಾಗದಿಂದ ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ಉಪಾಂತ್ಯ ಪ್ರವೇಶಿವೆ. ಇಲ್ಲಿ ಭಾರತದ ಎದುರಾಳಿ ಶ್ರೀಲಂಕಾ. ಇನ್ನೊಂದು ಸೆಮಿಫೈನಲ್ ಪಾಕಿಸ್ಥಾನ-ಬಾಂಗ್ಲಾದೇಶ ನಡುವೆ ಸಾಗಲಿದೆ. ಲೀಗ್ ಹಂತದಲ್ಲಿ ಈ ನಾಲ್ಕೂ ತಂಡಗಳು ಒಂದೊಂದು ಗೆಲುವು ಸಾಧಿಸಿವೆ. ಉಳಿದೆರಡು ಪಂದ್ಯಗಳು ರದ್ದುಗೊಂಡಿವೆ.
“ಬಿ” ವಿಭಾಗದಲ್ಲೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಲಾ 4 ಅಂಕ ಗಳಿಸಿದವು. ರನ್‌ರೇಟ್‌ನಲ್ಲಿ ಬಾಂಗ್ಲಾ ಮುಂದಿತ್ತು (4.850). ಶ್ರೀಲಂಕಾಕ್ಕೆ ದ್ವಿತೀಯ ಸ್ಥಾನ ಲಭಿಸಿತು (0.090). ಕೂಟದಿಂದ ಹೊರಬಿದ್ದ ತಂಡಗಳೆಂದರೆ ನೇಪಾಲ, ಹಾಂಕಾಂಗ್, ಯುಎಇ ಮತ್ತು ಮಲೇಷ್ಯಾ. ಸೆಮಿಫೈನಲ್ ಪಂದ್ಯಗಳು ಸೋಮವಾರ ನಡೆಯಲಿವೆ.